
ಯುಪಿಐನಲ್ಲಿ ಹೊಸ ಯುಪಿಐ ಐಡಿ ರಚನೆ ಹೇಗೆ?
ಹಂತ 1: ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ಸೈನ್ ಇನ್ ಮಾಡಿ
ಹಂತ 2: ಮೇಲಿನ ಬಲ ಮೂಲೆಯಲ್ಲಿ ಇರುವ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ
ಹಂತ 3: ಪಾವತಿ ವಿಧಾನಗಳನ್ನು ಆಯ್ಕೆಮಾಡಿ
ಹಂತ 4: ನೀವು ರಚಿಸಲು ಬಯಸುವ ಹೊಸ ಯುಪಿಐ ಐಡಿಯ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ
ಹಂತ 5: ಡ್ರಾಪ್-ಡೌನ್ ಮೆನುವಿನಿಂದ “Manage UPI IDs” ಎಂದು ಆಯ್ಕೆಮಾಡಿ
ಹಂತ 6: ಯುಪಿಐ ಐಡಿಯನ್ನು ರಚನೆ ಮಾಡಲು ‘+’ ಅನ್ನು ಟ್ಯಾಪ್ ಮಾಡಿ
ಹಂತ 7: ಪಾವತಿ ಮಾಡುವಾಗ “Choose account to pay with” ಅಡಿಯಲ್ಲಿ ನೀವು ಪಾವತಿಸಲು ಬಯಸುವ ಯುಪಿಐ ಐಡಿಯನ್ನು ಆಯ್ಕೆ ಮಾಡಿದರೆ ಪೂರ್ಣವಾಗಲಿದೆ

ಗೂಗಲ್ ಪೇನಲ್ಲಿ ಯುಪಿಐ ಐಡಿ ಕಂಡು ಹಿಡಿಯುವುದು ಹೇಗೆ?
ಹಂತ 1: ನಿಮ್ಮ ಯುಪಿಐ ಐಡಿಯನ್ನು ಪತ್ತೆ ಹಚ್ಚಲು ಮೊದಲ ಗೂಗಲ್ ಪೇ ಅನ್ನು ತೆರಿಯಿರಿ, ಈ ವೇಳೆ ನೀವು ಗೂಗಲ್ ಪಿನ್ ಅನ್ನು ಹಾಕಬೇಕು
ಹಂತ 2: ಬಲ ಭಾಗದ ಮೂಲೆಯಲ್ಲಿ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ
ಹಂತ 3: ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ
ಹಂತ 4: ನೀವು ನೋಡಲು ಬಯಸುವ ಯುಪಿಐ ಐಡಿ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ
ಹಂತ 5: ಯುಪಿಐ ಐಡಿ ಕ್ಯಾಮ್ ಅನ್ನು ‘MANAGE UPI IDs’ ಅಡಿಯಲ್ಲಿ ನೀವು ನೋಡಬಹುದು

ಗೂಗಲ್ ಪೇನಲ್ಲಿ ನಿಮ್ಮ ಯುಪಿಐ ಐಡಿಯನ್ನು ಬದಲಾಯಿಸುವುದು ಹೇಗೆ?
ಗೂಗಲ್ ಪೇನಲ್ಲಿ ನಿಮ್ಮ ಯುಪಿಐ ಐಡಿಯನ್ನು ಬದಲಾಯಿಸುವುದು ಎಂದರೆ ನೀವು ಹ್ಯಾಂಡಲ್ ಮತ್ತು ಬ್ಯಾಂಕ್ ಸರ್ವರ್ ಅನ್ನು ಬದಲಾಯಿಸುವುದು ಎಂದರ್ಥ. ಉದಾಹರಣೆಗೆ, ನೀವು ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಖಾತೆಯನ್ನು ಹೊಂದಿದ್ದರೆ, ಅದರ ಪ್ರಸ್ತುತ ಗೂಗಲ್ ಪೇ ಹ್ಯಾಂಡಲ್‌ನಲ್ಲಿ ನಿಮ್ಮ ಹೆಸರು @okaxis ಆಗಿದೆ. ಈಗ ನೀವು ಬ್ಯಾಂಕ್ ಸರ್ವರ್ ಅನ್ನು ಹೆಚ್‌ಡಿಎಫ್‌ಸಿಗೆ ಬ್ಯಾಂಕ್‌ಗೆ ಬದಲಾಯಿಸಲು ಬಯಸಿದರೆ yourname@okhdfcbank ಎಂದಾಗುತ್ತದೆ. ಗೂಗಲ್ ಪೇನಲ್ಲಿ ನಿಮ್ಮ ಯುಪಿಐ ಐಡಿಯನ್ನು ಬದಲಾಯಿಸುವುದು ಹೇಗೆ ಎಂದು ಈ ಕೆಳಗೆ ವಿವರಿಸಲಾಗಿದೆ.
ಹಂತ 1: ಗೂಗಲ್ ಪೇ ತೆರೆಯಿರಿ ಮತ್ತು ಸೈನ್ ಇನ್ ಮಾಡಿ
ಹಂತ 2: ಮೇಲಿನ ಬಲ ಮೂಲೆಯಲ್ಲಿ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ
ಹಂತ 3: ಪಾವತಿ ವಿಧಾನವನ್ನು ಆಯ್ಕೆಮಾಡಿ
ಹಂತ 4: ನೀವು ನೋಡಲು ಬಯಸುವ ಯುಪಿಐ ಐಡಿ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ
ಹಂತ 5: ನೀವು ಬಳಸುತ್ತಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಯುಪಿಐ ಐಡಿಯನ್ನು ಟ್ಯಾಪ್ ಮಾಡಿ
ಹಂತ 6: ನೀವು ಬಳಸಲು ಬಯಸುವ ಯುಪಿಐ ಐಡಿ ಪಕ್ಕದಲ್ಲಿರುವ ‘+’ ಚಿಹ್ನೆಯನ್ನು ಟ್ಯಾಪ್ ಮಾಡಿದರೆ ಹಂತ ಕೊನೆಯಾಗಲಿದೆ
ನೀವು ಮಾಡಿದಾಗ, ‘proceed to pay’ ಅನ್ನು ಕ್ಲಿಕ್ ಮಾಡುವ ಮೊದಲು ನಿಮ್ಮ ಯುಪಿಐ ಐಡಿ ನಿಮಗೆ ಕಾಣಿಸಲಿದೆ.

ಯುಪಿಐ ಐಡಿ ಏಕೆ ಬೇಕು?
ಪ್ರತಿಯೊಬ್ಬ ಯುಪಿಐ ಬಳಕೆದಾರರು ವಿಪಿಎ ರಚನೆ ಮಾಡಬಹುದು ಅಥವಾ ಸಾಮಾನ್ಯವಾಗಿ ಯುಪಿಐ ಐಡಿ ಎಂದು ಕರೆಯುತ್ತಾರೆ. ಅದನ್ನು ಅವರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಯನ್ನು ಪಡೆಯಲು ಈ ಯುಪಿಐ ಐಡಿ ಅಥವಾ ನಿಮ್ಮ ಸಂಖ್ಯೆಯನ್ನು ನೀವು ಕಳುಹಿಸುವವರೊಂದಿಗೆ ಹಂಚಿಕೊಳ್ಳಬೇಕು. ನೀವು ಒಂದೇ ಅಪ್ಲಿಕೇಶನ್‌ನಲ್ಲಿ ಬಹು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು. ಆದಾಗ್ಯೂ, ಪ್ರತಿ ಬ್ಯಾಂಕ್ ಖಾತೆಯು ವಿಭಿನ್ನ ಯುಪಿಐ ಐಡಿಯನ್ನು ಹೊಂದಿರುತ್ತದೆ. ಅವುಗಳಲ್ಲಿ ಒಂದು ಮಾತ್ರ ನೀವು ಹಣವನ್ನು ಸ್ವೀಕರಿಸುವ ಪ್ರಾಥಮಿಕ ಬ್ಯಾಂಕ್ ಖಾತೆಯಾಗಿರುತ್ತದೆ. ಆದಾಗ್ಯೂ, ಪಾವತಿ ಮಾಡುವ ಸಮಯದಲ್ಲಿ, ಪಾವತಿ ಮಾಡಲು ನೀವು ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಗೂಗಲ್ ಪೇನಲ್ಲಿ ಹೆಚ್ಚುವರಿ ಯುಪಿಐ ಐಡಿಯನ್ನು ರಚಿಸುವುದು ಸುಲಭ ಮತ್ತು ಕೆಲವೇ ನಿಮಿಷಗಳಲ್ಲಿ ಆಗಲಿದೆ.