ಹೈಲೈಟ್ಸ್:
- ‘ಪುಷ್ಪ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್
- 15 ದಿನಗಳಲ್ಲಿ 300 ಕೋಟಿ ರೂಪಾಯಿ ಬಾಚಿದ ಸಿನಿಮಾ
- ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಪುಷ್ಪ: ದಿ ರೈಸ್’
‘ಪುಷ್ಪ: ದಿ ರೈಸ್’ ಚಿತ್ರದ ಕಲೆಕ್ಷನ್ ಎಷ್ಟು?
ಬಿಡುಗಡೆಯಾದ 15 ದಿನಗಳಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ ಬರೋಬ್ಬರಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಒಟ್ಟಾರೆಯಾಗಿ ವಿಶ್ವದಾದ್ಯಂತ ಇಲ್ಲಿಯವರೆಗೂ ‘ಪುಷ್ಪ: ದಿ ರೈಸ್’ ಸಿನಿಮಾ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಹಿಂದಿಯ ಕಲೆಕ್ಷನ್ ಎಷ್ಟು?
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ ಚಿತ್ರದ ಹಿಂದಿ ವರ್ಷನ್ ಈವರೆಗೂ 47.09 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ‘ಕೆಜಿಎಫ್: ಚಾಪ್ಟರ್ 1’ ಚಿತ್ರವನ್ನು ‘ಪುಷ್ಪ’ ಹಿಂದಿಕ್ಕಿದೆ. ‘ಪುಷ್ಪ’ ಸಿನಿಮಾದ ಹಿಂದಿ ವರ್ಷನ್ ಮೊದಲ ವಾರ 26.89 ಕೋಟಿ ಬಾಚಿದ್ದರೆ, ಎರಡನೇ ವಾರ 20.20 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆ, ಈವರೆಗೂ 47.09 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಹಾಗೇ, ಮೊದಲ ವಾರಕ್ಕೆ ಹೋಲಿಸಿದರೆ.. ಮೂರನೇ ವಾರಕ್ಕೆ ‘ಪುಷ್ಪ’ ಸಿನಿಮಾದ ಸ್ಕ್ರೀನ್ ಕೌಂಟ್ ಹೆಚ್ಚಾಗಿದೆ. ಮೊದಲ ವಾರ – 1401, ಎರಡನೇ ವಾರ – 1500, ಮೂರನೇ ವಾರ – 1600 ಸ್ಕ್ರೀನ್‌ಗಳನ್ನು ‘ಪುಷ್ಪ: ದಿ ರೈಸ್’ ಚಿತ್ರದ ಪಡೆದಿದೆ.
ಚಿತ್ರತಂಡದ ಪ್ರತಿಯೊಬ್ಬರಿಗೂ ಉಡುಗೊರೆ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿರುವ ‘ಪುಷ್ಪ: ದಿ ರೈಸ್’ ಸಿನಿಮಾ ನಿರ್ಮಾಪಕರಿಗೆ ಭಾರೀ ಹಣವನ್ನೇ ತಂದುಕೊಟ್ಟಿದೆ. ಹೀಗಾಗಿ, ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನಿರ್ದೇಶಕ ಸುಕುಮಾರ್ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಸಿನಿಮಾಕ್ಕೆ ಕೆಲಸ ಮಾಡಿದ ಸೆಟ್ ಬಾಯ್ಸ್, ಆರ್ಟ್ ಡಿಪಾರ್ಟ್‌ಮೆಂಟ್‌ನ ಸದಸ್ಯರಿಗೆ, ಲೈಟ್ ಬಾಯ್ಸ್‌ಗೆ.. ಹೀಗೆ ಸಿನಿಮಾಗಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ ತಂಡದ ಪ್ರತಿಯೊಬ್ಬ ಸದಸ್ಯರಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂಪಾಯಿ ನೀಡುವುದಾಗಿ ಸುಕುಮಾರ್ ಘೋಷಣೆ ಮಾಡಿದ್ದಾರೆ.
ಮೊದಲ ದಿನವೇ ದಾಖಲೆ ಬರೆದಿದ್ದ ‘ಪುಷ್ಪ’
‘ಪುಷ್ಪ- ದಿ ರೈಸ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 71 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೊದಲ ದಿನವೇ ನಿಜಾಮ್ ಪ್ರದೇಶದಲ್ಲಿ 11.44 ಕೋಟಿ ರೂಪಾಯಿ ಶೇರ್ ಪಡೆದ ‘ಪುಷ್ಪ – ದಿ ರೈಸ್’ ಸಿನಿಮಾ ಆಲ್ ಟೈಮ್ ರೆಕಾರ್ಡ್ ಸೃಷ್ಟಿಸಿತ್ತು. ಇನ್ನೂ, ಅಲ್ಲು ಅರ್ಜುನ್ ಕೆರಿಯರ್‌ನಲ್ಲೇ ಬಿಗ್ ಓಪನ್ನಿಂಗ್ ಪಡೆದ ಚಿತ್ರ ‘ಪುಷ್ಪ- ದಿ ರೈಸ್’ ಎಂದೆನಿಸಿಕೊಂಡಿತ್ತು.
ಅಂದ್ಹಾಗೆ, ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಧನಂಜಯ, ಸುನೀಲ್, ಅಜಯ್, ರಾವ್ ರಮೇಶ್, ಸಮಂತಾ ಮುಂತಾದವರು ನಟಿಸಿದ್ದಾರೆ.