Karnataka news paper

ಯುಗಾದಿ ಹಬ್ಬಕ್ಕೆ ಸ್ಟಾರ್ ವಾರ್: ಟಾಲಿವುಡ್‌ನಲ್ಲಿ ಮಹೇಶ್ ಬಾಬು ವರ್ಸಸ್ ಚಿರಂಜೀವಿ..?


‘ಆಚಾರ್ಯ’ ಬಿಡುಗಡೆ ಯಾವಾಗ?

‘ಆಚಾರ್ಯ’ ಚಿತ್ರದ ನೂತನ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಖಡಕ್ ಲುಕ್‌ನಲ್ಲಿ ಚಿರಂಜೀವಿ ನಡೆದುಕೊಂಡು ಬರುತ್ತಿರುವುದು ಪೋಸ್ಟರ್‌ನಲ್ಲಿದೆ. ಹಾಗೇ, ಸಿನಿಮಾದ ಹೊಸ ರಿಲೀಸ್ ಡೇಟ್‌ಅನ್ನೂ ಪೋಸ್ಟರ್‌ನಲ್ಲಿ ಹಾಕಲಾಗಿದೆ. ಪೋಸ್ಟರ್‌ನಲ್ಲಿರುವ ಪ್ರಕಾರ, ಏಪ್ರಿಲ್ 1 ರಂದು ‘ಆಚಾರ್ಯ’ ಚಿತ್ರ ಬಿಡುಗಡೆಯಾಗಲಿದೆ.

ಕೋವಿಡ್ ಕಂಟಕ: ಮತ್ತೆ ಮುಂದಕ್ಕೆ ಹೋದ ಚಿರಂಜೀವಿ ನಟನೆಯ ‘ಆಚಾರ್ಯ’ ಬಿಡುಗಡೆ ದಿನಾಂಕ

‘ಆಚಾರ್ಯ’ ಕುರಿತು

ಅಂದ್ಹಾಗೆ, ‘ಆಚಾರ್ಯ’ ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್, ಪೂಜಾ ಹೆಗ್ಡೆ, ಕಾಜಲ್ ಅಗರ್‌ವಾಲ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಮಣಿಶರ್ಮ ಸಂಗೀತ ನೀಡಿದ್ದಾರೆ.

‘ಸರ್ಕಾರು ವಾರಿ ಪಾಟ’ ಬಿಡುಗಡೆಯೂ ಆವಾಗಲೇ..!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಪರಶುರಾಮ್ ನಿರ್ದೇಶನದ ‘ಸರ್ಕಾರು ವಾರಿ ಪಾಟ’ ಚಿತ್ರ ಕೂಡ ಏಪ್ರಿಲ್ 1 ರಂದೇ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಚಿತ್ರತಂಡ ಅನೌನ್ಸ್ ಮಾಡಿತ್ತು. ಏಪ್ರಿಲ್ 2 ರಂದು ಯುಗಾದಿ ಹಬ್ಬವಿರುವ ಕಾರಣ.. ಅಂದೇ ಚಿತ್ರವನ್ನು ಬಿಡುಗಡೆ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿತ್ತು. ಹಾಗಾದ್ರೆ, ಏಪ್ರಿಲ್ 1 ರಂದು ‘ಸರ್ಕಾರು ವಾರಿ ಪಾಟ’ ಹಾಗೂ ‘ಆಚಾರ್ಯ’.. ಎರಡೂ ಚಿತ್ರಗಳು ಬಿಡುಗಡೆ ಆಗುತ್ವಾ? ಟಾಲಿವುಡ್‌ನಲ್ಲಿ ಬಿಗ್ ಸ್ಟಾರ್ ವಾರ್‌ಗೆ ಏಪ್ರಿಲ್ 1 ಸಾಕ್ಷಿಯಾಗುತ್ತಾ?

‘ಸರ್ಕಾರು ವಾರಿ ಪಾಟ’ದಲ್ಲಿ ಮಹೇಶ್‌ ಬಾಬು ಜೊತೆ ಕಾಣಿಸಿಕೊಳ್ಳಲಿದ್ದಾರೆ ಮತ್ತೋರ್ವ ನಟಿ!

ಅನಿಶ್ಚಿತತೆ ಕಾಡುತ್ತಿದೆ..!

ಕೋವಿಡ್‌ನಿಂದಾಗಿ ಸದ್ಯ ‘ಸರ್ಕಾರು ವಾರಿ ಪಾಟ’ ಚಿತ್ರತಂಡದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ‘’ಅನಿರೀಕ್ಷಿತ ಘಟನೆಗಳಿಂದ ಹಾಗೂ ತಂಡದ ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಕಾರಣ ‘ಸರ್ಕಾರು ವಾರಿ ಪಾಟ’ ಚಿತ್ರದ ಕುರಿತಾದ ಅಪ್‌ಡೇಟ್ಸ್‌ ಕೊಂಚ ತಡವಾಗಲಿದೆ. ಆದಷ್ಟು ಬೇಗ ಚಿತ್ರದ ಕುರಿತಾದ ಸಂಗತಿಗಳನ್ನು ಹಂಚಿಕೊಳ್ಳುತ್ತೇವೆ’’ ಎಂದು ಸಂಕ್ರಾಂತಿ ಹಬ್ಬದಂದು ‘ಸರ್ಕಾರು ವಾರಿ ಪಾಟ’ ಚಿತ್ರತಂಡ ಟ್ವೀಟ್ ಮಾಡಿತ್ತು. ಹೀಗಾಗಿ, ಏಪ್ರಿಲ್‌ 1 ರಂದೇ ‘ಸರ್ಕಾರು ವಾರಿ ಪಾಟ’ ಬಿಡುಗಡೆಯಾಗುತ್ತೋ ಇಲ್ವೋ ಎಂಬ ಅನುಮಾನ ಸದ್ಯ ಸಿನಿಪ್ರಿಯರಲ್ಲಿ ಕಾಡುತ್ತಿದೆ.

ಒಂದ್ವೇಳೆ, ಏಪ್ರಿಲ್ 1 ರಂದೇ ‘ಆಚಾರ್ಯ’ ಮತ್ತು ‘ಸರ್ಕಾರು ವಾರಿ ಪಾಟ’ ಬಿಡುಗಡೆಯಾದರೆ.. ಸ್ಟಾರ್ ವಾರ್‌ನಿಂದಾಗಿ ತೆಲುಗು ಬಾಕ್ಸ್ ಆಫೀಸ್ ಉಡೀಸ್ ಆಗುವುದು ಪಕ್ಕಾ..!

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’



Read more

[wpas_products keywords=”deal of the day party wear dress for women stylish indian”]