Karnataka news paper

ಪೇಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಆಲಿಯಾ ಭಟ್


ಬೆಂಗಳೂರು: ಪ್ರಾಣಿಗಳ ಕುರಿತಾದ ವಿಶೇಷ ಪ್ರೀತಿ ಮತ್ತು ಸಸ್ಯಾಹಾರವನ್ನು ಉತ್ತೇಜಿಸುತ್ತಿರುವ ನಟಿ ಆಲಿಯಾ ಭಟ್ ಅವರನ್ನು ಪೇಟಾ ಇಂಡಿಯಾ ವರ್ಷದ ವ್ಯಕ್ತಿಯನ್ನಾಗಿ ಘೋಷಿಸಿದೆ.

ಆಲಿಯಾ ಅವರು ವಿಗನ್ ಉತ್ಪನ್ನಗಳ ಬಳಕೆಗೆ ಹಲವು ಸಂಘಸಂಸ್ಥೆಗಳ ಜತೆ ಕೈಜೋಡಿಸಿದ್ದಾರೆ.

ನಾಯಿ ಮತ್ತು ಬೆಕ್ಕು ಹಾಗೂ ಇತರ ಯಾವುದೇ ಪ್ರಾಣಿಯ ಮೇಲಿನ ದೌರ್ಜನ್ಯವನ್ನು ಆಲಿಯಾ ಅವರು ಟೀಕಿಸುತ್ತಾರೆ. ಜತೆಗೆ ಹಲವು ಸಂದರ್ಭದಲ್ಲಿ ಅವುಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರನ್ನು ಕೇಳಿಕೊಳ್ಳುತ್ತಾರೆ.

ಹೀಗಾಗಿ ಅವರ ಸೇವೆಯನ್ನು ಪರಿಗಣಿಸಿ ಪೇಟಾ ಇಂಡಿಯಾ ‘ವರ್ಷದ ವ್ಯಕ್ತಿ‘ಯಾಗಿ ಗೌರವಿಸಿದೆ.

ಪೇಟಾ ಇಂಡಿಯಾ ಜತೆ ಹಲವು ಮಂದಿ ಸೆಲೆಬ್ರಿಟಿಗಳು ಕೂಡ ಕೈಜೋಡಿಸಿದ್ದಾರೆ. ಸಸ್ಯಾಹಾರ ಸೇವನೆ ಉತ್ತೇಜನ ಮತ್ತು ಪ್ರಾಣಿ ಹಿಂಸೆ ತಡೆಯುವ ಉದ್ದೇಶವನ್ನು ಪೇಟಾ ಹೊಂದಿದೆ.



Read More…Source link