Karnataka news paper

ಸುರತ್ಕಲ್‌ ಎನ್‌ಐಟಿಕೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!


ಹೈಲೈಟ್ಸ್‌:

  • ನ್‌ಐಟಿಕೆ ಕಾಲೇಜಿನ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ
  • ಬಿಹಾರ ಒರೈಯಾ ಗ್ರಾಮದ ಸೌರವ್ ಕುಮಾರ್ ಯಾದವ್ (19) ಮಾಡಿಕೊಂಡ ವಿದ್ಯಾರ್ಥಿ
  • ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ಮಾನಸಿಕವಾಗಿ ನೊಂದಿದ್ದೇನೆ. ವಿದ್ಯಾಭ್ಯಾಸ ಸಾಲವನ್ನು ಸಂದಾಯ ಮಾಡಿ ಎಂದು ಬರೆದಿದ್ದಾನೆ

ಮಂಗಳೂರು: ಸುರತ್ಕಲ್ ಎನ್‌ಐಟಿಕೆ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಮೂಲತಃ ಬಿಹಾರ ಒರೈಯಾ ಗ್ರಾಮದ ಸೌರವ್ ಕುಮಾರ್ ಯಾದವ್ (19) ಮಾಡಿಕೊಂಡ ವಿದ್ಯಾರ್ಥಿ.

ಈತ ಎನ್‌ಐಟಿಕೆ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಬಿಟೆಕ್ ಎಂಜಿನಿಯರಿಂಗ್ ಓದುತ್ತಿದ್ದ. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ಸೌರವ್ ಭಾನುವಾರ ಬೆಳಗ್ಗೆ 8ಗಂಟೆಯವರೆಗೂ ಎದ್ದಿರಲಿಲ್ಲ. ಇದನ್ನು ಕಂಡ ಸ್ನೇಹಿತ ರೂಮಿನ ಬಾಗಿಲು ತೆರೆದು ನೋಡಿದಾಗ ಸೌರವ್ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸಾವಿಗೆ ಕಾರಣವೇನು?

ಸೌರವ್ ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಈಗಾಗಲೇ ನನ್ನ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರೂ. ಸಾಲ ಮಾಡಿದ್ದಾರೆ. ಇನ್ನಷ್ಟು ಸಾಲ ಮಾಡಿದರೆ ನನ್ನ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಆದುದರಿಂದ ನನ್ನ ಖಾತೆಯಲ್ಲಿ 46ಸಾವಿರ ರೂ. ಹಣವಿದ್ದು, ನನ್ನ 1ಲಕ್ಷ ರೂ. ವಿದ್ಯಾಭ್ಯಾಸ ಸಾಲವನ್ನು ಸಂದಾಯ ಮಾಡಿ ಎಂದು ಬರೆದಿದ್ದಾನೆ.
ಬೆಂಗಳೂರಿನಲ್ಲಿ ಪೊಲೀಸ್‌ ವಶದಲ್ಲಿದ್ದ ಆರೋಪಿ ಸ್ಕೈವಾಕ್‌ನಿಂದ ಜಿಗಿದು ಸಾವು..
ಮೃತದೇಹ ಊರಿಗೆ
ಸೌರವ್ ಕುಟುಂಬ ಬಡತನದಲ್ಲಿದ್ದು, ಮಂಗಳೂರಿಗೆ ಬರುವ ಪರಿಸ್ಥಿತಿಯಲ್ಲಿರದ ಕಾರಣ ವಿದ್ಯಾರ್ಥಿಯ ಮೃತದೇಹ ಮಂಗಳೂರಿನಲ್ಲೇ ಅಂತ್ಯಸಂಸ್ಕಾರ ನಡೆಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಎನ್‌ಐಟಿಕೆ ವಿದ್ಯಾರ್ಥಿಗಳು, ಶಿಕ್ಷಕರು ಹಣ ಕ್ರೋಢೀಕರಿಸಿ ಮೃತದೇಹವನ್ನು ಸೌರವ್‌ನ ಊರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸೌರವ್ ಎಸ್ಸೆಸ್ಸೆಲ್ಸಿಯಲ್ಲಿರುವಾಗ ಆತ್ಮಹತ್ಯೆ ಯತ್ನಿಸಿದ ಬಗ್ಗೆ ಮಾಹಿತಿಯಿದೆ. ಆತನ ಡೆತ್‌ನೋಟು ವಶಕ್ಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಸಮಗ್ರ ತನಿಖೆ ಮುಂದುವರಿದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.



Read more