ಹೈಲೈಟ್ಸ್:
- ಕ್ರಿಪ್ಟೋ ಹೂಡಿಕೆಯು ವ್ಯಾಪಾರ ಆದಾಯವೇ ಎಂಬುದನ್ನು ನಿರ್ಧರಿಸಲಿದೆ ಕೇಂದ್ರ ಬಜೆಟ್
- ಈ ಕುರಿತು ಹಿರಿಯ ತೆರಿಗೆ ಸಲಹೆಗಾರರಿಂದ ಅಭಿಪ್ರಾಯ ಕೇಳಿರುವ ಕೇಂದ್ರ ಸರಕಾರ
- ಕ್ರಿಪ್ಟೋ ಆದಾಯವನ್ನು ಉದ್ಯಮ ಆದಾಯ ಎಂದು ಪರಿಗಣಿಸಿದ್ದೇ ಆದಲ್ಲಿ ತೆರಿಗೆ ಹೊರೆ ಹೆಚ್ಚಳ
ಒಂದು ವೇಳೆ ಕ್ರಿಪ್ಟೋ ಆದಾಯವನ್ನು ಉದ್ಯಮ ಆದಾಯ ಎಂದು ಪರಿಗಣಿಸಿದ್ದೇ ಆದಲ್ಲಿ, ಕ್ರಿಪ್ಟೋ ಹೂಡಿಕೆದಾರರ ತೆರಿಗೆ ಹೊರೆ ಗಣನೀಯ ಹೆಚ್ಚಳವಾಗಲಿದೆ. ಮುಂದಿನ ಬಜೆಟ್‌ನಲ್ಲಿ ಕ್ರಿಪ್ಟೋ ಸ್ವತ್ತುಗಳಿಗೆ ನಿರ್ದಿಷ್ಟವಾಗಿ ಆದಾಯ ಮತ್ತು ಲಾಭಗಳ ವ್ಯಾಖ್ಯಾನವನ್ನು ಅಂತಮಗೊಳಿಸಲು ಸರ್ಕಾರವು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದರರ್ಥ ಹೂಡಿಕೆದಾರರು ಅಥವಾ ವ್ಯಾಪಾರಿಗಳಿಗೆ ಕ್ರಿಪ್ಟೋ ಆದಾಯದ ಮೇಲಿನ ಆದಾಯ ತೆರಿಗೆಯು ಶೇ.35 ರಿಂದ ಶೇ.42 ವರೆಗೆ ಇರಲಿದೆ.
ಕ್ರಿಪ್ಟೋ ಸ್ವತ್ತುಗಳ ಮೇಲೆ ಮಾತ್ರ ಪರಿಣಾಮ ಬೀರುವ ತೆರಿಗೆ ಬದಲಾವಣೆಗಳ ಕುರಿತು ಸರಕಾರವು ಹಿರಿಯ ತೆರಿಗೆ ಸಲಹೆಗಾರರ ಅಭಿಪ್ರಾಯ ಕೇಳಿದೆ. ಆದರೆ ಈಕ್ವಿಟಿಗಳಂತಹ ಯಾವುದೇ ಆಸ್ತಿ ವರ್ಗದಲ್ಲಿ ಬದಲಾವಣೆಯಾಗದು.
“ಕ್ರಿಪ್ಟೋ ಆದಾಯದ ವ್ಯಾಖ್ಯಾನವನ್ನು ತೆರಿಗೆ ಚೌಕಟ್ಟಿನಲ್ಲಿ ಬದಲಾಯಿಸಿದರೆ ಅದು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮತ್ತು ವ್ಯಾಪಾರದಿಂದ ಬರುವ ಯಾವುದೇ ಲಾಭಗಳ ಮೇಲೆ ಆದಾಯ ತೆರಿಗೆ ವಿಧಿಸಲು ತೆರಿಗೆ ಇಲಾಖೆಗೆ ಅವಕಾಶ ನೀಡುತ್ತದೆ. ಕ್ರಿಪ್ಟೋಕರೆನ್ಸಿಗಳ ವಿಷಯದಲ್ಲಿ ತೆರಿಗೆಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟತೆಯ ಅಗತ್ಯವಿದೆ. ಕ್ರಿಪ್ಟೋ ಕರೆನ್ಸಿಗಳನ್ನು ಆಸ್ತಿಯಾಗಿ ಪರಿಗಣಿಸುವ ಕಾನೂನು ಚೌಕಟ್ಟು ಇಲ್ಲ” ಎಂದು ತೆರಿಗೆ ಸಲಹಾ ಸಂಸ್ಥೆ “ಧ್ರುವ ಅಡ್ವೈಸರ್ಸ್”ನ ಸಿಇಒ ದಿನೇಶ್ ಕಣಬರ್ ತಿಳಿಸಿದರು.
ಕ್ರಿಪ್ಟೋ ಹೂಡಿಕೆದಾರ ಆದಾಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಸರ್ಕಾರವು ಎದುರುನೋಡುತ್ತಿದೆ. ಅಂದರೆ, ಒಂದು ವರ್ಷದಲ್ಲಿ ಭಾರತೀಯ ಗ್ರಾಹಕರು ತಮ್ಮ ಕ್ರಿಪ್ಟೋಕರೆನ್ಸಿಗಳನ್ನು ಭೌತಿಕ ಕರೆನ್ಸಿ ಅಥವಾ ಭಾರತೀಯ ರೂಪಾಯಿಗೆ ಪರಿವರ್ತಿಸದೆ ಇತರೆ ಕ್ರಿಪ್ಟೋ ಸ್ವತ್ತುಗಳಿಗೆ ವ್ಯಾಪಾರ ಮಾಡಿದರೂ ಕೂಡ ತೆರಿಗೆ ಪಾವತಿಸಬೇಕಾಗಬಹುದು.
“ಯಾವುದೇ ಸ್ವತ್ತಿನ ಪಾವತಿ, ಅಥವಾ ಇನ್ನೊಂದು ಕ್ರಿಪ್ಟೋ ಆಸ್ತಿಯನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ಮಾಡಿದರೂ, ಅದು ಸ್ವೀಕರಿಸುವವರ ಕೈಯಲ್ಲಿ ಇನ್ನೂ ಆದಾಯವಾದ ಮೂಲವಾಗಿಯೇ ಇರುತ್ತದೆ. ಕ್ರಿಪ್ಟೋಕರೆನ್ಸಿಯು ಭಾರತೀಯ ರೂಪಾಯಿಯಲ್ಲಿ ಆಧಾರವಾಗಿರುವ ಮೌಲ್ಯವನ್ನು ಹೊಂದಿರುವುದರಿಂದ, ಅದನ್ನು ಆದಾಯ ಎಂದೇ ಪರಿಗಣಿಸಿ ತೆರಿಗೆ ವಿಧಿಸಬೇಕು” ಎಂದು EY ಇಂಡಿಯಾದ ರಾಷ್ಟ್ರೀಯ ನಾಯಕ-ತೆರಿಗೆ ಸುಧೀರ್ ಕಪಾಡಿಯಾ ಹೇಳಿದ್ದಾರೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
Read more…
[wpas_products keywords=”deal of the day”]