Karnataka news paper

ಉತ್ತರ ಪ್ರದೇಶ: ಬಿಜೆಪಿ ಶಾಸಕ ಪಂಕಜ್ ಗುಪ್ತಗೆ ರೈತನಿಂದ ಕಪಾಳಮೋಕ್ಷ; ವಿಡಿಯೋ ವೈರಲ್


PTI

ಉನ್ನಾವೋ: ಉತ್ತರ ಪ್ರದೇಶದ ಸದರ್​ ಕ್ಷೇತ್ರದ ಬಿಜೆಪಿ ಶಾಸಕ ಪಂಕಜ್​ ಗುಪ್ತಗೆ ರೈತನೋರ್ವ ಕಪಾಳಮೋಕ್ಷ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ವೇದಿಕೆ ಮೇಲೆ ಕುಳಿತಿದ್ದ ವೇಳೆ ಅಲ್ಲಿಗೆ ಬಂದಿರುವ ವೃದ್ಧ ರೈತನೋರ್ವ ಕೆನ್ನೆಗೆ ಹೊಡೆದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಇದಾಗಿದೆ ಎನ್ನಲಾಗುತ್ತಿದ್ದು, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಸಾರ್ವಜನಿಕ ಸಭೆಯಲ್ಲೇ ಈ ರೀತಿಯ ಘಟನೆ ನಡೆದಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಪಂಕಜ್ ಗುಪ್ತ, ವೀಡಿಯೋ ದೃಶ್ಯದಲ್ಲಿರುವ ವ್ಯಕ್ತಿ ನನ್ನ ‘ಚಾಚಾ’  ರೀತಿ ಮತ್ತು ಅವರು ಈ ಹಿಂದೆ ಮಾಡಿದಂತೆ ಪ್ರೀತಿಯಿಂದ ಕೆನ್ನೆ ತಟ್ಟಿದರು” ಎಂದು ಸುದ್ದಿಗಾರರಿಗೆ ತಿಳಿಸಿದರು, ಪತ್ರಿಕಾಗೋಷ್ಠಿಯಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿಯನ್ನು ತೋರಿಸಿದರು.

ಇದನ್ನೂ ಓದಿ: ಅಯೋಧ್ಯ-ಕಾಶಿ ಜಾರಿ ಹೈ, ಮಥುರಾ ಕಿ ತಯಾರಿ ಹೈ: ಯು.ಪಿ ಚುನಾವಣೆಗೆ ಬಿಜೆಪಿ, ಯೋಗಿಯ ಹೊಸ ಮಂತ್ರ! (ಅಂತಃಪುರದ ಸುದ್ದಿಗಳು)

ವಿಡಿಯೋದಲ್ಲಿರುವ ಹಿರಿಯ ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದ್ದು, ಶಾಸಕರನ್ನು ವೇದಿಕೆಯ ಮೇಲೆ ಹೊಡೆದ ನಂತರ ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ ತುಣುಕಿನಲ್ಲಿ ತೋರಿಸಲಾಗಿದೆ. ರೈತ ಕೋಪದಲ್ಲಿರುವಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.





Read more

[wpas_products keywords=”deal of the day”]