ಬೆಂಗಳೂರು: ಕೆಜಿಎಫ್ ಖ್ಯಾತಿಯ ನಟ ಯಶ್, ಕುಟುಂಬದ ಜತೆ ಕ್ರಿಸ್‌ಮಸ್ ಹಬ್ಬ ಆಚರಿಸಿದ್ದಾರೆ.
ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಜತೆ ಅಲಂಕೃತ ಕ್ರಿಸ್‌ಮಸ್ ಟ್ರೀ ಪಕ್ಕದಲ್ಲಿ ನಿಂತುಕೊಂಡಿರುವ ಫೋಟೊವನ್ನು ರಾಧಿಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಶ್–ರಾಧಿಕಾ ದಂಪತಿ ಮಕ್ಕಳಾದ ಐರಾ ಮತ್ತು ಯಥರ್ವ್, ಕ್ರಿಸ್‌ಮಸ್ ಟ್ರೀ ಬಳಿ ನಿಂತುಕೊಂಡಿರುವ ಫೋಟೊ ಕೂಡ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
2016ರಲ್ಲಿ ಯಶ್, ನಟಿ ರಾಧಿಕಾ ಅವರನ್ನು ವಿವಾಹವಾಗಿದ್ದರು.
ಜನಪ್ರಿಯ ಚಿತ್ರ ಕೆಜಿಎಫ್ ಮೂಲಕ ನಟ ಯಶ್ ಖ್ಯಾತಿ ದೇಶವ್ಯಾಪಿ ಹಬ್ಬಿದೆ.
ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ
ಕೆಜಿಎಫ್ ಚಾಪ್ಟರ್ 2 ಚಿತ್ರ ಸಿದ್ಧವಾಗಿದ್ದು, 2022ರ ಏಪ್ರಿಲ್ 14ರಂದು ತೆರೆಕಾಣಲಿದೆ.