The New Indian Express
ಬೆಂಗಳೂರು: ಓಮಿಕ್ರಾನ್ ಭೀತಿ ನಡುವೆಯೇ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್-19 ಸೋಂಕು ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಕೆಲ ಶಾಲೆಗಳು ಈಗಾಗಲೇ ದೈಹಿಕ ತರಗತಿಗಳನ್ನು ಸ್ಥಗಿತಗೊಳಿಸಿದ್ದು, ಉಳಿದ ಶಾಲೆಗಳು ಕಾದುನೋಡುವ ನಿಮಯದ ಮೊರೆ ಹೋಗಿವೆ.
ಹೌದು.. ಕೋವಿಡ್ -19 ಪ್ರಕರಣಗಳ ಉಲ್ಬಣ ಮತ್ತು ಒಮಿಕ್ರಾನ್ ರೂಪಾಂತರದಿಂದಾಗಿ ಆರ್ಕಿಡ್ಸ್ ಇಂಟರ್ನ್ಯಾಷನಲ್ ಶಿಕ್ಷಣ ಸಂಸ್ಥೆಯಡಿಯಲ್ಲಿ ಬರುವ 16 ಶಾಲೆಗಳು ಆಫ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿದ್ದು, ಆನ್‌ಲೈನ್ ತರಗತಿಗಳಿಗೆ ಬದಲಾಯಿಸಲು ನಿರ್ಧರಿಸಿವೆ. ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನಲೆಯಲ್ಲಿ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಈ ರೀತಿಯಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮಕ್ಕಳ ರಕ್ಷಣೆಗೆ ಪ್ರಪಂಚದಾದ್ಯಂತ ಆಸ್ಪತ್ರೆಯ ದತ್ತಾಂಶ ಮೇಲ್ವಿಚಾರಣೆ ಮಾಡುತ್ತಿರುವ ಭಾರತ!!
ಆನ್‌ಲೈನ್ ತರಗತಿಗಳಿಗೆ ಶಿಫ್ಟ್ ಮಾಡುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಯಾವುದೇ ಅಧಿಸೂಚನೆಯನ್ನು ಹೊರಡಿಸದಿದ್ದರೂ, ಶಾಲೆಗಳು ಮಕ್ಕಳ ಸುರಕ್ಷತೆಯ ಬಗ್ಗೆ ಗೊಂದಲ ಮತ್ತು ಪೋಷಕರ ಕಾಳಜಿಯನ್ನು ಉಲ್ಲೇಖಿಸಿ ಆಫ್ ಲೈನ್ ತರಗತಿ ಸ್ಥಗಿತಕ್ಕೆ ಮುಂದಾಗುತ್ತಿವೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ನಾಗರಭಾವಿ ಶಾಖೆಯ ಪ್ರಾಚಾರ್ಯ ಜೆಮಿ ಸುಧಾಕರ್ ಅವರು, ಶಾಲಾ ಆಡಳಿತ ಮಂಡಳಿಯು ದೈಹಿಕ ತರಗತಿಗಳನ್ನು ಪುನಃ ತೆರೆಯದಿರಲು ನಿರ್ಧರಿಸಿದೆ ಮತ್ತು ಭಾರತದಾದ್ಯಂತ ಆರ್ಕಿಡ್ಸ್ ಶಾಲೆಗಳ ಎಲ್ಲಾ 48 ಶಾಖೆಗಳಲ್ಲಿ ಜನವರಿ 4 ರಿಂದ ವರ್ಚುವಲ್ ತರಗತಿಗಳಿಗೆ ಬದಲಾಯಿಸಲು ನಿರ್ಧರಿಸಿದೆ. ಶಾಲಾ ಆಡಳಿತ ಮಂಡಳಿ ನಿರ್ಧಾರಕ್ಕೆ ಪೋಷಕರೂ ಸಹ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ, ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪ್ರಾಂಶುಪಾಲರಾದ ಅಲೋಶಿಯಸ್ ಡಿ’ಮೆಲ್ಲೋ ಅವರು ಮಾತನಾಡಿ, “ಸೋಂಕು ಪ್ರಕರಣಗಳ ಹೆಚ್ಚಳವು ಪೋಷಕರನ್ನು ಚಿಂತೆಗೀಡುಮಾಡುತ್ತಿದೆ. ಆದ್ದರಿಂದ, ಹೆಚ್ಚಿನ ಪೋಷಕರು ಆನ್‌ಲೈನ್ ತರಗತಿಗಳನ್ನು ಬಯಸುತ್ತಿದ್ದಾರೆ. ಆದಾಗ್ಯೂ, ಕೆಲವು ಶಾಲೆಗಳು ಆನ್‌ಲೈನ್ ತರಗತಿಗಳಿಗೆ ಶಿಫ್ಟ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಯುತ್ತಿವೆ.
ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕಿ ಶ್ವೇತಾ ಶಾಸ್ತ್ರಿ ಅವರು ಮಾತನಾಡಿ, ‘ಈ ಸಮಯದಲ್ಲಿ, ನಾವು ಆಫ್‌ಲೈನ್ ತರಗತಿಗಳನ್ನು ಹೊಂದಲು ಯೋಜಿಸಿದ್ದೇವೆ ಮತ್ತು ನಮ್ಮ ನಿರ್ಧಾರಕ್ಕೆ ಪೋಷಕರಿಂದಲೂ ಯಾವುದೇ ರೀತಿಯ ವಿರೋಧವಿಲ್ಲ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಸರ್ಕಾರಿ ಪ್ರೋಟೋಕಾಲ್ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಆಫ್ ಲೈನ್ ಅಥವಾ ಆನ್ ಲೈನ್: ನಿರ್ಧಾರ ಕೈಗೊಳ್ಳಲು ಶಾಲೆಗಳು ಮುಕ್ತ: ಸಚಿವಾಲಯ
ಇನ್ನು ಸರ್ಕಾರವು ಕೋವಿಡ್ ತಜ್ಞರ ಸಲಹೆಯನ್ನು ಅನುಸರಿಸುತ್ತಿದೆ ಮತ್ತು ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಯಾವುದೇ ನಿರ್ಧಾರವನ್ನು ಈ ವರೆಗೂ ತೆಗೆದುಕೊಂಡಿಲ್ಲ, ಶಾಲೆಗಳು ಅವರ ಅವಶ್ಯಕತೆಗೆ ಅನುಗುಣವಾಗಿ ಆನ್‌ಲೈನ್ ಅಥವಾ ಆಫ್‌ಲೈನ್‌ಗೆ ಹೋಗಲು ಮುಕ್ತವಾಗಿದೆ ಎಂದು ಸಚಿವರ ಕಚೇರಿಯ ಮೂಲಗಳು ತಿಳಿಸಿವೆ.
ಶಾಲೆ ಸ್ಥಗಿತ ಬೇಡ: ಸರ್ಕಾರಕ್ಕೆ ಕಾಮ್ಸ್ ಮನವಿ
ಇನ್ನು ಕರ್ನಾಟಕದಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳು (ಕೆಎಎಂಎಸ್) ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜ್ಞಾಪಕ ಪತ್ರವನ್ನು ಕಳುಹಿಸಿದ್ದು, ವಿದ್ಯಾರ್ಥಿಗಳು ಒಂದು ವರ್ಷದ ಶಿಕ್ಷಣವನ್ನು ಕಳೆದುಕೊಂಡಿರುವುದರಿಂದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚದಂತೆ ಪತ್ರದಲ್ಲಿ ಕೇಳಿದೆ ಮತ್ತು ಆನ್‌ಲೈನ್‌ಗೆ ಬದಲಾಯಿಸುವುದು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಕೆಎಎಂಎಸ್‌ನ ಪ್ರಧಾನ ಕಾರ್ಯದರ್ಶಿ ಡಾ ಶಶಿ ಕುಮಾರ್ ಅವರು, ‘ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಬಳಸುವಾಗ ಮತ್ತು ಟ್ಯೂಷನ್‌ಗಳ ಸಮಯದಲ್ಲಿ ಮಕ್ಕಳಿಗೆ ಕಾಳಜಿ ವಹಿಸಲು ಎಸ್‌ಒಪಿಗಳನ್ನು ನೀಡುವಂತೆ ನಾವು ವಿನಂತಿಸಿದ್ದೇವೆ. ಶಾಲೆಗಳನ್ನು ಮುಚ್ಚುವ ಕುರಿತು ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳ ಮೂಲಕ ಗೊಂದಲ ಮತ್ತು ತಪ್ಪು ಮಾಹಿತಿ ಹರಡಿರುವುದರಿಂದ ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಯ ಪೋಷಕರು ಶಾಲೆಗಳು ಆನ್‌ಲೈನ್‌ಗೆ ಹೋಗಬಹುದು, ಆದರೆ ಆಟದ ಸಮಯ, ಟ್ಯೂಷನ್‌ಗಳು ಅಥವಾ ಕುಟುಂಬ ಕೂಟಗಳಂತಹ ಚಟುವಟಿಕೆಗಳಲ್ಲಿ ಮಕ್ಕಳ ರಕ್ಷಣೆ ಸಮಸ್ಯೆಯಾಗಿಯೇ ಉಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಿಗೆ ಲಸಿಕೆ ಹಾಕಿಸಿ: ಶಿಕ್ಷಣ ಸಚಿವರ ಮನವಿ
ಸೋಮವಾರ ಹದಿಹರೆಯದವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಸಚಿವ ಬಿ ಸಿ ನಾಗೇಶ್ ಅವರು ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ಹಾಕುವಂತೆ ಪೋಷಕರನ್ನು ಒತ್ತಾಯಿಸಿದರು. ಕೋವಿಡ್ -19 ಬಂದಾಗ ಪೋಷಕರು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕೋವಿಡ್‌ನಿಂದಾಗಿ ಯಾವುದೇ ಮಗುವಿನ ಶಿಕ್ಷಣವು ಅಪೂರ್ಣವಾಗಿರಬಾರದು. ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಮತ್ತು ಮೂರನೇ ತರಂಗವನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಗಮನಿಸುವುದು ಮತ್ತು ಸರಿಯಾಗಿ ನೈರ್ಮಲ್ಯೀಕರಣದಂತಹ ಸರಿಯಾದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಬಿಸಿ ನಾಗೇಶ್ ಅವರು, ಸೌಮ್ಯ ರೋಗಲಕ್ಷಣಗಳೊಂದಿಗೆ ಇತ್ತೀಚೆಗೆ ಕೋವಿಡ್‌ಗೆ ಸೋಂಕಿಗೆ ತುತ್ತಾಗಿದ್ದರು. ಈ ಹಿಂದೆ ತಮ್ಮ ತವರು ಪಟ್ಟಣವಾದ ತಿಪಟೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದರು, ಆದರೆ ನಂತರ ತಮ್ಮ ಕ್ವಾರಂಟೈನ್ ಮುಂದುವರಿಸಲು ಬೆಂಗಳೂರಿಗೆ ತೆರಳಿದ್ದಾರೆ ಮತ್ತು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
Read more
[wpas_products keywords=”deal of the day”]