ಹೈಲೈಟ್ಸ್:
- ಅಮ್ಮಮ್ಮ ರತ್ನಮಾಲಾ ಅವರಿಗೆ ಏನೂ ಆಗಿಲ್ಲ
- ಅಮ್ಮಮ್ಮ ರತ್ನಮಾಲಾ ಅವರ ಆರೋಗ್ಯ ಸ್ಥಿರವಾಗಿದೆ
- ರತ್ಮಮಾಲಾ ಅರೋಗ್ಯವಾಗಿರುವುದನ್ನು ಕಂಡು ವೀಕ್ಷಕರು ಖುಷಿಯಾಗಿದ್ದಾರೆ
ಅಮ್ಮಮ್ಮನಿಗೆ ಏನೂ ಆಗಿಲ್ಲ!
ಹರ್ಷ ಬಂದಾಗ ಅಮ್ಮಮ್ಮ ಹಾಸಿಗೆ ಮೇಲೆ ಮಲಗಿರುವುದು.. ಹರ್ಷ ಎಷ್ಟೇ ಎಬ್ಬಿಸಲು ಪ್ರಯತ್ನಿಸಿದರೂ ಅಮ್ಮಮ್ಮ ಎದ್ದೇಳದೇ ಇರುವುದು.. ಹರ್ಷ ಗಾಬರಿಯಿಂದ ಅಳುವ ಸನ್ನಿವೇಶಗಳನ್ನು ಪ್ರೋಮೋದಲ್ಲಿ ಹಾಗೂ ಸಂಚಿಕೆಯಲ್ಲಿ ತೋರಿಸಲಾಗಿತ್ತು. ಅದನ್ನ ಕಂಡ ವೀಕ್ಷಕರು ಅಕ್ಷರಶಃ ಶಾಕ್ ಆಗಿದ್ದರು. ಕಾಯಿಲೆಯಿಂದ ಬಳಲುತ್ತಿರುವ ರತ್ನಮಾಲಾ ಅವರಿಗೆ ಪ್ರಾಣಾಪಾಯ ಉಂಟಾಯ್ತಾ ಅಂತೆಲ್ಲಾ ವೀಕ್ಷಕರು ಟೆನ್ಷನ್ ಮಾಡಿಕೊಂಡಿದ್ದರು.
ಅಮ್ಮಮ್ಮ ರತ್ನಮಾಲಾಗೆ ಏನಾಯ್ತು? ‘ಕನ್ನಡತಿ’ ವೀಕ್ಷಕರಿಗೆಲ್ಲಾ ಆತಂಕ..!
ಆದ್ರೀಗ, ಅಮ್ಮಮ್ಮನ ಆರೋಗ್ಯ ಸ್ಥಿರವಾಗಿರುವುದು ಖಚಿತವಾಗಿದೆ. ಇದೀಗ ಬಿಡುಗಡೆಯಾಗಿರುವ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಹರ್ಷನ ಜೊತೆ ಅಮ್ಮಮ್ಮ ಮಾತನಾಡುತ್ತಿರುವ ದೃಶ್ಯವಿದೆ. ಪ್ರೋಮೋದಲ್ಲಿ ಅಮ್ಮಮ್ಮ ರತ್ನಮಾಲಾ ಎದ್ದು ಕೂತಿರುವುದು, ಹರ್ಷ ಹಾಗೂ ಅಮ್ಮಮ್ಮ ಮಾತುಕತೆ ನಡೆಸುತ್ತಿರುವುದನ್ನ ಕಂಡ ವೀಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ, ಧಾರಾವಾಹಿಯ ಕೊನೆಯವರೆಗೂ ಅಮ್ಮಮ್ಮ ಇರಬೇಕು ಅಂತ ವೀಕ್ಷಕರು ಒತ್ತಾಯಿಸಿದ್ದಾರೆ.
‘ಕನ್ನಡತಿ’ ವೀಕ್ಷಕರಿಗೆ ‘ಈ’ ಖುಷಿ ತಡೆಯೋಕೆ ಆಗಲ್ಲ!
ದೇವಸ್ಥಾನಕ್ಕೆ ಹೋಗಲು ಹರ್ಷ ಸಮ್ಮತಿ
ದೇವಸ್ಥಾನವೊಂದಕ್ಕೆ ಹೋಗಿ ಹರ್ಷ ಪೂಜೆ ಸಲ್ಲಿಸಬೇಕೆಂದು ಜ್ಯೋತಿಷಿಯೊಬ್ಬರು ಹೇಳಿರುತ್ತಾರೆ. ಅದರಂತೆ ದೇವಸ್ಥಾನಕ್ಕೆ ಹೋಗುವಂತೆ ಹರ್ಷನ ಬಳಿ ಅಮ್ಮಮ್ಮ ಸೂಚಿಸುತ್ತಾರೆ. ಆದರೆ, ಅದಕ್ಕೆ ಮೊದಲು ಹರ್ಷ ಒಪ್ಪಿಕೊಳ್ಳುವುದಿಲ್ಲ. ಬಳಿಕ ಅಮ್ಮಮ್ಮ ನಿದ್ರೆಯಿಂದ ಎಚ್ಚರಗೊಳ್ಳದೇ ಇರುವುದನ್ನು ಕಂಡು ಹರ್ಷ ಗಾಬರಿಗೊಳ್ಳುತ್ತಾರೆ. ಅಮ್ಮಮ್ಮ ಆರೋಗ್ಯವಾಗಿದ್ದಾರೆ ಎಂದು ತಿಳಿದ ಬಳಿಕ ದೇವಸ್ಥಾನಕ್ಕೆ ಹೋಗಲು ಹರ್ಷ ಸಮ್ಮತಿ ನೀಡುತ್ತಾರೆ.
ಮನಸ್ಸಿನಲ್ಲಿ ಬಚ್ಚಿಟ್ಟಿದ್ದ ಮಾತನ್ನು ಹರ್ಷನ ಮುಂದೆ ಹೇಳಿಬಿಟ್ರಾ ಭುವಿ? ವೀಕ್ಷಕರ ಕನವರಿಕೆ ಒಂದೇ..!
ಮನದೊಡತಿ ಭುವನೇಶ್ವರಿ ಜೊತೆಗೆ ದೇವಸ್ಥಾನಕ್ಕೆ ಹೋಗುವುದು ಹರ್ಷನ ಬಯಕೆ. ಅದಕ್ಕೆ ರತ್ನಮಾಲಾ ಸಮ್ಮತಿ ಕೊಟ್ಟಾಗಿದೆ. ಹಾಗಾದ್ರೆ, ದೇವಸ್ಥಾನಕ್ಕೆ ಹರ್ಷ ಯಾವಾಗ ಹೋಗಬಹುದು? ದೇವಸ್ಥಾನದಲ್ಲಿ ಹರ್ಷ ಹಾಗೂ ಭುವನೇಶ್ವರಿ (ಸೌಪರ್ಣಿಕ)ಯನ್ನ ಸಾನಿಯಾ ನೋಡುತ್ತಾರಾ? ಸಾನಿಯಾ ಇನ್ನೂ ಏನೆಲ್ಲಾ ಕುತಂತ್ರ ಮಾಡಬಹುದು ಎಂಬುದೇ ಸದ್ಯ ವೀಕ್ಷಕರ ಕುತೂಹಲವಾಗಿದೆ.
ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ (ಭುವಿ/ ಸೌಪರ್ಣಿಕ) ಆಗಿ ರಂಜನಿ ರಾಘವನ್, ಮಾಲಾ ಕೆಫೆ ಮುಖ್ಯಸ್ಥ ಹರ್ಷ ಕುಮಾರ್ ಆಗಿ ಕಿರಣ್ ರಾಜ್, ರತ್ಮಮಾಲಾ ಆಗಿ ಚಿತ್ಕಳಾ ಬಿರಾದಾರ, ಸಾನಿಯಾ ಆಗಿ ಆರೋಹಿ ನೈನಾ, ವರೂಧಿನಿಯಾಗಿ ಸಾರಾ ಅಣ್ಣಯ್ಯ ಅಭಿನಯಿಸುತ್ತಿದ್ದಾರೆ. ಯಶವಂತ್ ಪಾಂಡು ನಿರ್ದೇಶನ ಮಾಡುತ್ತಿದ್ದಾರೆ.
Read more
[wpas_products keywords=”deal of the day sale today offer all”]