ಹೈಲೈಟ್ಸ್:
- ಹುಬ್ಬಳ್ಳಿಯಲ್ಲಿ 28,29 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ
- ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಲಾಂಛನ ಬಿಡುಗಡೆ
- ಸಚಿವ ಶಂಕರಪಾಟೀಲ್ ಮುನೇನಕೊಪ್ಪರಿಂದ ಬಿಡುಗಡೆ
ಸಭೆಯಲ್ಲಿ ಪರಿಷತ್ ಚುನಾವಣೆಯಲ್ಲಿನ ವಿದ್ಯಮಾನಗಳನ್ನು ಚರ್ಚಿಸಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲವುಗಳನ್ನು ಸ್ವಾಗತಿಸಬೇಕಾಗುತ್ತದೆ. ಹಾಗೆ ನೋಡಿದರೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದದೇವೆ. ಧಾರವಾಡ ಕ್ಷೇತ್ರದಲ್ಲಿಯೂ ಜಯಗಳಿಸಿದ್ದೇವೆ. ಆದರೆ ಅಂತರ ಕಡಿಮೆಯಾಗಿದೆಯಷ್ಟೇ ಬೆಳಗಾವಿ ರಾಜಕಾರಣ ಬಹಳ ವಿಭಿನ್ನವಾಗಿದೆ. ಕೆಲವು ಸಂಗತಿಗಳ ಬಗ್ಗೆ ಚರ್ಚೆ ನಡೆಯಲಿವೆ ಎಂದು ಸಚಿವ ಮುನೇನಕೊಪ್ಪ ತಿಳಿಸಿದರು.
ಭಾನುವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ: ನಡೆಯಲಿರುವ ಪ್ರಮುಖ ಚರ್ಚೆಗಳೇನು?
ಸಿಎಂ ಬದಲಾವಣೆ ಇಲ್ಲ!
ಮಾಜಿ ಸಿಎಂಜಗದೀಶ ಶೆಟ್ಟರ್ ನಂತರ ಬಹಳ ವರ್ಷಗಳ ಬಳಿಕ ಈ ಭಾಗದವರು ಸಿಎಂ ಆಗಿದ್ದಾರೆ. ಬಸವರಾಜ ಬೊಮ್ಮಾಯಿಯವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮುಂದಿನ ಎಲೆಕ್ಷನ್ ವರೆಗೂ ಸಿಎಂ ಆಗಿ ಮುಂದುವರಿಯುತ್ತಾರೆ. ಯವುದೇ ಕಾರಕ್ಕೂ ಸಿಎಂ ಬದಲಾಣೆಯಾಗುವುದು ಆಗುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಹು-ಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಲಿಂಗರಾಜ ಪಾಟೀಲ್, ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ ಇದ್ದರು.