
ಹೌದು, ನೀವು ವೈಫೈ ಹಾಟ್‌ಸ್ಪಾಟ್ ಮೂಲಕ ಇಂಟರ್‌ನೆಟ್ ಕನೆಕ್ಟಿವಿಟಿ ಪಡೆದುಕೊಂಡಾದ ಡೇಟಾ ವೇಗ ಕೆಲವೊಮ್ಮೆ ಕಡಿಮೆ ವೇಗವನ್ನು ಹೊಂದಿರುತ್ತದೆ. ಕೆಲವರಿಗೆ ಕಾರ್ಯನಿರ್ವಹಿಸುವುದು ಕೂಡ ಕಷ್ಟವಾಗಬಹುದು. ಇಂತಹ ಸನ್ನಿವೇಶದಲ್ಲಿ ನಿಮ್ಮ ವೈಫೈ ಹಾಟ್‌ಸ್ಪಾಟ್ ವೇಗವನ್ನು ಹೆಚ್ಚಿಸುವುದಕ್ಕೆ ಕೆಲವು ಮಾರ್ಗಗಳನ್ನು ಅನುಸರಿಸಬಹುದು. ಹಾಗಾದ್ರೆ ನಿಮ್ಮ ವೈಫೈ ಹಾಟ್‌ಸ್ಪಾಟ್ ವೇಗವನ್ನು ಹೆಚ್ಚಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೈ-ಫೈ ಹಾಟ್‌ಸ್ಪಾಟ್ ವೇಗವನ್ನು ಹೆಚ್ಚಿಸುವುದು ಹೇಗೆ?
ನೀವು ಕನೆಕ್ಟ್ ಮಾಡಿಕೊಂಡಿರುವ ಹಾಟ್‌ಸ್ಪಾಟ್ ವೇಗವನ್ನು ಹೆಚ್ಚಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲೂ ಯುಎಸ್‌ಬಿ ಕೇಬಲ್‌ನೊಂದಿಗೆ ಕನೆಕ್ಟ್ ಆಗಿರುವ ಹಾಟ್‌ಸ್ಪಾಟ್ ಸಾಮಾನ್ಯವಾಗಿ ವೇಗವಾಗಿ ಕಾರ್ಯನಿರ್ವಹಿಸಲಿದೆ. ಆದರೆ ಇದು ನೀವು ಯಾವ USB-C ಚಾರ್ಜರ್ ಅನ್ನು ಬಳಸುತ್ತಿರುವಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಲವು ಸ್ಮಾರ್ಟ್‌ಫೋನ್‌ಗಳು ಹಳೆಯ USB 2.0 ಕೇಬಲ್‌ನೊಂದಿಗೆ ಬಂದಿರುತ್ತವೆ, ಇವುಗಳು 480Mbps ವರೆಗೆ ವರ್ಗಾವಣೆ ವೇಗವನ್ನು ನೀಡುತ್ತದೆ. ಆದರೆ ಹೊಸ USB 3.0 ಮತ್ತು USB 3.1 Gen 1 ಬಳಸಿದರೆ 5Gbps ವೇಗವನ್ನು ಪಡೆಯಬಹುದಾಗಿದೆ.

ಆಂಡ್ರಾಯ್ಡ್ ಫೋನ್‌ನಲ್ಲಿ ವೈಫೈ ಹಾಟ್‌ಸ್ಪಾಟ್ ಅನ್ನು ಸೆಟ್ ಮಾಡುವುದು ಹೇಗೆ?
ನಿಮಗೆಲ್ಲಾ ತಿಳಿದಿರುವಂತೆ ಮೊಬೈಲ್ ಹಾಟ್‌ಸ್ಪಾಟ್ ಅನ್ನು ಸೆಟ್ ಮಾಡುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ ನೀವು ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ > ವೈ-ಫೈ & ನೆಟ್‌ವರ್ಕ್ > ಹಾಟ್‌ಸ್ಪಾಟ್ ಮತ್ತು ಟೆಥರಿಂಗ್‌ಗೆ ಹೋಗಬೇಕಾಗುತ್ತದೆ. ಈಗ, ವೈ-ಫೈ ಹಾಟ್‌ಸ್ಪಾಟ್ ಮೇಲೆ ಟ್ಯಾಪ್ ಮಾಡುವ ಮೂಲಕ ಹಾಟ್‌ಸ್ಪಾಟ್ ಅನ್ನು ಆಕ್ಟಿವ್ ಮಾಡಬಹುದಾಗಿದೆ. ಹಾಟ್‌ಸ್ಪಾಟ್ ಅನ್ನು ಆಕ್ಟಿವ್ ಮಾಡುವಾಗ ಪಾಸ್‌ವರ್ಡ್ ಅನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ಕೂಡ ಇದೆ. ಇದರಿಂದ ನಿಮ್ಮ ಮೊಬೈಲ್‌ನ ಹಾಟ್‌ಸ್ಪಾಟ್ ಅನ್ನು ಬೇರೆಯವರು ಬಳಸದಂತೆ ತಡೆಯಬಹುದು. ಇದಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಾಟ್‌ಸ್ಪಾಟ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕವು ಹಾಟ್‌ಸ್ಪಾಟ್ ಅನ್ನು ಸೆಟ್ ಮಾಡಬಹುದಾಗಿದೆ.

ಯುಎಸ್‌ಬಿ ಅಥವಾ ಬ್ಲೂಟೂತ್ ಮೂಲಕ ಮೊಬೈಲ್ ಹಾಟ್‌ಸ್ಪಾಟ್ ಅನ್ನು ಸೆಟ್ ಮಾಡುವುದು ಹೇಗೆ?
ಇದಲ್ಲದೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ USB ಕೇಬಲ್ ಬಳಸಿ ಕೂಡ ನೀವು ಮೊಬೈಲ್ ಹಾಟ್‌ಸ್ಪಾಟ್ ಅನ್ನು ಸೆಟ್ ಮಾಡಬಹುದು. ಇದಕ್ಕಾಗಿ ನೀವು ತಮ್ಮ ಲ್ಯಾಪ್‌ಟಾಪ್‌ಗೆ ಯುಎಸ್‌ಬಿ ಕೇಬಲ್ ಅನ್ನು ಸಂಪರ್ಕಿಸಬೇಕಾಗುತ್ತದೆ. ನಂತರ, ಸೆಟ್ಟಿಂಗ್ಸ್> ವೈ-ಫೈ ಮತ್ತು ನೆಟ್‌ವರ್ಕ್> ಹಾಟ್‌ಸ್ಪಾಟ್ ಮತ್ತು ಟೆಥರಿಂಗ್> ಯುಎಸ್‌ಬಿ ಟೆಥರಿಂಗ್‌ಗೆ ಹೋಗಬೇಕು. ಇದಾದ ನಂತರ ಹಾಟ್‌ಸ್ಪಾಟ್ ಕನೆಕ್ಟ್ ಆಗಲಿದೆ.
Read more…
[wpas_products keywords=”smartphones under 15000 6gb ram”]