ಹೈಲೈಟ್ಸ್:
- ‘ತಾಜ್ ಮಹಲ್ 2’ ಸಿನಿಮಾ ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಿದೆ
- ನಿರ್ದೇಶಕ ದೇವರಾಜ್ ಕುಮಾರ್ ಹೀರೋ ಆಗಿ ನಟಿಸಿರುವ ಸಿನಿಮಾ ಇದು
- ‘ತಾಜ್ ಮಹಲ್ 2’ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಕಾಕ್ರೋಚ್ ಸುಧಿ, ನಾಗೇಂದ್ರ ಪ್ರಸಾದ್
ಶ್ರೀ ಗಂಗಾಂಬಿಕೆ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ‘ತಾಜ್ ಮಹಲ್ 2’ ಚಿತ್ರದ ಟ್ರೇಲರ್ ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಡಾ. ವಿ. ನಾಗೇಂದ್ರ ಪ್ರಸಾದ್, ನಿರ್ದೇಶಕ ನಾಗೇಂದ್ರ ಮಾಗಡಿ, ಜಿಮ್ ರವಿ, ವಿಕಾಸ್ ಪುಷ್ಪಗಿರಿ, ತಬಲ ನಾಣಿ, ಕಾಕ್ರೋಜ್ ಸುಧಿ, ರಾಜ್ ಉದಯ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
‘ನೈಜಘಟನೆ ಆಧರಿಸಿ ಈ ಚಿತ್ರ ನಿರ್ದೇಶಿಸಿದ್ದೇನೆ. ಈ ಹಿಂದೆ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ನಾಯಕನಾಗಿಬೇಕೆಂಬ ಕನಸು ಹಾಗೆ ಇತ್ತು. ನಿರ್ಮಾಪಕರು ಈ ಚಿತ್ರದ ಮೂಲಕ ನನ್ನನ್ನು ನಾಯಕನಾಗಿ ಮಾಡಿದ್ದಾರೆ. ನಾನು ಜೀವನಪೂರ್ತಿ ಅವರಿಗೆ ಋಣಿ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ ಏಪ್ರಿಲ್ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ’ ಎಂದರು ದೇವರಾಜ್ ಕುಮಾರ್.
‘ನಾನು ಈ ಚಿತ್ರದಲ್ಲಿ ನಾಯಕನ ಸೋದರ ಮಾವ. ಆತ ನನ್ನ ಸಾಕುಮಗ. ಮದುವೆ ಇಲ್ಲದವರಿಗೆ ಮದುವೆ ಮಾಡಿಸುವುದೇ ನನ್ನ ಕಾಯಕ. ಎಷ್ಟೋ ಮದುವೆ ಮಾಡಿಸಿದವನಿಗೆ ತನ್ನ ಮಗನ ಮದುವೆ ಮಾಡಿಸಲು ಆಗಿರುವುದಿಲ್ಲ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ತಬಲ ನಾಣಿ. ಹಾಗೆಯೇ, ಮತ್ತೊಂದು ಪಾತ್ರದಲ್ಲಿ ನಟಿಸಿರುವ ಕಾಕ್ರೋಚ್ ಸುಧಿ, ‘ನಾನು ದೇವರಾಜ್ ಇಬ್ಬರೂ ಬ್ರಷ್ ಹಿಡಿದು ಬಂದವರು. ಅವರು ಮುಖಕ್ಕೆ ಬಣ್ಣ ಬಳಿಯುತ್ತಿದ್ದರು. ನಾನು ಗೋಡೆಗೆ ಬಳಿಯುತ್ತಿದ್ದೆ. ಈಗ ಇಬ್ಬರ ಕನಸು ನನಸಾಗಿದೆ’ ಎಂದು ಹೇಳಿದರು.
‘ಇನ್ಮುಂದೆ ತುಂಬಾ ಚಿಕ್ಕ-ಪುಟ್ಟ ಪಾತ್ರ ಮಾಡಲ್ಲ..’- ಹೊಸ ನಿರ್ಧಾರ ತೆಗೆದುಕೊಂಡ ‘ಸಾವಿತ್ರಿ’ ಸುಧಿ!
‘ಈ ಸಿನಿಮಾದಲ್ಲಿ ನಾಯಕನ ಹೇರ್ ಸ್ಟೈಲ್ ಚೆನ್ನಾಗಿದೆ. ಮೊದಲು ಮೇಕಪ್ ದೇವು, ನಂತರ ದೇವರಾಜ್, ಈಗ ದೇವರಾಜ್ ಕುಮಾರ್.. ಹೀಗೆ ನಿಮ್ಮ ಕನಸು ಈಡೇರಿದೆ. ಚಿತ್ರ ಕೂಡ ಯಶಸ್ಸು ಕಾಣಲಿ’ ಎಂದು ಹಾರೈಸಿದರು ಡಾ. ವಿ. ನಾಗೇಂದ್ರ ಪ್ರಸಾದ್. ಈ ಚಿತ್ರಕ್ಕೆ ದೇವರಾಜ್ ಕುಮಾರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿದೆ. ದೇವರಾಜ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ನಟಿಸಿದ್ದು, ಜಿಮ್ ರವಿ, ಶೋಭರಾಜ್, ಶಿವರಾಮಣ್ಣ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ರಾಜ್ ಉದಯ್, ಕಾಕ್ರೋಚ್ ಸುಧಿ ಇತರರು ನಟಿಸಿದ್ದಾರೆ.
‘ಟಿಕ್ಟಾಕ್ ಮಾಡಿದ್ರೆ ಹೀರೋಯಿನ್ ಆಗ್ತೀನಿ ಅನ್ನೋ ಭ್ರಮೆ ಬಿಟ್ಟುಬಿಡಿ’- ಕಾಕ್ರೋಚ್ ಸುಧಿ!