Karnataka news paper

ಕೊರೋನಾದಿಂದ ಚೇತರಿಕೆ: ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟ ಅರ್ಪಿಸಿ ಹರಕೆ ತೀರಿಸಿದ ಭಕ್ತ


Online Desk

ಕೇರಳ: ಆಂಧ್ರಪ್ರದೇಶದ ಭಕ್ತರೊಬ್ಬರು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನು ನೀಡಿದ ಘಟನೆಯೊಂದು ನಡೆದಿದೆ.

ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರ ಹೊದಿಕೆಯ ಚಿನ್ನದ ಕಿರೀಟ ನೀಡಿದ ವ್ಯಕ್ತಿ.ಕೇರಳ ಹೈಕೋರ್ಟ್ ವಕೀಲರೊಬ್ಬರ ನೆರವಿನೊಂದಿಗೆ ಶುಕ್ರವಾರ ಕಿರೀಟವನ್ನು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಿಗೆ ಹಸ್ತಾಂತರಿಸಲಾಯಿತು.

ವೆಂಕಟಸುಬ್ಬಯ್ಯ ಅವರು ಕಳೆದ ವರ್ಷ ಕರೋನಾ ಸೋಂಕಿನಿಂದ ಚೇತರಿಸಿಕೊಂಡಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನ ನೀಡುವುದಾಗಿ ಅರಕೆ ಹೊತ್ತಿದ್ದರು. ಅದೇ ರೀತಿಯಾಗಿ ಆ ಅರಕೆಯ ಭಾಗವಾಗಿ ಚಿನ್ನದ ಕಿರೀಟವನ್ನ ದೇವಾಲಯಕ್ಕ ಹಸ್ತಾಂತರಿಸಿದ್ದಾರೆ. ಸದ್ಯ ಕಿರೀಟದ ಬೆಲೆ ಎಷ್ಟು ಎಂಬುದು ತಿಳಿದುಬಂದಿಲ್ಲ.
 



Read more

[wpas_products keywords=”deal of the day”]