ಹೈಲೈಟ್ಸ್:
- ಎಲ್ಲ ಆರೋಪಗಳಿಂದ ಬಿಷಪ್ ಫ್ರಾಂಕೋ ಮುಲಕ್ಕಲ್ ಖುಲಾಸೆ
- ಕೇರಳದ ಕೊಟ್ಟಾಯಂ ವಿಚಾರಣಾ ನ್ಯಾಯಾಲಯದಿಂದ ತೀರ್ಪು ಪ್ರಕಟ
- 2 ವರ್ಷ 13 ಬಾರಿ ಅತ್ಯಾಚಾರ ನಡೆಸಿದ್ದಾಗಿ ಕ್ರೈಸ್ತ ಸನ್ಯಾಸಿನಿ ಆರೋಪ
- ಪ್ರತಿಭಟನೆ ಬಳಿಕ 2018ರಲ್ಲಿ ಬಂಧನಕ್ಕೆ ಒಳಗಾಗಿದ್ದ ಮುಲಕ್ಕಲ್
ತನಿಖೆ ಹಾಗೂ ವಿಚಾರಣೆ ವೇಳೆ ಮುಲಕ್ಕಲ್ ಅವರು ಪೊಲೀಸರು ಮತ್ತು ನ್ಯಾಯಾಲಯಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಅತ್ಯಾಚಾರ, ಅಪರಾಧ ಬೆದರಿಕೆ ಮತ್ತು ಬಲವಂತದ ಬಂಧನ ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಲಾಗಿತ್ತು.
ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧದ ಅತ್ಯಾಚಾರ ಆರೋಪ ಕೈಬಿಡಲು ಸುಪ್ರೀಂ ನಕಾರ
100 ದಿನಕ್ಕೂ ಹೆಚ್ಚು ದಿನಗಳ ಕಾಲ ನಡೆದಿದ್ದ ವಿಚಾರಣೆಯ ಬಳಿಕ ಕೊಟ್ಟಾಯಂನ ನ್ಯಾಯಾಲಯ ಎಲ್ಲ ಆರೋಪಗಳಿಂದಲೂ ಫ್ರಾಂಕೋ ಮುಲಕ್ಕಲ್ (Franco Mulakkal) ಅವರನ್ನು ಖುಲಾಸೆಗೊಳಿಸಿದೆ. ಜಲಂಧರ್‌ನಲ್ಲಿ ಬಿಷಪ್ ಆಗಿದ್ದ ಮುಲಕ್ಕಲ್ ವಿರುದ್ಧ 2018ರಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು.
ದೂರು ದಾಖಲಾದ ಸುಮಾರು ಒಂದು ವರ್ಷದ ಬಳಿಕ, ಕ್ರೈಸ್ತ ಸನ್ಯಾಸಿನಿಯರ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಫ್ರಾಂಕೋ ಅವರನ್ನು ಅತ್ಯಾಚಾರ, ಅಕ್ರಮ ಬಂಧನ ಹಾಗೂ ಅಪರಾಧ ಬೆದರಿಕೆ ಮುಂತಾದ ಆರೋಪಗಳ ಅಡಿ ಬಂಧಿಸಲಾಗಿತ್ತು. ಮುಲಕ್ಕಲ್ ಅವರ ಬಂಧನಕ್ಕಾಗಿ ಆಗ್ರಹಿಸಿ ಕ್ರೈಸ್ತ ಸನ್ಯಾಸಿನಿಯರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದರು. ಚರ್ಚ್, ಪೊಲೀಸರು ಹಾಗೂ ಸರ್ಕಾರದಿಂದ ಕ್ರಮಕ್ಕೆ ಒತ್ತಾಯಿಸಿದ್ದರು.
ಮೂರು ದಿನಗಳ ವಿಚಾರಣೆ ಬಳಿಕ ಮುಲಕ್ಕಲ್ ಅವರನ್ನು ಬಂಧಿಸಲಾಗಿತ್ತು. ಈಗ ಅವರನ್ನು ಆರೋಪ ಮುಕ್ತಗೊಳಿಸಿರುವ ನ್ಯಾಯಾಲಯದ ತೀರ್ಪಿನ ಬಗ್ಗೆ ಕೊಟ್ಟಾಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್. ಹರಿ ಶಂಕರ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಮುಲಕ್ಕಲ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದವು. ಯಾವುದೇ ಸಾಕ್ಷಿದಾರ ವಿರುದ್ಧ ಹೇಳಿಕೆ ನೀಡಿರಲಿಲ್ಲ. ಆದರೂ ಕೋರ್ಟ್ ಅವರನ್ನು ಖುಲಾಸೆಗೊಳಿಸಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
Video: ಕೇರಳದ ಮಾಜಿ ಬಿಷಪ್ ಫ್ರಾಂಕೊ ಮುಳಕ್ಕಳ್ ನನಗೆ ಕಿಸ್ ಮಾಡಲು ಯತ್ನಿಸಿದ್ದ ಎಂದು ಆರೋಪಿಸಿದ ಮತ್ತೊಬ್ಬ ಸನ್ಯಾಸಿನಿ
‘ದೇವರನ್ನು ಸ್ತುತಿಸಿ’ ಎಂದು ತೀರ್ಪಿನ ಬಳಿಕ ಕೋರ್ಟ್ ಆವರಣದಿಂದ ನಿರ್ಗಮಿಸುವ ಮುನ್ನ ಮುಲಕ್ಕಲ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ತೀರ್ಪು ಪ್ರಕಟವಾದ ಬಳಿಕ ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಅವರು, ತಮ್ಮ ವಕೀಲರನ್ನು ಅಪ್ಪಿಕೊಂಡು ಧನ್ಯವಾದ ಸಲ್ಲಿಸಿದರು.
ಕೊಟ್ಟಾಯಂ ಜಿಲ್ಲೆಯ ಮಿಷನ್ ಹೌಸ್‌ನಲ್ಲಿ 2014ರ ಮೇ 5ರಿಂದ ಎರಡು ವರ್ಷಗಳ ಅವಧಿಯಲ್ಲಿ 13 ಬಾರಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಮುಲಕ್ಕಲ್ ಅವರನ್ನು ಬಂಧಿಸಿ 25 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗಿತ್ತು. ಈ ಆರೋಪವನ್ನು ನಿರಾಕರಿಸಿದ್ದ ಮುಲಕ್ಕಲ್, ಇದು ಕಟ್ಟು ಕಥೆ ಎಂದು ವಾದಿಸಿದ್ದರು.
Read more
[wpas_products keywords=”deal of the day sale today offer all”]