Karnataka news paper

ಭರ್ಜರಿ ಸೆಟ್‌ನಲ್ಲಿ ನಡೆಯುತ್ತಿದೆ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರೀಕರಣ


ಹೈಲೈಟ್ಸ್‌:

  • ಧನಂಜಯ ನಟನೆಯ ಚಿತ್ರ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’
  • ಸ್ಪಾ ಸೆಟ್‌ನಲ್ಲಿ ನಡೆಯುತ್ತಿದೆ ಚಿತ್ರದ ಶೂಟಿಂಗ್
  • ಕುಶಾಲ್ ಗೌಡ ನಿರ್ದೇಶನದ ಚಿತ್ರ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’

ಹರೀಶ್‌ ಬಸವರಾಜ್‌
ಡಾಲಿ ಧನಂಜಯ ನಾಯಕರಾಗಿರುವ ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ಎಚ್‌ಎಂಟಿಯಲ್ಲಿ ಭರ್ಜರಿ ಸೆಟ್‌ ಹಾಕಲಾಗಿದೆ.

ಅದೊಂದು ಹಳೆಯ ಕಟ್ಟಡ. ನೋಡಿದ ತಕ್ಷಣ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಅಭಿಪ್ರಾಯ ಮೂಡಿಸುತ್ತದೆ. ಆದರೆ ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಸಿನಿಮಾ ತಂಡ ಅಲ್ಲಿಯೇ ಅದ್ಭುತವಾದ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ಮಾಡುತ್ತಿದೆ. ಈ ಬಗ್ಗೆ ಹೇಳಿರುವ ನಿರ್ದೇಶಕ ಕುಶಾಲ್‌ ಗೌಡ, ‘ಜಮಾಲಿಗುಡ್ಡ ಸಿನಿಮಾವನ್ನು ಯಾವುದೇ ಜಾನರ್‌ಗೆ ಸೇರಿಸಲು ಸಾಧ್ಯವಿಲ್ಲ. ಇದರಲ್ಲಿ ವಿಭಿನ್ನ ಶೈಲಿಯ ಕಥೆಯಿದೆ. ಒಂದು ರೀತಿಯಲ್ಲಿ ಲವ್‌ ಕಮ್‌ ಥ್ರಿಲ್ಲರ್‌ ಎನ್ನಬಹುದು. ಸದ್ಯಕ್ಕೆ ಇಂಡೋರ್‌ ಶೂಟಿಂಗ್‌ ಮಾಡುತ್ತಿದ್ದೇವೆ. ನಿರ್ಮಾಪಕರಾದ ಹರಿ ರೆಡ್ಡಿಯವರು ನನ್ನ ಕಲ್ಪನೆಗೆ ತಕ್ಕಂತೆ ಸೆಟ್‌ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಸ್ಪಾಗಳು ಮತ್ತು ಅದರಲ್ಲಿ ಕೆಲಸ ಮಾಡುವವರ ಮನೆಗಳು ಕೊಂಚ ವಿಭಿನ್ನವಾಗಿರಲಿವೆ. ಕಲಾ ನಿರ್ದೇಶಕ ಸತೀಶ್‌ ಈ ಸೆಟ್‌ ಹಾಕುತ್ತಿದ್ದಾರೆ’ ಎಂದಿದ್ದಾರೆ.

ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು!
ಡಾಲಿ ಧನಂಜಯ ನಟನೆಯ ಈ ಸಿನಿಮಾದಲ್ಲಿ ಸ್ಪಾ ಒಂದು ಪ್ರಮುಖ ಲೊಕೇಶನ್‌ ಆಗಿರಲಿದ್ದು, ಇದಕ್ಕಾಗಿ ಹಳೆ ಕಟ್ಟಡವನ್ನು ಐಷಾರಾಮಿ ಸ್ಪಾದಂತೆ ರೆಡಿ ಮಾಡಲಾಗುತ್ತಿದೆ. ಹಲವು ಕೆಲಸಗಾರರು ಸೆಟ್‌ ಹಾಕುವ ಕೆಲಸದಲ್ಲಿ ನಿರತರಾಗಿದ್ದು, ಎಲ್ಲವೂ ನಿರ್ದೇಶಕರ ಕಲ್ಪನೆಯಂತೆ ತಯಾರಾಗುತ್ತಿದೆ. ಈ ಸೆಟ್‌ನಲ್ಲಿ ಸದ್ಯಕ್ಕೆ ಭಾವನಾ ರಾಮಣ್ಣ, ನಾಯಕಿ ಅದಿತಿ ಪ್ರಭುದೇವ, ಭಾಸ್ಕರ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದು, ಇನ್ನೊಂದೆರಡು ದಿನಗಳಲ್ಲಿ ಇನ್ನೂ ಕೆಲವು ಕಲಾವಿದರು ಸೇರಿಕೊಳ್ಳಲಿದ್ದಾರೆ. ‘ಭಾವನಾ ರಾಮಣ್ಣ ನಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ, ಕಾಸ್ಟ್ಯೂಮ್‌ಗಳೆಲ್ಲವೂ ವಿಭಿನ್ನವಾಗಿರಲಿವೆ. ಬಹಳ ದಿನಗಳ ನಂತರ ಅವರು ನಟಿಸುತ್ತಿದ್ದು, ಈ ಸಿನಿಮಾದ ಕಥೆ ಕೇಳಿ ಖುಷಿಯಿಂದ ಈ ಪಾತ್ರ ಮಾಡುತ್ತಿದ್ದಾರೆ’ ಎಂದಿದ್ದಾರೆ ನಿರ್ದೇಶಕ ಕುಶಾಲ್‌.

‘ಹೆಡ್ ಬುಷ್’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು: ಕನ್ನಡಕ್ಕೆ ಬಂದ್ರು ‘RX 100’ ಬೆಡಗಿ ಪಾಯಲ್
ಈ ಸಿನಿಮಾದಲ್ಲಿ ಡಾಲಿ ಧನಂಜಯ ಜತೆಗೆ ಪ್ರಕಾಶ್‌ ಬೆಳವಾಡಿ, ಯಶ್‌ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಕಾರ್ತಿಕ್‌ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದು, ಹರೀಶ್‌ ಕೊಮ್ಮೆ ಸಂಕಲನಕಾರರಾಗಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿರುವ ಈ ಸಿನಿಮಾಗೆ ಜಮಾಲಿಗುಡ್ಡ ಎಂಬ ಕಾಲ್ಪನಿಕ ಗುಡ್ಡದ ಮೇಲೆ ನಿರ್ದೇಶಕರು ಕಥೆ ಬರೆದಿದ್ದಾರೆ. ಸದ್ಯಕ್ಕೆ ಇದೇ ಸೆಟ್‌ನಲ್ಲಿ ಹಲವು ದಿನಗಳ ಚಿತ್ರೀಕರಣ ನಡೆಯಲಿದ್ದು, ನಂತರ ಹೊರಾಂಗಣ ಚಿತ್ರೀಕರಣಕ್ಕಾಗಿ ಚಿತ್ರತಂಡ ಪ್ರಯಾಣ ಬೆಳೆಸಲಿದೆ.

ಹಳ್ಳಿಯ ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್ ನೀಡಿ ಸಹಾಯ ಮಾಡಿದ ‘ಡಾಲಿ’ ಧನಂಜಯ!
‘ಈ ಸಿನಿಮಾ ಕಥೆಯಲ್ಲಿ ಐಷಾರಾಮಿ ಸ್ಪಾ ಬರುತ್ತದೆ. ಸ್ಪಾದಲ್ಲಿ ಚಿತ್ರೀಕರಣ ಕಷ್ಟವಾಗುವ ಕಾರಣ ಅಂಥದ್ದೇ ಸೆಟ್‌ ಹಾಕಿಸುತ್ತಿದ್ದೇವೆ. ಒರಿಜಿನಲ್‌ ಸ್ಪಾದಂತೆಯೇ ಭಾಸವಾಗುವ ರೀತಿಯಲ್ಲಿ ಅದನ್ನು ಸೃಷ್ಟಿಸುತ್ತಿದ್ದೇವೆ’ ಎಂದು ಕುಶಾಲ್ ಗೌಡ ಹೇಳಿದ್ದಾರೆ.

ಡಾಲಿ ಧನಂಜಯರಿಗೆ 2021 ಒಂದರ್ಥದಲ್ಲಿ ಲಕ್ಕಿ ವರ್ಷ ಎನ್ನಬಹುದು. ಅವರ ನಟನೆಯ ‘ರತ್ನನ್‌ ಪ್ರಪಂಚ’, ‘ಸಲಗ’, ‘ಬಡವ ರಾಸ್ಕಲ್‌’ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿವೆ. ಪ್ರತಿ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರ ಮತ್ತು ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವರ ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಸಿನಿಮಾದ ಕಥೆಯೂ ವಿಭಿನ್ನವಾಗಿದೆ.

‘Once Upon a time in ಜಮಾಲಿಗುಡ್ಡ’ದಲ್ಲಿ ಪ್ರಕಾಶ್ ಬೆಳವಾಡಿ ಸರ್ ಪಾತ್ರ ನೋಡಿ ವಾವ್ ಅನಿಸಿತು: ನಟ ಧನಂಜಯ



Read more

[wpas_products keywords=”deal of the day party wear dress for women stylish indian”]