ಎರಡನೇ ಸ್ತರದ ನಗರಗಳಲ್ಲಿ ಅಹಮದಾಬಾದ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊದಲ ನಗರವಾಗಿ ಹೊರಹೊಮ್ಮಿದೆ. ವೇತನ ಹೆಚ್ಚಳದ ನಿಟ್ಟಿನಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ವೇತನ ಹೆಚ್ಚು:
ಮೊದಲ ಸ್ತರದ ನಗರಗಳ ಪೈಕಿ ಬೆಂಗಳೂರು ವೇತನದ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕಿರಿಯ (ಜ್ಯೂನಿಯರ್) ಹಂತದ ಹುದ್ದೆಗಳಿಗೆ ಸರಾಸರಿ ವಾರ್ಷಿಕ ವೇತನ 6.7 ಲಕ್ಷ ರೂ.ಗಳಾಗಿದೆ. ಮಧ್ಯಮ ಸ್ತರದ ಹುದ್ದೆಗಳಿಗೆ 18.1 ಲಕ್ಷ ರೂ. ವೇತನ ಇದೆ. ಆದರೆ ಈ ಉನ್ನತ ಮಟ್ಟದ ಉದ್ಯೋಗಗಳು ಸಾಮಾನ್ಯವಾಗಿ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಗಳಲ್ಲಿ ಇರುತ್ತದೆ. ಎಲ್ಲ ಕ್ಷೇತ್ರಗಳ ಕಂಪನಿಗಳಲ್ಲೂ ಇದೇ ರೀತಿಯ ಭಾರಿ ವೇತನದ ಪ್ಯಾಕೇಜ್ ಸಿಗುವುದಿಲ್ಲ. ರಿಯಲ್ ಎಸ್ಟೇಟ್, ಹೆಲ್ತ್‌ಕೇರ್, ರಿಟೇಲ್, ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ಉನ್ನತ ಮಟ್ಟದ ವೇತನದ ಉದ್ಯೋಗಾವಕಾಶಗಳು ಇತ್ತೀಚಿನ ವರ್ಷಗಳಿಂದ ಸೃಷ್ಟಿಯಾಗುತ್ತಿದ್ದು, ಈ ಟ್ರೆಂಡ್ ಮುಂದುವರಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.