ಹೈಲೈಟ್ಸ್:
- ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ದಾಲುಪುರ ಗ್ರಾಮದಲ್ಲಿ ಘಟನೆ ವರದಿ
- ಕೋತಿಗೆ ಹಿಂದೂ ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ
- ಅಂತ್ಯಸಂಸ್ಕಾರದ ಬಳಿಕ ನಡೆದ ತಿಥಿಯೂಟದಲ್ಲಿ 1,500 ಮಂದಿ ಭಾಗಿ
- ಮನುಷ್ಯರ ಅಂತ್ಯಸಂಸ್ಕಾರಕ್ಕೇ ಗರಿಷ್ಠ 50 ಮಂದಿ ಭಾಗವಹಿಸಲು ಅವಕಾಶ
- ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲು, ಇಬ್ಬರ ಬಂಧನ
ರಾಜಗಡ ಜಿಲ್ಲೆಯ ದಾಲುಪುರ ಎಂಬ ಗ್ರಾಮದಲ್ಲಿ ಡಿಸೆಂಬರ್ 29ರಂದು ಕೋತಿಯೊಂದು ಮೃತಪಟ್ಟಿತ್ತು. ಆಂಜನೇಯನ ಸ್ವರೂಪಿ ಎಂದೇ ಕೋತಿಯನ್ನು ಪರಿಗಣಿಸಿದ್ದ ಗ್ರಾಮಸ್ಥರು, ಶಾಸ್ತ್ರೋಕ್ತವಾಗಿ ಅದರ ಅಂತ್ಯಸಂಸ್ಕಾರ ನಡೆಸಿದ್ದರು. ಮಂಗದ ಶವವನ್ನು ಅಂತ್ಯಸಂಸ್ಕಾರದ ಸ್ಥಳಕ್ಕೆ ಸಾವಿರಾರು ಜನರು ಮೆರವಣಿಗೆಯಲ್ಲಿ, ಮಂತ್ರ ಪಠಣಗಳೊಂದಿಗೆ ಕರೆದೊಯ್ದಿದ್ದರು. ಹರಿ ಸಿಂಗ್ ಎಂಬಾತ ಕೇಶಮುಂಡನ ಮಾಡಿಕೊಂಡು ವಿಧಿಗಳನ್ನು ನೆರವೇರಿಸಿದ್ದ.
ಶ್ವಾನಗಳ ಮೇಲೆ ವಾನರ ಸೇಡು!: ಸುಮಾರು 250 ನಾಯಿಗಳನ್ನು ಕೊಂದ ಕೋತಿಗಳ ಗುಂಪು
ಅಂತ್ಯಸಂಸ್ಕಾರದ ಬಳಿಕ ಗ್ರಾಮಸ್ಥರು ಹಣ ಸಂಗ್ರಹಿಸಿ 1,500ಕ್ಕೂ ಅಧಿಕ ಜನರಿಗೆ ತಿಥಿಯೂಟ ಹಾಕಿಸಿದ್ದರು. ಕೋತಿಯ ಸಾವಿನ ಕುರಿತು ಕಾರ್ಡ್‌ಗಳನ್ನು ಮುದ್ರಿಸಿ, ಹಂಚಲಾಗಿತ್ತು. ತಿಥಿಯೂಟಕ್ಕೆ ಗ್ರಾಮಸ್ಥರನ್ನು ಆಹ್ವಾನಿಸಲಾಗಿತ್ತು. ಬೃಹತ್ ಪೆಂಡಾಲ್ ಅಡಿ ನೂರಾರು ಜನರು ಕುಳಿತು ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಅನೇಕ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾಗಲೇ ಈ ತಿಥಿಯೂಟ ಆಯೋಜನೆ ಮಾಡಲಾಗಿತ್ತು. ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಗುಂಪುಗೂಡುವುದನ್ನು ಮಧ್ಯಪ್ರದೇಶ ಸರ್ಕಾರ ನಿರ್ಬಂಧಿಸಿದೆ. ಆದರೆ ಇದನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿತ್ತು.
ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಅನೇಕ ಗ್ರಾಮಸ್ಥರು ಬಂಧನ ಭೀತಿಯಿಂದಾಗಿ ಅಡಗಿಕೊಂಡಿದ್ದಾರೆ. ಮಧ್ಯಪ್ರದೇಶದ ಐದು ಜಿಲ್ಲೆಗಳಲ್ಲಿ ಕೋವಿಡ್ 19 ಪ್ರಕರಣಗಳು ಅಧಿಕವಾಗಿವೆ. ಇಂದೋರ್, ಭೋಪಾಲ್, ಗ್ವಾಲಿಯರ್, ಜಬಲ್ಪುರ ಮತ್ತು ಸಾಗರ್‌ಗಳಲ್ಲಿ ಪ್ರತಿ ದಿನ ಮೂರಂಕಿಗಿಂತ ಅಧಿಕ ಕೇಸ್‌ಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಮಂಗಳವಾರ 8,599 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
Read more
[wpas_products keywords=”deal of the day sale today offer all”]