Karnataka news paper

ಟಾಲಿವುಡ್ ನಟ ಮಹೇಶ್‌ ಬಾಬು ಸಹೋದರ ರಮೇಶ್‌ ಬಾಬು ನಿಧನ


Online Desk

ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ ಅವರ ಪುತ್ರ, ನಾಯಕ ನಟ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು (56) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಲಿವರ್ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಮಧ್ಯ ರಾತ್ರಿ ನಿಧನರಾಗಿದ್ದಾರೆ. ರಾತ್ರಿ ದಿಢೀರ್‌ ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬ ಸದಸ್ಯರು ಗಚ್ಚಿಬೌಲಿಯ ಎ ಐ ಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ರಮೇಶ್ ಬಾಬು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ರಮೇಶ್ ಬಾಬು ನಿಧನಕ್ಕೆ ತೆಲುಗು ಚಿತ್ರರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಅಂದಿನ ತೆಲುಗು ಸೂಪರ್‌ ಸ್ಟಾರ್‌ ಕೃಷ್ಣ – ಇಂದಿರಾ ದೇವಿ ದಂಪತಿ ಹಿರಿಯ ಮಗನಾಗಿ 13 ಅಕ್ಟೋಬರ್ , 1965 ರಲ್ಲಿ ರಮೇಶ್ ಬಾಬು ಜನಿಸಿದ್ದರು. ಬಾಲ ನಟನಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ನಂತರ ತೆಲುಗು ಚಿತ್ರರಂಗದಲ್ಲಿ ಅವರು ಸ್ವಲ್ಪ ಸಮಯ ನಟ ಹಾಗೂ ನಿರ್ಮಾಪಕರಾಗಿ ಮುಂದುವರೆದರು. ಈ ನಡುವೆ ಸಿನಿಮಾ ನಿರ್ಮಾಣ ವ್ಯವಹಾರ ಬಿಟ್ಟು ವ್ಯಾಪಾರ ವ್ಯವಹಾರ ನೋಡಿಕೊಳ್ಳುತ್ತಿದ್ದರು.

1974ರಲ್ಲಿ ತೆರೆಕಂಡ ‘ಅಲ್ಲೂರಿ ಸೀತಾರಾಮರಾಜು’ ಚಿತ್ರದ ಮೂಲಕ ಬಾಲನಟನಾಗಿ ಪರಿಚಯವಾದ ರಮೇಶ್ ಬಾಬು ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಅವರು ನಿರ್ಮಾಪಕರಾಗಿ ಕೃಷ್ಣ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಚಿತ್ರಗಳನ್ನು ನಿರ್ಮಿಸಿದರು. ಮಹೇಶ್ ಬಾಬು ಜೊತೆ ‘ಅರ್ಜುನ್, ಅತಿಥಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ.



Read more…

[wpas_products keywords=”party wear dress for women stylish indian”]