ಬೆಂಗಳೂರು: ಕಲಬುರ್ಗಿ ವಿಭಾಗದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ನೀಡುವ ‘ಹಾಲುಮತ ಭಾಸ್ಕರ ಪ್ರಶಸ್ತಿ’ಗೆ ಕವಿ ಲಿಂಗದಹಳ್ಳಿ ಹಾಲಪ್ಪ ಆಯ್ಕೆಯಾಗಿದ್ದಾರೆ.
‘ಸಿದ್ಧಶ್ರೀ ಪ್ರಶಸ್ತಿ’ಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ನಟರಾಜ್ ಹುಲಿಕಲ್ ಹಾಗೂ ‘ಕನಕರತ್ನ ಪ್ರಶಸ್ತಿ’ಗೆ ಲೇಖಕಿ ಡಾ.ಆರ್. ಸುನಂದಮ್ಮ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 50 ಸಾವಿರ ನಗದು ಒಳಗೊಂಡಿವೆ.
ಗುರುಪೀಠದ ತಿಂಥಿಣಿ ಶಾಖಾ ಮಠದಲ್ಲಿ ಇದೇ 12ರಿಂದ ಹಾಲುಮತ ಸಂಸ್ಕೃತಿ ವೈಭವ–2022 ಪ್ರಾರಂಭವಾಗಲಿದೆ. 13ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಭಗವಂತ ಖೂಬಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತಿಂಥಿಣಿ ಮಠದ ಪೀಠಾಧ್ಯಕ್ಷ ಸಿದ್ಧರಾಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಪೀಠದ ಸಂಚಾಲಕ ಆರ್.ಪಿ. ಸಾಂಬಸದಾಶಿವ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read more from source
[wpas_products keywords=”deal of the day sale today kitchen”]