ಯಾವೊಂದು ಕಾರಣಕ್ಕೂ ಜೀವನದಲ್ಲಿ ನಡೆದ ಒಂದು ಕಹಿ ಘಟನೆಯನ್ನು ನೆನಪಿಸಿಕೊಂಡು ಅತ್ಯಮೂಲ್ಯವಾದ ಜೀವನವನ್ನು ಹಾಳು ಮಾಡದಿರಿ. ನಿಮ್ಮ ಬದುಕಿನ ಏಳು ಬೀಳಿಗೆ ನೀವು ಕಾರಣ ಕರ್ತರಾಗುತ್ತೀರಿ. ಕಷ್ಟವನ್ನು ಸರಿಪಡಿಸುವ ಬಗ್ಗೆ ನಿಮ್ಮ ನಿಲುವಿರಲಿ. ಯಾವುದಾದರೂ ಒಂದು ಕಾರಣದಿಂದ ನೀವು ಖಿನ್ನತೆಗೆ ಒಳಗಾಗಿದಲ್ಲಿ ಸೂಕ್ತ ವೈದ್ಯರನ್ನು ಭೇಟಿ ಮಾಡಿ, ನಿಮ್ಮವರಲ್ಲಿ ಮಾತಾಡಿ ಪರಿಹಾರ ಹುಡುಕುವುದು ಮುಖ್ಯ. ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದನ್ನು ಬಿಟ್ಟುಬಿಡಿ . ಇಂತಹ ಯೋಚನೆಯಲ್ಲಿ ನೀವು ವಿಫಲರಾದರೆ ಮುಂದೆ ಬದುಕಿನ ಸಂಪೂರ್ಣ ಪರೀಕ್ಷೆಯಲ್ಲಿ ನೀವು ಸೋತು ಹೋಗುತ್ತೀರಿ. ಕಷ್ಟ ಸರಿಪಡಿಸುವ ದಾರಿ ಹುಡುಕಿ , ಕೊರಗಿ ಪ್ರಯೋಜನವಿಲ್ಲ. ಕಾಲ ಹರಣ ಮಾಡುತ್ತಾ ಆಗಿ ಹೋದ ವಿಚಾರವನ್ನು ಮಾತಾಡಿ ಸಮಯ ವ್ಯರ್ಥ ಮಾಡದಿರಿ.
ಇನ್ನೂ ನಾನು ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿ ನಾವೆಲ್ಲಾ ಕಾಣುವ ವಿಚಾರ …
ತಮಗೆ ಸಂಬಂಧ ಪಡದ ವಿಚಾರದ ಬಗ್ಗೆ ಇಲ್ಲ ಸಲ್ಲದನ್ನು ಒಂದು ಉತ್ತಮ ಕತೆಗಾರರಂತೆ ಸಿನಿಮಾದ ರೀತಿಯಲ್ಲಿ ಕಥೆ ಯನ್ನು ಪೋಣಿಸುವುದು. ಒಂದು ಕ್ಷಣವೂ ಯೋಚಿಸುವುದಿಲ್ಲ ನಾವು ಬೇರೆಯವರ ಬದುಕಿನ ಬಗ್ಗೆ ಮಾತಾಡುತ್ತಿರುವುದು ಮುಂದೆ ನಮ್ಮ ಬದುಕಲ್ಲೂ ಈ ರೀತಿಯ ಘಟನೆ ಆಗಬಹುದು ಎನ್ನುವ ಒಂದು ಚೂರು ಪರಿವೆಯಿಲ್ಲದೆ ಮಾತನಾಡುತ್ತಾರೆ ನಮ್ಮ ಜನರು, ಇಂತಹ ಜನರಿಂದ ದೂರ ಇರಿ. ಪ್ರತಿಯೊಬ್ಬರ ಬದುಕಲ್ಲಿ ಏಳು ಬೀಳುಗಳಿರುತ್ತದೆ. ಅವರವರ ಪುಸ್ತಕದ ಪುಟ ಬೇರೆ ಬೇರೆಯಾಗಿರುತ್ತದೆ.
ಬದುಕಿನ ಕಷ್ಟ, ನೋವು, ಕೆಲಸದ ಹುಡುಕಾಟ, ಮಕ್ಕಳ ಮದುವೆ, ಆಸ್ಪತ್ರೆಯಲ್ಲಿ ರಕ್ತಕ್ಕಾಗಿ, ಹಣಕ್ಕಾಗಿ ಪರದಾಟ, ಮಕ್ಕಳ ಶಿಕ್ಷಣ, ಪ್ರತಿಯೊಬ್ಬರ ಬದುಕಿನ ಕಷ್ಟ ವಿಭಿನ್ನವಾಗಿರುತ್ತದೆ. ಅವರವರಿಗೆ ತಮ್ಮ ಬದುಕು ಒಂದು ಸಿನಿಮಾದ ಹಾಗೇ ಅನಿಸಬಹುದು. ಉತ್ತಮ ಶೀರ್ಷಿಕೆಯೊಂದಿಗೆ ನಮ್ಮ ಪುಸ್ತಕದ ಪುಟದ ಬರಹಗಾರರು ನಾವಾಗಿರಬೇಕು. ಬೇರೆಯವರು ನಮ್ಮ ಜೀವನದ ಬಗ್ಗೆ ಅವರಿಗೆ ತೋಚಿದಂತೆ ಬರೆಯಲು ಅವಕಾಶ ನೀಡಬಾರದು.
ಕಷ್ಟ ಎಲ್ಲರಿಗೂ ಬರುತ್ತದೆ ಅಂತಹ ಸವಾಲನ್ನು ಎದುರಿಸಿ ಮುಂದೆ ಸಾಗುವುದೇ ಬದುಕಿಗೆ ನಿಜ ಅರ್ಥ ತಿಳಿಸುತ್ತದೆ
ಇತರರ ಕಷ್ಟ ನೋಡಿ ನಗುವಿನೊಂದಿಗೆ ಕಾಲ ಕಳೆದವರು ಮುಂದೊಂದು ದಿನ ಅಳುವ ಸಂದರ್ಭ ಖಂಡಿತವಾಗಿಯೂ ಬರುತ್ತದೆ ” ಕರ್ಮಫಲ ಅನ್ನೋದು ಅದಕ್ಕೇ” ಈ ಮಾತನ್ನು ನಾನು ಯಾವತ್ತೂ ನಂಬುತ್ತೇನೆ. ಹೀಗಾಗಿ ಯಾವತ್ತೂ ಬೇರೆಯವ ಬದುಕಿನ ಬಗ್ಗೆ ಕಥೆ ಕಟ್ಟುವ ವ್ಯಕ್ತಿ ನೀವಾಗಿದ್ದಲ್ಲಿ ಇಂತಹ ಕಾರ್ಯದಿಂದ ದೂರವಿರಿ. ಇತರರ ಸಾಧನೆಯಲ್ಲಿ ಖುಷಿಪಡುವುದನ್ನು ಕಲಿಯಿರಿ. ಏನಾದರೂ ಸಾಧನೆ ಮಾಡಿದಲ್ಲಿ ಅದರ ಕುಂದು ಕೊರತೆ ಯನ್ನು ಹುಡುಕುತ್ತಾ ಹೋದಲ್ಲಿ ನೀವು ಅಲ್ಲಿಯೇ ಇರುತ್ತೀರಿ. ಸಾಧಿಸುವವರು ಮುಂದೆ ಸಾಗುತಿರುತ್ತಾರೆ. ನಷ್ಟ ಅನುಭವಿಸುವುದು ನೀವು ಒಮ್ಮೆ ಯೋಚಿಸಿ.
- ಸಣ್ಣ ಸಣ್ಣ ಕಷ್ಟಗಳಿಗೆ ಚಿಂತಿಸುವವರು ಬಡತನದಿಂದ ಬೆಂದವರ ಜೊತೆ ಮಾತಾಡಿ,
- ಆಕ್ಸಿಜನ್ ಬೆಲೆ ತಿಳಿಯಲು ಆಸ್ಪತ್ರೆಯ ಐ .ಸಿ .ಯು ನೋಡಿ ,
- ಮನೆಗಾಗಿ, ಆಸ್ತಿಗಾಗಿ ಕಾದಾಡುವವರು ರಸ್ತೆ ಬದಿಯಲ್ಲಿ ಮಲಗಿದ ಜೀವವನ್ನು ನೋಡಿ,
- ಪ್ರೀತಿಯ ಕೊರತೆಯ ಬಗ್ಗೆ ಮಾತನಾಡುವವರು ಅನಾಥಾಶ್ರಮಕ್ಕೆ ಭೇಟಿ ನೀಡಿ..
- ನೀವು ನೆನಸಿದ ಹಾಗೆ ನಿಮ್ಮ ಬದುಕನ್ನು ರೂಪಿಸಲು ಸಾಧ್ಯ ವಿಲ್ಲ. ಆದರೆ ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ.
- ಬದುಕಲ್ಲಿ ತಪ್ಪು ನಡೆದರೆ ಕೊರಗದೆ ನಮ್ಮ ಮುಂದಿನ ಬದುಕಿಗೆ ಮಾರ್ಗ ತಿಳಿದುಕೊಳ್ಳೋಣ.
- ಖುಷಿ ಘಟನೆ ಆದಲ್ಲಿ ಇನ್ನಷ್ಟು ಒಳಿತಾಗಲು ಪ್ರಯತ್ನಿಸೋಣ.
- ಕಷ್ಟಬಂದರೆ ಸರಿಪಡಿಸಲು ದಾರಿ ಹುಡುಕುವ ಪ್ರಯತ್ನ ಮಾಡೋಣ.
- ಇತರರ ಸಾಧನೆಯನ್ನು ಮಾರ್ಗದರ್ಶನದಂತೆ ಸ್ವೀಕರಿಸಿ, ನಿಮ್ಮವರಿಗಾಗಿ, ನಿಮಗಾಗಿ ಬದುಕಿ. ಯಾಕೆಂದರೆ ಇರುವುದು ಒಂದು ಬದುಕು ಒಮ್ಮೆ ಯೋಚಿಸಿ.
ಬರಹ: ರಶ್ಮಿ ಉಳ್ಳಾಲ್

ರಶ್ಮಿ ಉಳ್ಳಾಲ್
Read more
[wpas_products keywords=”deal of the day sale today offer all”]