ಹೈಲೈಟ್ಸ್:
- ಬೆಂಗಳೂರಿನಲ್ಲಿ ನಡೆಯುತ್ತಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್.
- ಆರು ಪಂದ್ಯಗಳಲ್ಲಿ 4 ಜಯ ದಾಖಲಿಸಿ ಮಿಂಚಿರುವ ಬೆಂಗಳೂರು ಬುಲ್ಸ್.
- ಅಂಕಪಟ್ಟಿಯ ಅಗ್ರಸ್ಥಾನದ ಕಡೆಗೆ ಕಣ್ಣಿಟ್ಟಿರುವ ಪವನ್ ಕುಮಾರ್ ಬಳಗ.
ಯು ಮುಂಬಾ ವಿರುದ್ಧ ಮುಗ್ಗರಿಸಿದ್ದ ಪವನ್ ಕುಮಾರ್ ಸೆಹ್ರಾವತ್ ಸಾರಥ್ಯದ ಬೆಂಗಳೂರು ನಂತರ ಸತತ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಹ್ಯಾಟ್ರಿಕ್ ಜಯ ದಾಖಲಿಸಿತು. ಆದರೆ ತನ್ನ ಐದನೇ ಪಂದ್ಯದಲ್ಲಿ ಈವರೆಗೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿರುವ ತೆಲುಗು ಟೈಟನ್ಸ್ ತಂಡದ ವಿರುದ್ಧ 34-34 ಅಂಕಗಳಿಂದ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿತ್ತು. ನಂತರ ಮತ್ತೆ ಸ್ಥಿರ ಪ್ರದರ್ಶನ ನೀಡಿದ 2018ರ ಚಾಂಪಿಯನ್ ಬುಲ್ಸ್ ತಂಡ ಪುಣೇರಿ ಪಲ್ಟನ್ ತಂಡದ ವಿರುದ್ಧ 40-29 ಅಂಕಗಳ ಅಂತರದಿಂದ ಗೆಲ್ಲುವುದರೊಂದಿಗೆ ಮತ್ತೆ ಗೆಲುವಿನ ಲಯ ಮುಂದುವರಿಸಿದೆ.
ಹಿಂದಿನ ಆರು ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡಿರುವ ಸ್ಟಾರ್ ರೇಡರ್ ಪವನ್ ಕುಮಾರ್ ಸೆಹ್ರಾವತ್ ಬೆಂಗಳೂರು ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಈವರೆಗೂ 73 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿರುವ ಪವನ್ ಅತ್ಯಧಿಕ ರೇಡಿಂಗ್ ಅಂಕ ಗಳಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ದಬಾಂಗ್ ದಿಲ್ಲಿ ತಂಡದ ನವೀನ್ ಕುಮಾರ್ 106 ಅಂಕಗಳೊಂದಿಗೆ ಅಗ್ರಸ್ಥಾನ ಹೊಂದಿದ್ದಾರೆ.
ಜಯಂಟ್ಸ್ ಸೋಲಿಸಿ ಅಂಕಪಟ್ಟಿಯ ಪಾತಾಳದಿಂದ ಮೇಲೆದ್ದ ಪಲ್ಟನ್!
ಅತ್ತ ಲೀಗ್ ನ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದಿದ್ದು, ಮೂರರಲ್ಲಿ ಸೋಲುಂಡಿದೆ. ಸದ್ಯ 12 ಅಂಕ ಹೊಂದಿರುವ ಜೈಪುರ ತಂಡ 12 ತಂಡಗಳಿರುವ ಟೂರ್ನಿಯ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು, ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಗೆಲುವಿನ ಹಾದಿಗೆ ಮರಳಲು ಹಾತೊರೆಯುತ್ತಿದ್ದು, ಬಲಿಷ್ಠ ಬುಲ್ಸ್ ವಿರುದ್ಧ ಪುಟಿದೇಳುವ ನಿರೀಕ್ಷೆಯಲ್ಲಿದೆ.
ದಿನದ ಮತ್ತೊಂದು ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಮುಖಾಮುಖಿಯಾಗುತ್ತಿವೆ. ತಲೈವಾಸ್ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಯು.ಪಿ. ಯೋಧಾ ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದ್ದರೆ, ಪಟನಾ ತಂಡ ಕೂಡ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಲಯಕ್ಕೆ ಮರಳಿದೆ.ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದಾಗಿದೆ.
ತಮಿಳ್ ತಲೈವಾಸ್‌ಗೆ ತಲೆ ಬಾಗಿದ ಯುಪಿ ಯೋಧರು!
ಬೆಂಗಳೂರು ಬುಲ್ಸ್ ಪಂದ್ಯಗಳ ವೇಳಾಪಟ್ಟಿ
ಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ
- ಬೆಂಗಳೂರು ಬುಲ್ಸ್ vs ಯು ಮುಂಬಾ (ಡಿ.22): ಸೋಲು
- ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್ (ಡಿ.24): ಗೆಲುವು
- ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ (ಡಿ.26): ಗೆಲುವು
- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ (ಡಿ.30): ಗೆಲುವು
- ಬೆಂಗಳೂರು ಬುಲ್ಸ್ vs ತೆಲುಗು ಟೈಟನ್ಸ್ (ಜ.01): ಸಮಬಲ
- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ (ಜ.02): ಗೆಲುವು
- ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ಜ.06)
- ಬೆಂಗಳೂರು ಬುಲ್ಸ್ vs ಯುಪಿ ಯೋಧಾ (ಜ.09)
- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ (ಜ.12)
- ಬೆಂಗಳೂರು ಬುಲ್ಸ್ vs ಗುಜರಾತ್ ಜಯಂಟ್ಸ್ (ಜ.14)
- ಬೆಂಗಳೂರು ಬುಲ್ಸ್ vs ಪಟನಾ ಪೈರೇಟ್ಸ್ (ಜ.16)
ಟೂರ್ನಿಯ ಎರಡನೇ ಚರಣದಲ್ಲಿಯೂ ಬೆಂಗಳೂರು ತಂಡ 11 ಲೀಗ್ ಪಂದ್ಯಗಳನ್ನು ಆಡಲಿದ್ದು, ನಂತರ ನಾಕ್‌ಔಟ್ ಹಂತದ ಪಂದ್ಯಗಳು ಜರುಗಲಿವೆ.
Read more
[wpas_products keywords=”deal of the day gym”]