Karnataka news paper

ಓಮಿಕ್ರಾನ್‌ ಭೀತಿ: ರಾಜ್ಯದಲ್ಲಿ 76 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ!


ಹೈಲೈಟ್ಸ್‌:

  • ರಾಜ್ಯದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಗಳ ಸಂಖ್ಯೆ ದಿನದಿಂದ ಏರಿಕೆ
  • ರಾಜ್ಯದಲ್ಲಿ 76 ಕ್ಕೆ ಏರಿಕೆಯಾದ ಓಮಿಕ್ರಾನ್‌ ಸೋಂಕಿತರ ಸಂಖ್ಯೆ
  • ಬೆಂಗಳೂರಿನಲ್ಲಿ ಹೊಸತಾಗಿ 8 ಪ್ರಕರಣ ಹಾಗೂ ಧಾರವಾಡದಲ್ಲಿ 2 ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಹೊಸತಾಗಿ ಹತ್ತು ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ.

ಈ ಕುರಿತಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಮಾಹಿತಿ ನೀಡಿದ್ದಾರೆ. ಹೊಸತಾಗಿ ಬೆಂಗಳೂರಿನಲ್ಲಿ 8 ಪ್ರಕರಣ ಹಾಗೂ ಧಾರವಾಡದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಪತ್ತೆಯಾದ 8 ಪ್ರಕರಣಗಳ ಪೈಕು ಐದು ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.

ಓಮಿಕ್ರಾನ್ ಆತಂಕ: ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ನಿರ್ಬಂಧ ಜಾರಿ! ಆರ್‌. ಅಶೋಕ್ ನೀಡಿದ್ದಾರೆ ಸುಳಿವು

ಇವರ ಜೊತೆಗೆ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸರಾಗಿ 1187 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ತೆ 10292 ಕ್ಕೆ ಏರಿಕೆಯಾಗಿದೆ.

ಶನಿವಾರದಿಂದ ಭಾನುವಾರದ ಒಳಗಾಗಿ ಆರು ಮಂದಿ ಕೋವಿಡ್‌ ನಿಂದ ಮೃತಪಟ್ಟಿದ್ದಾರೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಒಟ್ಟು 1187 ಕೋವಿಡ್ 19 ಪ್ರಕರಣಗಳ ಪೈಕಿ 923 ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 63 ಪ್ರಕರಣಗಳು ದಾಖಲಾಗಿವೆ.

ಶೀಘ್ರದಲ್ಲೇ ಕಠಿಣ ನಿರ್ಬಂಧ ಜಾರಿ!

ಇನ್ನು ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಾ ಎಚ್ಚೆತ್ತುಕೊಂಡಿದ್ದು ಶೀಘ್ರದಲ್ಲೇ ಕಠಿಣ ನಿಯಮಾವಳಿಗನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಅನಿವಾರ್ಯವಾದರೆ ಲಾಕ್‌ಡೌನ್ ಜಾರಿಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ತಜ್ಞರ ಜೊತೆ ಸಭೆ ನಡೆಯಲಿದ್ದು, ಜನವರಿ 7ರ ಒಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.



Read more