Karnataka news paper

ತಮಿಳುನಾಡು: ಲಿಕ್ವಿಡ್ ಕ್ಲೋರಿನ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯಿಂದ ಮಾಲೀಕ ಸಾವು, 13 ಮಂದಿ ಆಸ್ಪತ್ರೆಗೆ ದಾಖಲು


Source : The New Indian Express

ಈರೋಡ್: ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಒಬ್ಬರು ಮೃತಪಟ್ಟು, ಇತರ 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. 

ಜಿಲ್ಲೆಯ ಚಿಟೊಡ್ ಬಳಿ ಲಿಕ್ವಿಡ್ ಕ್ಲೋರಿನ್ ಫ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ. ಸಿಲಿಂಡರ್ ನಿಂದ ಅನಿಲ ಸೋರಿಕೆಯಾದ ನಂತರ ಈ ಫ್ಯಾಕ್ಟರಿ ನಡೆಸುತ್ತಿದ್ದ 43 ವರ್ಷದ ದಾಮೋಧರನ್ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಫ್ಯಾಕ್ಟರಿಯಲ್ಲಿದ್ದ ಸುಮಾರು 20 ಕಾರ್ಮಿಕರ ಪೈಕಿ 13 ಕಾರ್ಮಿಕರು ಹೊಗೆ ಸೇವಿಸಿ ಅರೆ ಪ್ರಜ್ಞಾವಸ್ಥೆಯಲ್ಲಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಇದನ್ನು ನೋಡಿದ ಇತರ ಕಾರ್ಮಿಕರು ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುವುದನ್ನು ತಡೆಗಟ್ಟಿದ್ದಾರೆ. ಉಸಿರುಗಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕಾರ್ಮಿಕರು  ಅಪಾಯದಿಂದ ಪಾರು ಆಗಿರುವುದಾಗಿ ವೈದ್ಯರು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.



Read more