ಹೈಲೈಟ್ಸ್:
- ಕೊರೊನಾ ವೈರಸ್ ಮೂರನೇ ಅಲೆಯಿಂದ ವ್ಯಾಪಾರದ ಮೇಲೆ ಪರಿಣಾಮ
- ನಗದು ಹರಿವಿನ ಮೇಲೆ ಪರಿಣಾಮ ಉಂಟಾಗದಂತೆ ವ್ಯಾಪಾರಿಗಳ ಜಾಗ್ರತೆ
- ವಿವೇಚನಾ ಬಳಕೆಯ ಉತ್ಪನ್ನಗಳ ಸಂಗ್ರಹ ಪ್ರಮಾಣ ತಗ್ಗಿಸಿದ ಮಾರಾಟಗಾರರು
- ಗ್ರಾಹಕರ ಬೇಡಿಕೆಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಪೂರೈಕೆ ಸರಪಣಿ ದುರ್ಬಲ
ಟೆಲಿವಿಷನ್, ಸ್ಮಾರ್ಟ್‌ಫೋನ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಉಡುಪು ಹಾಗೂ ಚಪ್ಪಲಿ ತಯಾರಕರು ಈಗಾಗಲೇ ಎರಡು ಕೋವಿಡ್ 19 ಅಲೆಗಳ ಅನುಭವ ಪಡೆದಿರುವುದರಿಂದ, ಮತ್ತಷ್ಟು ವ್ಯಾಪಾರಿಗಳು ಹಾಗೂ ಪೂರೈಕೆದಾರರು ವ್ಯವಹಾರ ಕುಸಿದರೆ ನಗದು ಹರಿವಿನ ಮೇಲೆ ಪರಿಣಾಮ ಉಂಟಾಗಬಾರದು ಎಂಬ ಉದ್ದೇಶದಿಂದ 30 ದಿನಗಳ ಬದಲು ದಾಸ್ತಾನನ್ನು 15 ದಿನಗಳಿಗೆ ಮಾತ್ರ ಇರಿಸಿಕೊಳ್ಳಲು ಬಯಸುತ್ತಿದ್ದಾರೆ.
ದೀಪಾವಳಿ ಮಾರಾಟಗಳಿಂದ ಕಳೆದ ತ್ರೈಮಾಸಿಕ ಅವಧಿಯಲ್ಲಿ ಚೇತರಿಕೆಯ ಖುಷಿ ಕಂಡಿದ್ದ ಮಾರಾಟ ಕ್ಷೇತ್ರದ ವ್ಯವಹಾರದ ಮೇಲೆ ಜನವರಿಯಲ್ಲಿ ತೀವ್ರ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ‘ದೊಡ್ಡ ಪೂರೈಕೆ ಸರಪಣಿಗಳು ಸೇರಿದಂತೆ ಚಿಲ್ಲರೆ ಮಾರಾಟಗಾರರು, ಕೊರೊನಾ ವೈರಸ್ ಹೊಸ ತಳಿ ಗ್ರಾಹಕ ಬೇಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಗ್ರಹಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ರೀತಿ ಇರಲಿದೆ ಎಂಬ ಭಾರಿ ಅನಿಶ್ಚಿತತೆ ಹಿನ್ನೆಲೆಯಲ್ಲಿ ದಾಸ್ತಾನು ಸರಪಣಿ ನಿರ್ಮಿಸುವಲ್ಲಿ ಸಾಕಷ್ಟು ಎಚ್ಚರಿಕೆ ಹೆಜ್ಜೆ ಇರಿಸುತ್ತಿದ್ದಾರೆ’ ಎಂದು ಹೈಯರ್ ಇಂಡಿಯಾ ಅಧ್ಯಕ್ಷ ಸತೀಶ್ ಎನ್‌ಎಸ್ ತಿಳಿಸಿದ್ದಾರೆ.
ಹೊಸ ಆರ್ಡರ್‌ಗಳನ್ನು ಇರಿಸುವಲ್ಲಿ ‘ಕಾದು ನೋಡುವ ತಂತ್ರ’ ಅನುಸರಿಸುತ್ತಿರುವುದಾಗಿ ಲೈಫ್‌ಸ್ಟೈಲ್ ಇಂಟರ್‌ನ್ಯಾಷನಲ್ ಸಂಗ್ರಹ ಸರಪಣಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದೇವರಾಜನ್ ಅಯ್ಯರ್ ತಿಳಿಸಿದ್ದಾರೆ. ಹೊಸ ಆರ್ಡರ್‌ಗಳು ಮಾರಾಟಗಳು ಹಾಗೂ ರಾಜ್ಯಗಳ ನಿರ್ಬಂಧಗಳ ಆಧಾರದಲ್ಲಿ ಮುಂದಿನ ಎರಡು ವಾರಗಳ ಮೇಲೆ ಅವಲಂಬಿತವಾಗಿವೆ ಎಂದು ಹೇಳಿದ್ದಾರೆ.
ಎಲ್‌ಜಿ ಎಲೆಕ್ಟ್ರಾನಿಕ್ಸ್, ಕ್ಯಾರಿಯರ್ ಮೈಡಿಯಾ ಮತ್ತು ಗೋದ್ರೆಜ್ ಅಪ್ಲೈಯನ್ಸಸ್‌ನಂತಹ ಕಂಪೆನಿಗಳು ಕೂಡ ಡೀಲರ್‌ಗಳ ಸಂಗ್ರಹದಲ್ಲಿನ ಇಳಿಕೆಯನ್ನು ಖಚಿತಪಡಿಸಿವೆ. ಬೇಸಿಗೆಯಲ್ಲಿ ರೆಫ್ರಿಜರೇಟರ್ ಮತ್ತು ಎಸಿಯಂತಹ ಸಾಧನಗಳ ಸಂಗ್ರಹ ಜನವರಿ- ಫೆಬ್ರವರಿ ತಿಂಗಳ ಅವಧಿಯಲ್ಲಿ ಅಧಿಕವಾಗಲಿದೆ. ಆದರೆ ಪ್ರಸ್ತುತ ಅವುಗಳ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಅನಿಶ್ಚಿತತೆ ಭಯದಿಂದ ಡೀಲರ್‌ಗಳು ಕಳೆದ ಎರಡು ವಾರಗಳಲ್ಲಿ ತಮ್ಮ ದಾಸ್ತಾನು ಮಟ್ಟವನ್ನು ತಗ್ಗಿಸಿದ್ದಾರೆ ಎಂದು ಕ್ಯಾರಿಯರ್ ಮೈಡಿಯಾ ಇಂಡಿಯಾ ಅಧ್ಯಕ್ಷ ಕೃಷ್ಣನ್ ಸಚ್‌ದೇವ್ ತಿಳಿಸಿದ್ದಾರೆ.
ಡಿಸೆಂಬರ್ ತ್ರೈಮಾಸಿಕ ಅವಧಿ ಸಂದರ್ಭದಲ್ಲಿ ಬಾಕಿ ಇದ್ದ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯು ಜನವರಿ- ಫೆಬ್ರವರಿ ವೇಳೆ ನಡೆಯಬೇಕಿತ್ತು. ಆದರೆ ಸಂಭಾವ್ಯ ಕೋವಿಡ್ 19 ಮೂರನೇ ಅಲೆ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ದಲ್ಲಾಳಿ ಸಂಸ್ಥೆ ಮೋತಿಲಾಲ್ ಓಸ್ವಾಲ್ ಇತ್ತೀಚಿನ ವರದಿಯಲ್ಲಿ ತಿಳಿಸಿತ್ತು.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್‘ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
Read more
[wpas_products keywords=”deal of the day sale today offer all”]