ಹೈಲೈಟ್ಸ್:
- ವಿಮಾನದಲ್ಲಿ ಪ್ರಯಾಣಿಸುವಾಗ ಸ್ವಯಂ ಕೋವಿಡ್ ಪರೀಕ್ಷೆ ಮಾಡಿಕೊಂಡ ಮಹಿಳೆ
- ವಿಮಾನ ಏರುವುದಕ್ಕೂ ಮುನ್ನ ಏಳು ಬಾರಿ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ
- ಟಾಯ್ಲೆಟ್‌ನಲ್ಲಿ ಮೂರು ಗಂಟೆ ಕಾಲ ಐಸೋಲೇಟ್ ಆಗಿ ಉಳಿದಿದ್ದ ಮಹಿಳೆ
ಮಿಚಿಗನ್‌ನಲ್ಲಿ ಶಿಕ್ಷಕಿಯಾಗಿರುವ ಮಾರಿಸಾ ಫೋಟಿಯೊ ಅವರು ಡಿ. 19ರಂದು ವಿಮಾನದಲ್ಲಿ ಅರ್ಧ ದೂರ ಪ್ರಯಾಣಿಸಿದ್ದಾಗ ಗಂಟಲಿನಲ್ಲಿ ಕಿರಿಕಿರಿ ಅನುಭವಿಸಿದ್ದರು. ಅವರು ರಾಪಿಡ್ ಕೋವಿಡ್ ಪರೀಕ್ಷೆಗೆ ಒಳಪಡಲು ಬಾತ್‌ರೂಮ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಸ್ಥಳೀಯ ಡಬ್ಲ್ಯೂಎಬಿಸಿ-ಟಿವಿ ವರದಿ ಮಾಡಿದೆ.
Omicron: ಬರಲಿದೆ ಕೋವಿಡ್ ‘ಸುನಾಮಿ’, ನೆಲಕಚ್ಚಲಿದೆ ಆರೋಗ್ಯ ವ್ಯವಸ್ಥೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ವಿಮಾನ ಹತ್ತುವುದಕ್ಕೂ ಮುನ್ನ ಮಾರಿಸಾ ಅವರು ಎರಡು ಪಿಸಿಆರ್ ಪರೀಕ್ಷೆ ಹಾಗೂ ಐದು ರಾಪಿಡ್ ಪರೀಕ್ಷೆಗಳಿಗೆ ಒಳಪಟ್ಟಿದ್ದು, ಎಲ್ಲ ವರದಿಗಳೂ ನೆಗೆಟಿವ್ ಬಂದಿದ್ದಾಗಿ ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಆದರೆ ವಿಮಾನದಲ್ಲಿ ಕುಳಿತ ಒಂದೂವರೆ ಗಂಟೆಯಲ್ಲಿ ಗಂಟಲು ನೋವು ಆರಂಭವಾಗಿತ್ತು.
‘ತಲೆಯೊಳಗೆ ಸಾವಿರಾರು ಯೋಚನೆಗಳು ಮೂಡಲಾರಂಭಿಸಿದಾಗ, ಮತ್ತೊಂದು ಪರೀಕ್ಷೆ ನಡೆಸುವುದು ಸೂಕ್ತ ಎಂದು ಭಾವಿಸಿದೆ. ಅದರಿಂದ ಕೊಂಚ ಸಮಾಧಾನ ಉಂಟಾಗುತ್ತಿತ್ತು. ಕೂಡಲೇ ಅದರಲ್ಲಿ ಪಾಸಿಟಿವ್ ಪತ್ತೆಯಾಗಿದೆ’ ಎಂದು ತಿಳಿಸಿದ್ದಾರೆ.
ಮಾರಿಸಾ ಅವರು ಎರಡೂ ಡೋಸ್ ಲಸಿಕೆಯ ಜತೆಗೆ ಬೂಸ್ಟರ್ ಡೋಸ್ ಕೂಡ ಪಡೆದುಕೊಂಡಿದ್ದರು. ಲಸಿಕೆ ಪಡೆದುಕೊಳ್ಳದ ಮಕ್ಕಳ ನಡುವೆ ಕೆಲಸ ಮಾಡುವುದರಿಂದ ಅವರು ನಿರಂತರವಾಗಿ ಪರೀಕ್ಷೆಗೆ ಒಳಪಡುತ್ತಿದ್ದರು. ಆದರೆ ಏರೋಪ್ಲೇನ್ ಬಾತ್‌ರೂಮ್‌ನಲ್ಲಿ ಪರೀಕ್ಷೆಯ ವರದಿ ಪಡೆದಾಗ ಅವರಲ್ಲಿ ಆತಂಕ ಮೂಡಿತ್ತು.
‘ನನಗೆ ಹುಚ್ಚು ಹಿಡಿದಂತೆ ಆಗಿತ್ತು. ಜೋರಾಗಿ ಅಳುಬಂದಿತ್ತು. ಆಗಷ್ಟೇ ನನ್ನ ಕುಟುಂಬ ನನ್ನೊಂದಿಗೆ ಊಟ ಮುಗಿಸಿತ್ತು. ವಿಮಾನದಲ್ಲಿದ್ದ ಇತರೆ ಜನರು, ಸ್ವತಃ ನನ್ನ ಬಗ್ಗೆಯೇ ಆತಂಕ ಹುಟ್ಟಿಕೊಂಡಿತ್ತು’ ಎಂದು ತಿಳಿಸಿದ್ದಾರೆ.
ಪರೀಕ್ಷೆ ವರದಿ ಫಲಿತಾಂಶ ಬಂದ ಬಳಿಕ ಅವರು ಹೊರಗೆ ಬಂದರೂ ಅಲ್ಲಿ ಪ್ರತ್ಯೇಕವಾಗಿ ಕೂರಲು ಸ್ಥಳ ಇರಲಿಲ್ಲ. ಹೀಗಾಗಿ ಬೇರೆಯವರಿಗೆ ತೊಂದರೆ ಕೊಡಬಾರದು ಎಂದು ಅವರು, ಬಾತ್‌ರೂಮ್ ಒಂದರ ಒಳಗೆ ಉಳಿದ ಸಮಯ ಕಳೆದಿದ್ದಾರೆ. ಐಸ್‌ಲ್ಯಾಂಡ್‌ಗೆ ಬಂದಿಳಿದ ಬಳಿಕ ಮತ್ತೆ ಎರಡು ಬಾರಿ ಪರೀಕ್ಷೆಗೆ ಒಳಪಟ್ಟಿದ್ದು, ಆಗಲೂ ಪಾಸಿಟಿವ್ ಬಂದಿದೆ.