ಬೆಂಗಳೂರು: ವಿಕ್ಕಿ ಜೈನ್ ಜತೆ ಮದುವೆಗೆ ಕೆಲವೇ ದಿನ ಬಾಕಿ ಉಳಿದಿರುವಾಗಲೇ ನಟಿ ಅಂಕಿತಾ ಲೋಖಂಡೆ ಅವರು ಕಾಲಿಗೆ ಗಾಯಮಾಡಿಕೊಂಡಿದ್ದಾರೆ.
ಪವಿತ್ರ ರಿಶ್ತಾ ಹಿಂದಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ಅಂಕಿತಾ ಲೋಖಂಡೆ ಅವರ ಕಾಲು ತಿರುಚಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬಳಿಕ ಮನೆಗೆ ಮರಳಿದ್ದು, ಕೆಲವು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಅಂಕಿತಾ ಮತ್ತು ವಿಕ್ಕಿ ಮದುವೆ ಇದೇ ತಿಂಗಳು ಮುಂಬೈಯ ಗ್ರಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ.
ವಿಕ್ಕಿ–ಕತ್ರೀನಾ ಮದುವೆ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಉಸ್ತುವಾರಿ
ವಿಕ್ಕಿ ಮತ್ತು ಅಂಕಿತಾ ಕುಟುಂಬ ಮದುವೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವಾಗಲೇ ಅವರ ಕಾಲಿಗೆ ಗಾಯವಾಗಿದೆ.
ಇನ್ಸ್ಟಾಗ್ರಾಂನಲ್ಲಿ ಹವಾ ಸೃಷ್ಟಿಸಿದ ನಟಿ ಅಲನ್ನಾ ಪಾಂಡೆ
ಇವರಿಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.