Karnataka news paper

ನೈಟ್ ಕರ್ಫ್ಯೂ: ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿದ್ದವರಿಗೆ ನಿರಾಸೆ; ಉದ್ಯಮಕ್ಕೂ ಹೊಡೆತ


ಹೈಲೈಟ್ಸ್‌:

  • ರಾಜ್ಯದಲ್ಲೂ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಎಫೆಕ್ಟ್
  • ಹೊಸ ವರ್ಷದ ಸಂಭ್ರಮಕ್ಕೆ ಬೀಳಲಿದೆ ಬ್ರೇಕ್
  • ಹೋಟೆಲ್‌ ಉದ್ಯಮಕ್ಕೂ ಭಾರೀ ಹೊಡೆತ

ಬೆಂಗಳೂರು: ಈ ವರ್ಷದ ನ್ಯೂ ಇಯರ್ ನೈಟನ್ನು ಸಂಭ್ರಮದಿಂದ ಪಾರ್ಟಿ ಮಾಡುತ್ತಾ ಆಚರಣೆ ಮಾಡಬೇಕು ಎಂದು ಕನಸು ಕಂಡಿದ್ದವರಿಗೆ ಸರ್ಕಾರದ ನೈಟ್‌ ಕರ್ಫ್ಯೂ ನಿರ್ಧಾರ ಶಾಕ್ ನೀಡಿದೆ. ಹೊಸ ವರ್ಷದ ಆಚರಣೆಗೆ ಏನೆಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದ ಜನರು ಸದ್ಯ ಮನೆಯಲ್ಲೇ ನ್ಯೂಇಯರ್ ಪಾರ್ಟಿ ಮಾಡಿ ಸುಮ್ಮನಾಗಬೇಕಾಗಿದೆ. ಮತ್ತೊಂದು ಕಡೆಯಲ್ಲಿ ಹೋಟೆಲ್‌, ಪಬ್, ರೆಸ್ಟೋರೆಂಟ್ ಉದ್ಯಮಕ್ಕೂ ಭಾರೀ ಹೊಡೆತ ಬಿದ್ದಿದೆ.

ಹೊಸ ವರ್ಷದ ಪಾರ್ಟಿ ಅಂದ್ರೆ ಬಾರ್, ಪಬ್, ರೆಸ್ಟೋರೆಂಟ್‌ಗಳಲ್ಲಿ ಜನರು ಕಿಕ್ಕಿರಿದು ತುಂಬುತ್ತಾರೆ. ಮೋಜು, ಮಸ್ತಿ, ಪಾರ್ಟಿಯಿಂದ ದೊಡ್ಡ ಮಟ್ಟದ ವ್ಯಾಪಾರವೂ ಆಗುತ್ತದೆ. ಆದರೆ ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಡಿಸೆಂಬರ್ 28 ರಿಂದ ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇದರಿಂದ ಹೊಸ ವರ್ಷದ ಆಚರಣೆಗೆ ಬ್ರೇಕ್ ಬಿದ್ದಿದೆ.

ಓಮಿಕ್ರಾನ್ ಆತಂಕ : ಡಿಸೆಂಬರ್ 28 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ

ಅಷ್ಟೇ ಅಲ್ಲದೆ ಡಿಸೆಂಬರ್ 30 ರಿಂದ ಜನವರಿ 2 ರ ವರೆಗೆ ಪಬ್, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಶೇ ಐವತ್ತು ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಕಾರ್ಯನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ. ಪರಿಣಾಮ ಹೊಸ ವರ್ಷದ ಸಂದರ್ಭದಲ್ಲಿ ಒಂದಿಷ್ಟು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.

ಚೇತರಿಸಿಕೊಳ್ಳುತ್ತಿರುವ ಉದ್ಯಮಕ್ಕೆ ಕ್ಷೇತ್ರಕ್ಕೆ ಓಮಿಕ್ರಾನ್ ಕೊಡುತ್ತಾ ಏಟು?

ಕೋವಿಡ್ ಲಾಕ್‌ಡೌನ್ ಪರಿಣಾಮ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಅದರಲ್ಲೂ ಹೋಟೆಲ್, ಪಬ್, ರೆಸ್ಟೋರೆಂಟ್‌ಗಳು ಮುಚ್ಚಿದ ಪರಿಣಾಮ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಮತ್ತೆ ಓಮಿಕ್ರಾನ್ ಆತಂಕ ಎದುರಾಗಿದೆ.

ಓಮಿಕ್ರಾನ್ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕೆಲವೊಂದು ನಿರ್ಬಂಧಗಳು ಜಾರಿಗೊಳ್ಳುತ್ತಿವೆ. ಪರಿಣಾಮ ಹೋಟೆಲ್ ಉದ್ಯಮ ಕ್ಷೇತ್ರ ಆತಂಕದಲ್ಲಿದೆ. ಈ ನಿಟ್ಟಿನಲ್ಲಿ ಉದ್ಯಮ ಕ್ಷೇತ್ರದ ಪರಿಸ್ಥಿತಿ ಗಮನಿಸಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂಬುವುದು ಇವರ ಆಗ್ರಹವಾಗಿದೆ.



Read more