ಹೈಲೈಟ್ಸ್:
- ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ.
- ಲೀಗ್‌ಗೆ ಹೊಸ ತಂಡಗಳಾಗಿ ಅಹ್ಮದಾಬಾದ್ ಮತ್ತು ಲಖನೌ ತಂಡಗಳ ಸೇರ್ಪಡೆ.
- ಅಹ್ಮದಾಬಾದ್ ಫ್ರಾಂಚೈಸಿಗೆ ಆಲ್‌ರೌಂಡರ್ ಹಾರ್ದಿಕ್ ಕ್ಯಾಪ್ಟನ್ ಆಗುವ ಸಾಧ್ಯತೆ.
2019ರಲ್ಲಿ ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದಿದ್ದ ಹಾರ್ದಿಕ್ ಪಾಂಡ್ಯ ಈವರೆಗೆ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಆರಂಭಿಸಿಲ್ಲ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡ ಅವರನ್ನು ಉಳಿಸಿಕೊಳ್ಳದೆ ಆಟಗಾರರ ಹರಾಜಿಗೆ ಬಿಟ್ಟುಕೊಟ್ಟಿದೆ.
ಇದು ನೂತನ ಫ್ರಾಂಚೈಸಿ ಅಹ್ಮದಾಬಾದ್ ತಂಡಕ್ಕೆ ಅದೃಷ್ಟದಂತೆ ಒಲಿದಿದ್ದು, ಬರೋಡಾ ಆಲ್‌ರೌಂಡರ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ ಹಾರ್ದಿಕ್ ಅಹ್ಮದಾಬಾದ್ ತಂಡ ಕ್ಯಾಪ್ಟನ್ ಆಗಲಿದ್ದಾರೆ ಎಂಬುದು ತಿಳಿದು ಬಂದಿದೆ. ಮೂಲಗಳು ಈ ಮಾಹಿತಿಯನ್ನು ಖಾತ್ರಿ ಪಡಿಸಿವೆ ಎಂದು ಟೈಮ್ಸ್ ನಾವ್ ವರದಿ ಮಾಡಿದೆ.
ಮೆಗಾ ಆಕ್ಷನ್‌ಗೂ ಮುನ್ನ ಅಹ್ಮದಾಬಾದ್ ತಂಡದ ಸಂಭಾವ್ಯ XI ಹೀಗಿದೆ!
ಇದಕ್ಕೂ ಮುನ್ನ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದ ಹಾರ್ದಿಕ್ ಭಾವನಾತ್ಮಕ ಸಂದೇಶ ಬರೆದಿದ್ದರು. “ಮುಂಬೈ ಇಂಡಿಯನ್ಸ್ ತಂಡದ ಜೊತೆಗಿನ ನನ್ನ ಪಯಣ, ಎಲ್ಲಾ ನೆನಪುಗಳನ್ನು ನನ್ನ ಜೀವನದುದ್ದಕ್ಕೂ ಜೊತೆಗೆ ಕೊಂಡೊಯ್ಯುತ್ತೇನೆ. ಇಲ್ಲಿ ಬೆಳೆಸಿದ ಸ್ನೇಹ, ಬಾಂಧವ್ಯ, ಸಂಪಾದಿಸಿರುವ ಜನ, ಅಭಿಮಾನಿಗಳು ಎಲ್ಲದಕ್ಕೂ ನಾನು ಆಭಾರಿ. ಇಲ್ಲಿ ಒಬ್ಬ ಆಟಗಾರನಾಗಿ ಮಾತ್ರವಲ್ಲ ಒಬ್ಬ ವ್ಯಕ್ತಿಯಾಗಿಯೂ ಬೆಳೆದಿದ್ದೇನೆ. ಒಬ್ಬ ಯುವ ಆಟಗಾರನಾಗಿ ಇಲ್ಲಿಗೆ ಬಂದೆ. ಒಂದು ತಂಡವಾಗಿ ಗೆದ್ದಿದ್ದೇವೆ, ಒಂದು ತಂಡವಾಗಿ ಸೋತಿದ್ದೇವೆ, ಒಂದು ತಂಡವಾಗಿ ಹೋರಾಡಿದ್ದೇವೆ. ಈ ತಂಡದೊಂದಿಗಿನ ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಎಲ್ಲ ಒಳ್ಳೆ ಸಂಗತಿಗಳಿಗೂ ಕೊನೆಯಿದೆ ಎನ್ನುತ್ತಾರೆ. ಆದರೆ ಮುಂಬೈ ಇಂಡಿಯನ್ಸ್ ನನ್ನ ಹೃದಯದಲ್ಲಿ ಅಜರಾಮರ,” ಎಂದು ಹಾರ್ದಿಕ್ ತಮ್ಮ ಟ್ವಿಟರ್ ಗೋಡೆ ಮೇಲೆ ಬರೆದಿದ್ದರು.
ಆಶಿಶ್ ನೆಹ್ರಾ ಕೋಚ್
ಕೆಲ ದಿನಗಳ ಹಿಂದಷ್ಟೇ ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅಹ್ಮದಾಬಾದ್ ಫ್ರಾಂಚೈಸಿಯ ನೂತನ ಕೋಚ್ ಆಗಲಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಇಂಗ್ಲೆಂಡ್‌ನ ಮಾಜಿ ಆಟಗಾರ ವಿಕ್ರಮ್ ಸೋಲಂಕಿ ಮತ್ತು ಮೆಂಟರ್ ಆಗಿ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ತಂಡ ಸೇರಲಿದ್ದಾರೆ ಎಂದು ವರದಿ ಹೇಳಿತ್ತು.
ಅಹ್ಮದಾಬಾದ್ ಕೋಚಿಂಗ್ ಬಳಗದ ಆಯ್ಕೆ!
ಅಹ್ಮದಾಬಾದ್ ಫ್ರಾಂಚೈಸಿ ವಿರುದ್ಧ ತನಿಖೆ
ಅಹ್ಮದಾಬಾದ್ ಫ್ರಾಂಚೈಸಿ ಖರೀದಿಸಿರುವ ಸಂಸ್ಥೆಯ ಮೂಲದ ಬಗ್ಗೆ ತನಿಖೆಯಾಗುತ್ತಿದೆ. ಐರ್ಲಿಯಾ ಕಂಪನಿಯ ಬಹುಪಾಲು ಶೇರ್ ಹೊಂದಿರುವ ಸಿವಿಸಿ ಕ್ಯಾಪಿಟಲ್ ಕಂಪನಿ ಅಂತಾರಾಷ್ಟ್ರೀಯ ಬೆಟ್ಟಿಂಗ್ ಸಂಸ್ಥೆಯ ಮಾಲೀಕತ್ವವನ್ನು ಹೊಂದಿದೆ. ಈ ಬಗ್ಗೆ ಬಿಸಿಸಿಐ ತನಿಖೆ ನಡೆಸುತ್ತಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿ ಇದೆ. ಬಿಸಿಸಿಐನಿಂದ ಕ್ಲೀನ್ ಚಿಟ್ ಲಭ್ಯವಾದ ಬಳಿಕವಷ್ಟೇ ಅಹ್ಮದಾಬಾದ್ ತನ್ನ ಕೋಚಿಂಗ್ ಬಳಗ ಮತ್ತು ಹರಾಜಿಗೂ ಮುನ್ನ ಒಪ್ಪಂದ ಮಾಡಿಕೊಂಡಿರುವ ಮೂರು ಆಟಗಾರರ ವಿವರವನ್ನು ಬಹಿರಂಗ ಮಾಡಬಹುದು.
ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ಅವರಂತಹ ಸ್ಟಾರ್‌ಗಳೊಂದಿಗೆ ಅಹ್ಮದಾಬಾದ್ ತಂಡ ಹರಾಜಿಗೂ ಮೊದಲೇ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
‘ಮುಂಬೈ ತಂಡದ ನಂಟು ಮುಗಿದಿದೆ’, ಭಾವನಾತ್ಮಕ ಸಂದೇಶ ಬರೆದ ಪಾಂಡ್ಯ!
ಅಹ್ಮದಾಬಾದ್ ತಂಡದ ಸಂಭಾವ್ಯ XI ಹೀಗಿದೆ
1. ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್/ಓಪನರ್)
2. ದೇವದತ್ ಪಡಿಕ್ಕಲ್ (ಓಪನರ್)
3. ಶ್ರೇಯಸ್ ಅಯ್ಯರ್ (ಬ್ಯಾಟ್ಸ್‌ಮನ್)
4. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್/ ಬ್ಯಾಟ್ಸ್‌ಮನ್)
5. ಐಯಾನ್ ಮಾರ್ಗನ್ (ಬ್ಯಾಟ್ಸ್‌ಮನ್)
6. ಶಕಿಬ್ ಅಲ್ ಹಸನ್ (ಆಲ್‌ರೌಂಡರ್)
7. ಜೇಸನ್ ಹೋಲ್ಡರ್ (ಆಲ್‌ರೌಂಡರ್)
8. ಶಾರ್ದುಲ್ ಠಾಕೂರ್ (ಆಲ್‌ರೌಂಡರ್)
9. ಆರ್ ಅಶ್ವಿನ್ (ಆಫ್ ಸ್ಪಿನ್ನರ್)
10. ರವಿ ಬಿಷ್ಣೋಯ್ (ಲೆಗ್ ಸ್ಪಿನ್ನರ್)
11. ಚೇತನ್ ಸಾಕರಿಯ (ಎಡಗೈ ವೇಗಿ)
Read more
[wpas_products keywords=”deal of the day gym”]