ಪುರೋಹಿತ ಶಾಂತರಾಮ ಭಟ್ಟ ತಿಥಿ ಕಾರ್ಯದ ಮಂತ್ರ ಘೋಷಗಳನ್ನು ಪಠಿಸಿ ಪೂಜೆ ಸಲ್ಲಿಸಿದರು, ಬಳಿಕ ಅಲ್ಲಿ ನೆರದಿದ್ದವರು ಪುಷ್ಪ ನಮನ ಸಲ್ಲಿಸಿ ಮರುಕ ವ್ಯಕ್ತಪಡಿಸಿದರು. ಬಳಿಕ ಮೈಸೂರಿನಲ್ಲಿ ಎಲ್ಲೇ ಮರ ಕಡಿಯುತ್ತಿದ್ದರೂ ಅದನ್ನು ತಡೆಯುತ್ತೇವೆ. ಅದರ ವಿರುದ್ಧ ಹೋರಾಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಪಾಲಿಕೆ ಸದಸ್ಯ ರವೀದ್ರ ಅವರಿಗೆ ಇನ್ಮುಂದೆ ಈ ತರಹದ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಪರಿಸರ ಪ್ರಿಯರು ತಾಕೀತು ಮಾಡಿದರು.
ಮೈಸೂರು ಗ್ರಾಹಕ ಪರಿಷತ್ ಪರಿಷತ್ ಸಂಸ್ಥಾಪಕ ಭಾಮಿ ಶೆಣೈ ಮಾತನಾಡಿ, ಯಾದವಗಿರಿ ವಿವೇಕಾನಂದ ರಸ್ತೆಯ ಖಾಸಗಿ ಆಸ್ಪತ್ರೆ ಮಾಲೀಕ. ಆಸ್ಪತ್ರೆ ಚೆನ್ನಾಗಿ ಕಾಣಿಸಲೆಂದು ಮರಗಳ ಬುಡದ ವರೆಗೆ ಕತ್ತರಿಸಿದ್ದಾರೆ. ಇದರ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮರ ಕಡಿಸಿದವರಿಗೆ 50 ಸಾವಿರ ರೂ. ದಂಡ ವಿಧಿಸುವುದಾಗಿ ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ. ಆದರೆ ಒಂದು ಮರದ ವೌಲ್ಯದ 600 ಕೋಟಿ ರೂ. ಆಗಿದೆ. ಹೀಗಾಗಿ ಮತ್ಯಾರು ಮರ ಕಡಿಯದಂತೆ ಎಚ್ಚರಿಕೆ ನೀಡುವ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪರಿಸರ ಬಳಗ ಪರಶುರಾಮೇಗೌಡ, ಶೈಲಾಜೇಶ್, ಕ್ಲೀನ್ ಮೈಸೂರು ಫೌಂಡೇಶನ್‌ನ ಲೀಲಾ ಶಿವಕುಮಾರ್, ಲೀಲಾ ವೆಂಕಟೇಶ್, ಯಾದವಗಿರಿಯ ನಿವಾಸಿಗಳು ಮತ್ತಿತರರಿದ್ದರು.