Karnataka news paper

ದಿ ಗ್ರೇಟ್ ಪ್ರಿಸನ್ ಕಿಚನ್: ಕೈದಿಗಳಿಗೆ ಅಡುಗೆ ತರಬೇತಿ: ಕೇರಳ ಕಾರಾಗೃಹ ಮೊದಲ ಹೆಜ್ಜೆ


The New Indian Express

ತಿರುವನಂತಪುರಂ: ಕೇರಳದ ನೆಟ್ಟುಕಲ್ತೇರಿ ಕಾರಾಗೃಹದ ಕೈದಿಗಳ ಸಿಲಬಸ್ ಗೆ ಹೊಸ ಕೋರ್ಸ್ ಪ್ರಾರಂಭವಾಗಿದೆ. ಇದುವರೆಗೂ ಕೈದಿಗಳು ಪೀಠೋಪಕರಣ ತಯಾರಿ, ಕರಕುಶಲ ವಸ್ತು ತಯಾರಿಕೆ ಹೀಗೆ ಉದ್ಯೋಗ ಕೌಶಲಪೂರ್ಣ ತರಬೇತಿ ನೀಡಲಾಗುತ್ತಿತ್ತು.

ಇದನ್ನೂ ಓದಿ: ಕೃಷಿ ಕ್ಷೇತ್ರದತ್ತ ಎಂಬಿಎ ಪದವೀಧರೆ ಒಲವು; ಕುರಿ ಸಾಕಣೆ, ಸಾವಯವ ಹಣ್ಣುಗಳ ಮಾರಾಟ

ಇದೀಗ ಅಡುಗೆ ತರಬೇತಿ ಕೋರ್ಸನ್ನು ಕಾರಾಗೃಹ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯ ಎನ್ನುವ ಎನ್ ಜಿ ಒ ಸಂಘಟನೆ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ. 

ಇದನ್ನೂ ಓದಿ: ಮಕ್ಕಳ ಪಾಲನೆ ಬಗ್ಗೆ ಗುಜರಾತ್ ಐಪಿಎಸ್ ಅಧಿಕಾರಿಯಿಂದ ಪೋಷಕರಿಗೆ ‘ಪೇರೆಂಟಿಂಗ್ ಫಾರ್ ಪೀಸ್’ ಉಚಿತ ತರಬೇತಿ

ಇತ್ತೀಚಿಗಷ್ಟೆ ಈ ತರಬೇತಿ ಕಾರ್ಯಾಗಾರವನ್ನು ಸೆಲಬ್ರಿಟಿ ಬಾಣಸಿಗ ಸುರೇಶ್ ಪಿಳ್ಳೈ ಅವರು ಉದ್ಘಾಟಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿಯೇ ಅವರು ೫೦ ಮಂದಿ ಕೈಇಗಳಿಗೆ ಅಡುಗೆ ತರಬೇತಿ ನೀಡಿದ್ದರು. 

ಇದನ್ನೂ ಓದಿ: ಒಡಿಶಾ ನ್ಯಾಷನಲ್ ಪಾರ್ಕಿನಲ್ಲಿ ಹೊಸ ಬಿಳಿ ಮೊಸಳೆ ಮರಿ ಪತ್ತೆ: ಶ್ವೇತಾ ಎಂದು ನಾಮಕರಣ

ಜೈಲಿನಿಂದ ಬಿಡುಗಡೆಯಾದ ನಂತರ ಹಲವು ಕೈದಿಗಳು ತಾವು ಕುಟುಂಬಕ್ಕೆ ಭಾರ ಎನ್ನುವ ಅನುಭವಕ್ಕೆ ತುತ್ತಾಗಿದ್ದರು. ಇದನ್ನು ಮನಗಂಡು ಎನ್ ಜಿ ಒ ಈ ತರಬೇತಿ ಹಮ್ಮಿಕೊಂಡಿದೆ. ಪ್ರತಿಭಾವಂತ ಬಾಣಸಿಗರಿಗೆ ಆಹಾರೋದ್ಯಮದಲ್ಲಿ ಬೇಡಿಕೆ ಇದೆ ಮತ್ತು ಹೆಚ್ಚಿನ ಸಂಪಾದನೆಯನ್ನೂ ಮಾಡಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ. 

ಇದನ್ನೂ ಓದಿ: ಕೇರಳ ಮೂಲದ ಟ್ಯಾಕ್ಸಿ ಚಾಲಕನಿಗೆ 50 ಕೋಟಿ ರೂ. ಅಬು ಧಾಬಿ ಬಂಪರ್ ಲಾಟರಿ



Read more

[wpas_products keywords=”deal of the day”]