ಹೈಲೈಟ್ಸ್:
- ಬಿಜೆಪಿಗೇ ಟಕ್ಕರ್ ಕೊಟ್ಟ ಬಾಲಚಂದ್ರ ಜಾರಕಿಹೊಳಿ
- ಬೆಂಬಲಿಗ ಪಕ್ಷೇತರ ಅಭ್ಯರ್ಥಿಗಳ ಭರ್ಜರಿ ಜಯ
- ಯಾವ ರೀತಿ ಗೆದ್ದರು ಬಾಲಚಂದ್ರರ ಬೆಂಬಲಿತ ಅಭ್ಯರ್ಥಿಗಳು
ಬಿಜೆಪಿ ಇಲ್ಲಿ ಐದು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಕಲ್ಲೋಳಿಯಲ್ಲಿ ಅವಿರೋಧ ಆಯ್ಕೆಗೆ ಜಾರಕಿಹೊಳಿ ಬ್ರದರ್ಸ್ ಪ್ರಯತ್ನಿಸಿದ್ದರು. ಆದರೆ, ಕೊನೇ ಗಳಿಗೆಯಲ್ಲಿಈರಣ್ಣ ಕಡಾಡಿ ಪಕ್ಷದಿಂದ ಬಿ ಫಾರ್ಮ್ ಪಡೆದು ಎಲ್ಲ ಸ್ಥಾನಗಳಿಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು.
ಇತ್ತ, ಟಿಕೆಟ್ ವಂಚಿತರಾದ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಬಾಲಚಂದ್ರ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಹೀಗಾಗಿ, ಕಲ್ಲೋಳಿಯಲ್ಲಿ ಚುನಾವಣೆ ವೇಳೆ ಬಿಜೆಪಿ ವರ್ಸಸ್ ಬಿಜೆಪಿ ಎಂಬ ವಾತಾವರಣವಿತ್ತು. ನಾಗನೂರ ಪಟ್ಟಣ ಪಂಚಾಯಿತಿಯ ಒಟ್ಟು 17 ಸ್ಥಾನಗಳಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಪಕ್ಷೇತರ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆ ರಿಸಲ್ಟ್: ಆಡಳಿತ ಪಕ್ಷಕ್ಕೆ ಮತ್ತೊಂದು ಎಚ್ಚರಿಕೆಯ ಗಂಟೆ, ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಕಾಂಗ್ರೆಸ್
ಇಲ್ಲಿ ಬಿಜೆಪಿಯಿಂದ ಯಾರೂ ಸ್ಪರ್ಧಿಸಿರ ಲಿಲ್ಲ. ಸ್ಥಳೀಯವಾಗಿಯೇ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ ಎರಡು ಗುಂಪಿನ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಅರಬಾವಿ ಪಟ್ಟಣ ಪಂಚಾಯಿತಿಯ 16 ಸ್ಥಾನಗಳ ಪೈಕಿ 6 ಜನ ಬಿಜೆಪಿಯಿಂದ ಆಯ್ಕೆಯಾಗಿದ್ದರೆ, ಇನ್ನುಳಿದ 10 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇವರೆಲ್ಲರೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು.
ಮತ್ತೆ ಕಮಲಕ್ಕೆ ಪೆಟ್ಟು, ಕೈ ಚೇತರಿಕೆ!
ಬೆಳಗಾವಿ: ರಾಜ್ಯದಲ್ಲೇ ಭಾರಿ ಕುತೂಹಲ ಮೂಡಿಸಿದ್ದ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಆಡಳಿತಾರೂಢ ಬಿಜೆಪಿಯ ಘಟಾನುಘಟಿಗಳಿಗೆ ಮಣ್ಣು ಮುಕ್ಕಿಸಿದೆ. ಇನ್ನೊಂದೆಡೆ, ವಿಧಾನ ಪರಿಷತ್ ಚುನಾವಣೆ ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಮತ್ತೊಮ್ಮೆ ಫೀನಿಕ್ಸ್ನಂತೆ ಎದ್ದು ಬಂದಿದೆ.
18 ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿಇಬ್ಬರು ಸಚಿವರೂ ಸೇರಿ 13 ಬಿಜೆಪಿ ಶಾಸಕರಿದ್ದಾರೆ. ಅಲ್ಲದೆ, ಇಬ್ಬರು ಸಂಸದರು, ಓರ್ವ ವಿಧಾನಪರಿಷತ್ ಸದಸ್ಯ ಮತ್ತು ಓರ್ವ ರಾಜ್ಯಸಭಾ ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆ. ಇಷ್ಟಾಗಿಯೂ ಸ್ಥಳೀಯ ಸಂಸ್ಥೆಗಳ ಬಹುತೇಕ ಕ್ಷೇತ್ರಗಳಲ್ಲಿಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕೆಲವೆಡೆ ಪಕ್ಷೇತರರು ಪ್ರಾಬಲ್ಯ ಮೆರೆದಿದ್ದರೆ, ಜಾರಕಿಹೊಳಿ ಬ್ರದರ್ಸ್ ಹಿಡಿತದಲ್ಲಿರುವ ಅರಬಾವಿ ಕ್ಷೇತ್ರದ ಮೂರು ಕಡೆ ಸ್ವಪಕ್ಷೀಯರೇ ಬಿಜೆಪಿಗೆ ಟಕ್ಕರ್ ಕೊಟ್ಟಿದ್ದಾರೆ.
ಸವದಿಗೆ ಮುಖಭಂಗ!
ಈಚೆಗಷ್ಟೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಪಟ್ಟ ಅಲಂಕರಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ತವರೂರಾದ ಅಥಣಿ ಪುರಸಭೆ ಫಲಿತಾಂಶ ಮುಖಭಂಗ ಉಂಟುಮಾಡಿದೆ. ಇಲ್ಲಿನ ಪುರಸಭೆ ಕಾಂಗ್ರೆಸ್ ಪಾಲಾಗಿದೆ. 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 9 ಹಾಗೂ ಮೂವರು ಪಕ್ಷೇತರರು ಗೆದ್ದಿದ್ದಾರೆ.