Karnataka news paper

ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗೆ 2022ರಲ್ಲೂ ಶೇ.7.6ರ ಬಡ್ಡಿ ಲಭ್ಯ! ಮಾಹಿತಿ ಇಲ್ಲಿದೆ


ಹೊಸದಿಲ್ಲಿ:ಸುಕನ್ಯಾ ಸಮೃದ್ಧಿ ಯೋಜನೆ: ಸತತ ನಾಲ್ಕನೇ ತ್ರೈಮಾಸಿಕದಿಂದಲೂ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳಿಗೆ ಕಳೆದ ವರ್ಷದ ( 2021) ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿದ್ದ ಬಡ್ಡಿದರಗಳೇ 2022ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲೂ ಮುಂದುವರಿದಿವೆ.

ಸಣ್ಣ ಉಳಿತಾಯ ಯೋಜನೆಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆ’ ಪ್ರಮುಖವಾದುದು. ಹೆಣ್ಣು ಮಗುವಿನ ಭವಿಷ್ಯವನ್ನು ಆರ್ಥಿಕವಾಗಿ ಸುಭದ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ 2015 ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯ ಪ್ರಾಮುಖ್ಯತೆ ಕುರಿತ ವಿವರ ಇಲ್ಲಿದೆ.

ಈ ಯೋಜನೆಯಡಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿಗೆ ಖಾತೆ ತೆರೆಯಬಹುದು. ಪೋಸ್ಟ್ ಆಫೀಸ್ ಅಥವಾ ಯಾವುದೇ ವಾಣಿಜ್ಯ ಬ್ಯಾಂಕುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಬಹುದು. ಯೋಜನೆಯಡಿಯಲ್ಲಿ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಖಾತೆ ತೆರೆಯಬಹುದು. ಒಂದು ವೇಳೆ ಅವಳಿ ಹೆಣ್ಣು ಮಕ್ಕಳಿದ್ದು, ನಂತರದ ಮಗುವೂ ಹೆಣ್ಣು ಮಗುವಾದರೆ, 3ನೇ ಮಗುವಿಗೂ ಖಾತೆ ತೆರೆಯಬಹುದು. ಮೊದಲು ಒಂದು ಹೆಣ್ಣು ಮಗುವಿದ್ದು, ನಂತರ ಅವಳಿ ಹೆಣ್ಣು ಮಕ್ಕಳಾದರೆ ಕೂಡ ಪೋಷಕರು ಎಲ್ಲಾ ಮೂರು ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಅದೇ ರೀತಿ, ಯಾರಾದರೂ ಒಂದೇ ಬಾರಿಗೆ ಮೂರು ಹುಡುಗಿಯರನ್ನು ಹೊಂದಿದ್ದರೆ, ಈ ನಿಯಮವು ಸಹ ಅನ್ವಯಿಸುತ್ತದೆ, ಆದಾಗ್ಯೂ ಈ ಸಂದರ್ಭಗಳಲ್ಲಿ ಅವಳಿ ಮಕ್ಕಳನ್ನು ಹೊಂದಿರುವ ದಾಖಲೆಗಳನ್ನು ನೀಡಬೇಕಾಗುತ್ತದೆ.

ಪಿಪಿಎಫ್‌ v/s ಎಸ್‌ಎಸ್‌ವೈ: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಯಾವುದು ಸೂಕ್ತ? ಇಲ್ಲಿದೆ ಮಾಹಿತಿ!

250 ರೂಪಾಯಿಗೆ ಖಾತೆ ತೆರೆಯಬಹುದು
ಸುಕನ್ಯಾ ಸಮೃದ್ಧಿ ಖಾತೆಯನ್ನು ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ತೆರೆಯಬಹುದು ಮತ್ತು ಆರ್ಥಿಕ ವರ್ಷದಲ್ಲಿ ಕನಿಷ್ಠ ಠೇವಣಿ ₹250 ಮತ್ತು ಗರಿಷ್ಠ ₹1.5 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಹೆಣ್ಣು ಮಗುವಿನ ಪರವಾಗಿ ಆಕೆಯ ಪಾಲಕರು ತೆರೆಯಬಹುದು. ಅಂದರೆ, ಯಾರಾದರೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದರೆ, ಅವರೂ ಕೂಡ ಆ ಮಗುವಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನೂ ತೆರೆಯಬಹುದು.

ಖಾತೆಯು ಯಾವಾಗ ಪಕ್ವವಾಗುತ್ತದೆ
ಖಾತೆಯನ್ನು ತೆರೆದ ದಿನಾಂಕದಿಂದ ಗರಿಷ್ಠ 14 ವರ್ಷಗಳವರೆಗೆ ಅಥವಾ ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಹೆಣ್ಣು ಮಗು 21 ವರ್ಷಗಳನ್ನು ಪೂರೈಸಿದಾಗ ಅಥವಾ ಹೆಣ್ಣು ಮಗುವಿಗೆ ಮದುವೆಯಾದಾಗ ಯೋಜನೆಯು ಪಕ್ವವಾಗುತ್ತದೆ. 14 ವರ್ಷದ ಅವಧಿ ಮುಗಿದ ಮೇಲೆ, ಆ ಸಮಯದಲ್ಲಿ ನಿಗದಿಪಡಿಸಿದ ಬಡ್ಡಿ ದರದಲ್ಲಿ ಮೆಚ್ಯೂರಿಟಿ ತನಕ ಹಣ ಖಾತೆಗೆ ಸೇರ್ಪಡೆಯಾಗುತ್ತಲೇ ಇರುತ್ತದೆ.

‘ಸುಕನ್ಯಾ ಸಮೃದ್ಧಿ’ಯಲ್ಲಿ ‘ಭಾಗ್ಯಲಕ್ಷ್ಮಿ’ ಯೋಜನೆ ವಿಲೀನಕ್ಕೆ ರಾಜ್ಯ ಸಂಪುಟ ಒಪ್ಪಿಗೆ

ಈ ಪರಿಸ್ಥಿತಿಗಳಲ್ಲಿ ಹಣವನ್ನು ಅವಧಿಗೆ ಮೊದಲೇ ಹಿಂಪಡೆಯಬಹುದು
ಹೆಣ್ಣು ಮಗುವಿನ ಠೇವಣಿ ಇರಿಸುವ ಪಾಲಕರ ಮರಣದ ಸಂದರ್ಭದಲ್ಲಿ ಅಥವಾ ಯಾವುದೇ ಗಂಭೀರ ಅನಾರೋಗ್ಯದ ಚಿಕಿತ್ಸೆಗಾಗಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಅಕಾಲಿಕವಾಗಿ ಮುಚ್ಚುವ ಮೂಲಕ ಹಣವನ್ನು ಹಿಂಪಡೆಯಬಹುದು. ಅಂದಹಾಗೆ, ಈ ಯೋಜನೆಯಲ್ಲಿ, ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರವೇ ಪೂರ್ಣ ಹಣ ಲಭ್ಯವಿರುತ್ತದೆ. ಆದರೆ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ, ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿನ ಬಾಕಿಯ ಶೇ.50ರಷ್ಟು ಹಣವನ್ನು ಉನ್ನತ ಶಿಕ್ಷಣ ಅಥವಾ ಮದುವೆಗಾಗಿ ಹಿಂಪಡೆಯಬಹುದು.

ಖಾತೆಯನ್ನು ಇತರೆ ಶಾಖೆಗೆ ವರ್ಗಾಯಿಸುವ ಅವಕಾಶವಿದೆ
ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಅಂಚೆ ಕಛೇರಿ ಅಥವಾ ಬ್ಯಾಂಕ್ ಶಾಖೆಯಿಂದ ಯಾವುದೇ ಅಂಚೆ ಕಛೇರಿ / ಬ್ಯಾಂಕ್ ಶಾಖೆಗೆ ವರ್ಗಾಯಿಸುವ ಸೌಲಭ್ಯವಿದೆ. ಯಾವುದೇ ಕಾರಣದಿಂದ ಹೆಣ್ಣು ಮಗು ಮತ್ತು ಆಕೆಯ ಪೋಷಕರು ಬೇರೆ ಯಾವುದೇ ನಗರ ಅಥವಾ ರಾಜ್ಯದಲ್ಲಿ ನೆಲೆಸಿದರೆ, ಅಂತಹ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಆ ನಗರಕ್ಕೆ ವರ್ಗಾಯಿಸಲಾಗುತ್ತದೆ. ಈ ಖಾತೆಯನ್ನು ತೆರೆದ ನಂತರ ನೀವು ಬೇರೆ ದೇಶದಲ್ಲಿ ನೆಲೆಸಿದರೆ, ಆ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ ಮತ್ತು ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ



Read more

[wpas_products keywords=”deal of the day sale today offer all”]