Karnataka news paper

2 ಪಾರಿವಾಳಗಳ ಕಾಲಲ್ಲಿ ಶಂಕಾಸ್ಪದ ಡಿವೈಸ್‌ : ಪೋರ್‌ಬಂದರ್‌ ಹಡಗಿನಲ್ಲಿ ಕೂತಿದ್ದ ಹಕ್ಕಿಗಳು!


ಹೈಲೈಟ್ಸ್‌:

  • ಶಂಕಾಸ್ಪದ ಡಿವೈಸ್‌ ಹೊಂದಿದ್ದ ಎರಡು ಪಾರಿವಾಳಗಳು ಪತ್ತೆ
  • ಪೋರ್‌ಬಂದರ್‌ ಹಡಗಿನಲ್ಲಿ ಕೂತಿದ್ದ ಹಕ್ಕಿಗಳು
  • ಡಿವೈಸ್‌ ಬೇರ್ಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ

ಅಹಮದಾಬಾದ್‌: ಗುಜರಾತ್‌ನಲ್ಲಿ ಅನುಮಾನಾಸ್ಪದ ಡಿವೈಸ್‌ಗಳಿದ್ದ ಎರಡು ಪಾರಿವಾಳಗಳನ್ನು ಮೀನುಗಾರೊಬ್ಬರು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ”ಮೀನುಗಾರರೊಬ್ಬರು ಮೀನುಗಾರಿಕೆಗೆ ಇಳಿದಾಗ ಎರಡು ಪಾರಿವಾಳಗಳು ಬಂದು ಹಡಗಿನ ಮೇಲೆ ಕುಳಿತಿವೆ. ಹಾಗೆಯೇ ಹಡಗು ಪೋರ್‌ಬಂದರ್‌ಗೆ ಬಂದಿದ್ದು, ಅವುಗಳ ಕಾಲಿಗೆ ಉಂಗುರ ಆಕಾರದಂತಿರುವ ಡಿವೈಸ್‌ಗಳನ್ನು ಕಟ್ಟಿದ್ದು ಗಮನಿಸಿದ್ದಾರೆ. ಇದಾದ ಬಳಿಕ ಅವರು ಪಾರಿವಾಳಗಳನ್ನು ಹಿಡಿದು ಪೊಲೀಸರಿಗೆ ನೀಡಿದ್ದು, ಇದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ,” ಎಂದು ಪೋರ್‌ಬಂದರ್‌ ಉಪ ಪೊಲೀಸ್‌ ವರಿಷ್ಠಾಧಿಕಾರಿ ಸ್ಮಿತ್‌ ಗೋಹಿಲ್‌ ತಿಳಿಸಿದರು.

”ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಪಾರಿವಾಳಗಳಿಗೆ ಕಟ್ಟಿರುವ ಡಿವೈಸ್‌ಗಳನ್ನು ಬೇರ್ಪಡಿಸಲಾಗುತ್ತದೆ. ಇದಾದ ಬಳಿಕ ಸಾಧನಗಳನ್ನು ಗಾಂಧಿನಗರದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ,” ಎಂದು ವಿವರಿಸಿದರು.

ಜೈಷೆ ಮೊಹಮ್ಮದ್‌ ಉಗ್ರನ ಹತ್ಯೆ!
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯು ಭಾನುವಾರ ಬೆಳಗ್ಗೆ ಜೈಷೆ ಮೊಹಮ್ಮದ್‌ ಉಗ್ರನೊಬ್ಬನನ್ನು ಹತ್ಯೆಗೈದಿದ್ದಾರೆ. ಪುಲ್ವಾಮ ಜಿಲ್ಲೆ ಬರಗಾಮ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ಶರಣಾಗುವಂತೆ ಶೋಧದ ವೇಳೆ ಹಲವು ಬಾರಿ ಸೂಚನೆ ನೀಡಿದರು. ಅದಕ್ಕೆ ಮಣಿಯದ ಉಗ್ರ ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದಾಗ, ಸೈನಿಕರು ಉಗ್ರನನ್ನು ಹೊಡೆದುರುಳಿಸಿದ್ದಾರೆ. ಹತನಾದವನನ್ನು ಸಮೀರ್‌ ಅಹ್ಮದ್‌ ತಂತ್ರಾಯ್‌ ಎಂದು ಗುರುತಿಸಲಾಗಿದೆ.

ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ದುರಂತ: ಎಲ್ಲ ಸೈನಿಕರ ಶವದ ಗುರುತು ಪತ್ತೆ



Read more