
ಡಿ.ಕೆ.ಶಿವಕುಮಾರ್
ಬೆಂಗಳೂರು: ಸೆಲ್ಫಿ ವಿಚಾರಕ್ಕೆ ಪದೇಪದೇ ಸುದ್ದಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದೀಗ ಮತ್ತೆ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಬಳಿ ಸೆಲ್ಫಿಗೆ ಮುಗಿಬಿದ್ದ ವ್ಯಕ್ತಿಗೆ ಡಿಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ ಘಟನೆ ನಡೆಯಿತು.
137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ಡಿ.ಕೆ.ಶಿವಕುಮಾರ್ ಅವರುಮದ್ದೂರಿಗೆ ತೆರಳಿದ್ದರು. ಆದರೆ ಇನ್ನೇನು ಧ್ವಜಾರೋಹಣ ನೆರವೇರಿಸಬೇಕು ಅನ್ನುವಷ್ಟರಲ್ಲಿ ಅಭಿಮಾನಿಯೊಬ್ಬ ಡಿಕೆ ಶಿವಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹತ್ತಿರಬಂದಿದ್ದಾನೆ.
ಇದನ್ನೂ ಓದಿ: ಸೆಲ್ಫೀ ಕ್ರೇಜ್: ಟ್ರ್ಯಾಕ್ಟರ್ ಜೊತೆಗೇ ಬಾವಿಗೆ ಬಿದ್ದು 20 ವರ್ಷದ ಯುವಕ ಸಾವು!
ಇದಕ್ಕೆ ಗರಂ ಆದ ಕೆಪಿಸಿಸಿ ಅಧ್ಯಕ್ಷರು, ‘ಧ್ವಜಾರೋಹಣ ಮಾಡೋ ಬದಲು ನಿನ್ನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲಾ..? ಎಂದು ಕೆಂಡಾಮಂಡಲಗೊಂಡರು.
ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.
ಈ ಹಿಂದೆ ಸೆಲ್ಫೀ ತೆಗೆದುಕೊಳ್ಳಲು ಹತ್ತಿರ ಬಂದ ವ್ಯಕ್ತಿಯೊಬ್ಬರಿಗೆ ಡಿಕೆ.ಶಿವಕುಮಾರ್ ಅವಕು ಕಪಾಳಮೋಕ್ಷ ಮಾಡಿದ್ದರು. ಇದು ಸಾಕಷ್ಟು ಟೀಕೆಗಳಿಗೆ ಕಾರಣವಾಗಿತ್ತು. ಬಳಿಕ ಪ್ರತಿಕ್ರಿಯೆ ನೀಡಿದ್ದ ಶಿವಕುಮಾರ್ ಅವರು, ಆ ವ್ಯಕ್ತಿ ಹತ್ತಿರದ ಸಂಬಂಧಿಯಾಗಿದ್ದ ಎಂದು ಹೇಳಿದ್ದರು.
ಇದನ್ನೂ ಓದಿ: ಅಪ್ಪು ಜೊತೆಗಿನ ಕೊನೆ ಸೆಲ್ಫೀ ಹಂಚಿಕೊಂಡ ರಾಘವೇಂದ್ರ ರಾಜ್ಕುಮಾರ್!