Karnataka news paper

ಪಾನಿ ಪುರಿ ಸವಿಯುವುದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡ ಗೀತಾ ಗೋಪಿನಾಥ್


ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಹೊಸ ವರ್ಷದ ದಿನದಂದು ಪಾನಿ ಪುರಿ ಸವಿಯುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೊದೊಂದಿಗೆ ಹೊಸ ವರ್ಷದ ಶುಭ ಹಾರೈಸಿರುವ ಅವರು ‘2022ರ ಶುಭಾಶಯಗಳು. ಹೊಸ ವರ್ಷವನ್ನು ಪಾನಿ ಪುರಿ ಸವಿಯುವುದರ ಮೂಲಕ ಪ್ರಾರಂಭಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. 

ಗೀತಾ ಅವರ ಟ್ವೀಟ್‌ ಅನ್ನು ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್‌ ಮಾಡಿಕೊಂಡಿದ್ದು, 35 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರಿಗೆ ಸಂಸ್ಥೆಯ ‘ಒಂದನೆಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ’ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಇದು ಐಎಂಎಫ್‌ನ ಎರಡನೆಯ ಅತಿದೊಡ್ಡ ಹುದ್ದೆ. 



Read more from source