ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ನ ಬೆಂಗಳೂರು ಪೀಠದಲ್ಲಿ ಜ.5ರಿಂದ 14ರವರೆಗೆ ವಿಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ಕಲಾಪ ನಡೆಸಲಾಗುವುದು. ಈ ಕುರಿತಂತೆ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಹೈಕೋರ್ಟ್ ಪೀಠ ಹಾಗೂ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೂ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಕೇವಲ ತುರ್ತು ಪ್ರಕರಣಗಳ ವಿಚಾರಣೆಗೆ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಹೈಕೋರ್ಟ್ನ ಧಾರವಾಡ, ಕಲ್ಬುರ್ಗಿ ಪೀಠಗಳಲ್ಲಿ ಎಂದಿನಂತೆ ಭೌತಿಕ ವಿಚಾರಣೆ ಜತೆಗೆ, ಹೈಬ್ರಿಡ್ ಮಾದರಿಯಲ್ಲೇ ಕಲಾಪ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್ ಸ್ಥಾನದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ ಸದ್ಯ ಜ.14ವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ನಂತರ ಪರಿಸ್ಥಿತಿ ಗಮನಿಸಿ ಮಾರ್ಗಸೂಚಿ ಹಾಗೂ ಆದೇಶಗಳನ್ನು ಪರಿಷ್ಕರಿಸಲಾಗುವುದು. ವಿಡಿಯೊ ಕಾನ್ಫರೆನ್ಸ್ಗೆ ಅಗತ್ಯ ಲಿಂಕ್ಗಳನ್ನು ಒದಗಿಸಲಾಗುವುದು. ಕೋರ್ಟ್ಗೆ ಆಗಮಿಸುವ ಸಿಬ್ಬಂದಿ ಹಾಗೂ ಪೊಲೀಸರು ಮಾಸ್ಕ್ ಧಾರಣೆ ಸೇರಿದಂತೆ ಎಲ್ಲ ಕೋವಿಡ್ ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೈಕೋರ್ಟ್ಗೆ ಬರುವ ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ಯಾನ್ಗೆ ಒಳಪಡಿಸಲಾಗುವುದು. ವಕೀಲರು ಹೆಚ್ಚಾಗಿ ವಿಸಿ ವಿಧಾನ ಬಳಕೆ ಮಾಡಬೇಕು. ಕೇಸ್ಗಳ ಫೈಲಿಂಗ್ ಅನ್ನು ಇ-ಫೈಲಿಂಗ್ನಲ್ಲೇ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.