Karnataka news paper

10ನೇ ಶತಮಾನದ ಯೋಗಿನಿ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆ, ಭಾರತಕ್ಕೆ ಹಸ್ತಾಂತರ


ಲಂಡನ್: ಭಾರತದಿಂದ ಕಾಣೆಯಾಗಿದ್ದ 10ನೇ ಶತಮಾನದ ಬೆಲೆಬಾಳುವ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಮಕರ ಸಂಕ್ರಾಂತಿಯ ಹಬ್ಬದಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

40 ವರ್ಷಗಳ ಹಿಂದೆ ಉತ್ತರ ಪ್ರದೇಶದ ಲೋಖಾರಿ ದೇವಸ್ಥಾನದಿಂದ ಕಾಣೆಯಾಗಿದ್ದ ಮೇಕೆ ಮುಖದ ಯೋಗಿನಿ ವಿಗ್ರಹವು ಇಂಗ್ಲೆಂಡ್‌ನ ಉದ್ಯಾನದಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: 

 

 

 

ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್‌ ಗಾಯತ್ರಿ ಇಸ್ಸಾರ್ ಕುಮಾರ್ ಅವರಿಗೆ ಯೋಗಿನಿ ವಿಗ್ರಹವನ್ನು ಆರ್ಟ್ ರಿಕವರಿ ಇಂಟರ್‌ನ್ಯಾಷನಲ್‌ನ ಕ್ರಿಸ್ ಮರಿನೆಲ್ಲೊ ಹಸ್ತಾಂತರಿಸಿದರು.

 

ಭುದೆಲ್‌ಖಂಡದ ಬಂದಾ ಜಲ್ಲೆಯ ಲೋಖಾರಿ ದೇವಸ್ಥಾನದ ಯೋಗಿನಿ ವಿಗ್ರಹವನ್ನು ನವದೆಹಲಿಯರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

 

 

 

ಯೋಗಿನಿ ತಂತ್ರ ಪೂಜಾ ಆರಾಧನೆಗೆ ಸಂಬಂಧಿಸಿದ ಶಕ್ತಿಶಾಲಿ ಸ್ತ್ರೀ ದೇವತೆಗಳ ಪಂಗಡವಾಗಿದೆ. 64 ಯೋಗಿನಿಯರ ಈ ದೇವತೆಗಳನ್ನು ಗುಂಪಾಗಿ ಆರಾಧಿಸಲಾಗುತ್ತದೆ ಮತ್ತು ಅನಂತ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

 

1980ರ ದಶಕದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದ ದೇವಸ್ಥಾನದಿಂದ ಈ ಅಪರೂಪದ ವಿಗ್ರಹ ಕಾಣೆಯಾಗಿತ್ತು. 2021 ಅಕ್ಟೋಬರ್‌ನಲ್ಲಿ ವಿಗ್ರಹ ಪತ್ತೆಯಾದ ಕುರಿತು ಮಾಹಿತಿ ಲಭಿಸಿತ್ತು. ಬಳಿಕ ಭಾರತಕ್ಕೆ ತರುವ ನಿಟ್ಟಿನಲ್ಲಿ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಕ್ರಿಸ್ ಮರಿನೆಲ್ಲೊ ವಿಗ್ರಹ ಭಾರತಕ್ಕೆ ಹಸ್ತಾಂತರಿಸುವಲ್ಲಿ ನೆರವಾಗಿದ್ದಾರೆ.

 

 



Read more from source

[wpas_products keywords=”deals of the day offer today electronic”]