Karnataka news paper

ಕ್ರಿಪ್ಟೊ ಕರೆನ್ಸಿಗಳ ಮೌಲ್ಯದಲ್ಲಿ ಗಣನೀಯ ಇಳಿಕೆ! ಕಾರಣವೇನು?


ನಾಗರಾಜು ಅಶ್ವತ್ಥ ಬೆಂಗಳೂರು ಗ್ರಾಮಾಂತರ
ಕಳೆದ ನವೆಂಬರ್‌ನಲ್ಲಿ 50 ಲಕ್ಷ ರೂ. ತನಕ ಏರಿಕೆಯಾಗಿದ್ದ ಬಿಟ್‌ ಕಾಯಿನ್‌ ದರ ಪ್ರಸ್ತುತ 40 ಲಕ್ಷ ರೂ.ಗೆ ಇಳಿಕೆಯಾಗಿದೆ. ಉಳಿದ ಕ್ರಿಪ್ಟೊ ಕರೆನ್ಸಿಗಳ ಬೆಲೆಗಳು ಕೂಡ ಇಳಿಕೆಯತ್ತ ಮುಖ ಮಾಡಿವೆ. ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶದಲ್ಲಿ ಕ್ರಿಪ್ಟೊಗಳ ನಿಯಂತ್ರಣಕ್ಕೆ ಸಂಬಂಧಿಸಿ ವಿಧೇಯಕ ಮಂಡನೆಯಾಗುವ ನಿರೀಕ್ಷೆ ಇತ್ತು. ಈ ಹಿನ್ನೆಲೆಯಲ್ಲಿ ಬಿಟ್‌ ಕಾಯಿನ್‌ ಸೇರಿದಂತೆ ಕ್ರಿಪ್ಟೊ ಕರೆನ್ಸಿಗಳ ದರದಲ್ಲಿ ಕುಸಿತ ದಾಖಲಾಗಿತ್ತು. ಕ್ರಿಪ್ಟೊ ಕರೆನ್ಸಿ ನಿಯಂತ್ರಣಕ್ಕೆ ಕಾನೂನು ಜಾರಿ ಯಾದರೆ ಅಕ್ರಮಕ್ಕೆ ಕಡಿವಾಣ ಬೀಳಬಹುದು ಎಂದು ಅಂದಾ ಜಿಸಲಾಗಿತ್ತು.

ಈ ನಡುವೆ ದರವೂ ಕುಸಿದಿತ್ತು. ಹೀಗಿದ್ದರೂ, ಕಳೆದ ಕೆಲ ದಿನಗಳಿಂದ ದರ ಮತ್ತೆ ಚೇತರಿಸುತ್ತಿದೆ. ವಿಧೇಯಕ ಕುರಿತ ಅನಿಶ್ಚಿತತೆಯಿಂದ ಬಳಕೆದಾರರ ಸಂಖ್ಯೆ ಇಳಿಕೆಯಾಗಿದೆ. ಸರಕಾರ ಅಧಿಕೃತವಾಗಿ ಅನುಮತಿ, ಕಾನೂನು ರಚನೆ ಅಂತಿಮಗೊಳಿಸಿದರೆ ಭಾರತೀಯ ಉದ್ಯಮಗಳು ಕೂಡ ಹೂಡಿಕೆಗೆ ಮುಂದಾಗಲಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.

ಕ್ರಿಪ್ಟೋಕರೆನ್ಸಿ ವಿಧೇಯಕ ಚಳಿಗಾಲದ ಅಧಿವೇಶನದಲ್ಲೂ ಮಂಡನೆಯಾಗದು!

ಈ ಹಿಂದೆ 2015ರಲ್ಲಿ ಚೀನಾ ಕ್ರಿಪ್ಟೊ ಕರೆನ್ಸಿಗಳನ್ನು ನಿಷೇಧಿಸಿದ ಸಂದರ್ಭ-ದಲ್ಲೂದರ ಕುಸಿದಿತ್ತು. ”ಬಿಟ್‌ ಕಾಯಿನ್‌ ಸೇರಿದಂತೆ ನಾನಾ ಬಗೆಯ ಕ್ರಿಪ್ಟೋ ಕರೆನ್ಸಿಗಳಲ್ಲಿಹೂಡಿಕೆಗೆ ಏರಿಳಿತಗಳಿವೆ. ಹೂಡಿಕೆ ಮಾಡಿದ ಹಣಕ್ಕೆ ಖಾತರಿ ಎನ್ನುವುದಿರುವುದಿಲ್ಲ. ಸರಕಾರದ ನಿಯಮಗಳಿಗೆ ಒಳಪಡು ವವರೆಗೆ ಹೂಡಿಕೆದಾರರು ಎಚ್ಚರಿಕೆ ವಹಿಸುವುದು ಉತ್ತಮ” ಎನ್ನುತ್ತಾರೆ ಇಂಡಿಯನ್‌ ಮನಿಡಾಟ್‌ಕಾಮ್‌ನ ಸಿಇಒ ಸಿ.ಎಸ್‌ ಸುಧೀರ್‌.

ಕ್ರಿಪ್ಟೋಕರೆನ್ಸಿ ಪೂರ್ಣ ನಿಷೇಧಕ್ಕೆ ಒಲವು ತೋರಿದ ಆರ್‌ಬಿಐ
ಭಾರತದ ಹಣಕಾಸು ಸ್ಥಿರತೆ ಮತ್ತು ಆರ್ಥಿಕ ಪ್ರಗತಿಯನ್ನು ಹದಗೆಡಿಸುವ ಅಪಾಯ ಇರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕ್ರಿಪ್ಟೊಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಲವು ತೋರಿಸಿದೆ.

ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ನಡೆದ ಆರ್‌ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿ ಸಭೆಯಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಒಲವು ವ್ಯಕ್ತವಾಗಿದೆ. ಮಂಡಳಿಯ ತೀರ್ಮಾನವನ್ನು ಶೀಘ್ರವೇ ಕೇಂದ್ರ ಸರಕಾರಕ್ಕೆ ರವಾನಿಸಿ, ಅಗತ್ಯ ಕ್ರಮ ಜರುಗಿಸುವಂತೆ ಆರ್‌ಬಿಐ ಮನವಿ ಮಾಡಲಿದೆ. ”ಸದ್ಯಕ್ಕೆ ಕ್ರಿಪ್ಟೋ ಕರೆನ್ಸಿ ಮೇಲೆ ಭಾಗಶಃ ನಿರ್ಬಂಧ ಹೇರಲಾಗಿದೆ.

ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ನಿಯಮ ಅಗತ್ಯ – ಪ್ರಧಾನಿ ಮೋದಿ

ಕ್ರಿಪ್ಟೋ ಕರೆನ್ಸಿ ನಿಯಂತ್ರಣದ ಉದ್ದೇಶವಿದು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಕ್ರಿಪ್ಟೋ ಕರೆನ್ಸಿ ಚಲಾವಣೆಯಲ್ಲಿ ಪ್ರಮುಖ ಸವಾಲು ಎಂದರೆ ಅದರ ಮೂಲದ ನಿಖರ ಪತ್ತೆ. ಕರೆನ್ಸಿ ಮೌಲ್ಯಕ್ಕೆ ಸ್ಥಿರತೆ ಬಹಳ ಕಡಿಮೆ. ಹೀಗಾಗಿ ಭಾಗಶಃ ನಿಷೇಧದಿಂದ ಯಾವುದೇ ಪ್ರಯೋಜನವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು ತೊಡಕುಗಳು, ಹಣದ ವಹಿವಾಟಿನ ವಿವರ ಡಿಜಿಟಲ್‌ ತಂತ್ರಜ್ಞಾನದಲ್ಲಿ ಗೌಪ್ಯವಾಗಿಯೇ ಮುಂದುವರಿಸಲು ಕಾಳಧನಿಕರು ಒತ್ತಾಯಿಸುವ ಸಾಧ್ಯತೆಗಳನ್ನು ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿದೆ,” ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.



Read more…