Karnataka news paper

ರಾಜ್ಯದ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರ ಲಸಿಕೆ ಸರ್ಟಿಫಿಕೇಟ್‌ ಚೆಕ್ಕಿಂಗ್‌!


ಹೈಲೈಟ್ಸ್‌:

  • ಮಕ್ಕಳಿಗಾಗಿ ಸೃಷ್ಟಿಯಾಗಲಿದೆ ಲಸಿಕೆ ಒತ್ತಡ
  • ಖಾಸಗಿ ಶಾಲೆಗಳಲ್ಲಿ 2 ಡೋಸ್‌ ಲಸಿಕೆ ಪಡೆದ ಬಗ್ಗೆ ಪರಿಶೀಲನೆ
  • ಸರಕಾರಿ ಶಾಲೆಗಳಲ್ಲುಈ ನಡೆಗೆ ಪೋಷಕರ ಆಗ್ರಹ

ನಾಗರಾಜು ಅಶ್ವತ್‌್ಥ, ಬೆಂಗಳೂರು ಗ್ರಾಮಾಂತರ
ರಾಜ್ಯಾದ್ಯಂತ ಓಮಿಕ್ರಾನ್‌ ಆತಂಕದ ನಡುವೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪೋಷಕರಿಂದ 2ಡೋಸ್‌ ಲಸಿಕೆ ಪಡೆದ ಪ್ರಮಾಣ ಪತ್ರದ ಪರಿಶೀಲನೆ ಜೋರಾಗಿ ನಡೆಯುತ್ತಿದೆ. ಪ್ರತಿ ಪೋಷಕರು ಕಡ್ಡಾಯವಾಗಿ 2 ಡೋಸ್‌ ಲಸಿಕೆ ಪಡೆಯಲೇಬೇಕಿರುವ ನಿಯಮ ಹೇರಿದ ಹಿನ್ನೆಲೆ ಅನೇಕ ಶಾಲೆಗಳಲ್ಲಿ ಲಸಿಕೆ ಮೇಳಗಳನ್ನೇ ಆಯೋಜನೆ ಮಾಡಲಾಗುತ್ತಿದ್ದು, ಸೋಂಕಿನಿಂದ ಮಕ್ಕಳ ರಕ್ಷಣೆಗೊಂದು ಉತ್ತಮ ಹೆಜ್ಜೆಯಿಟ್ಟಂತಾಗುತ್ತಿದೆ.

ಇದೇ ಮಾದರಿಯಲ್ಲಿ ಸರಕಾರಿ ಶಾಲಾ, ಕಾಲೇಜುಗಳಲ್ಲು ಪರಿಶೀಲನೆ ಆರಂಭಿಸಿದರೆ, ರಾಜ್ಯ ಶೇ.100ರಷ್ಟು ಲಸಿಕೆ ಪಡೆಯುವ ಮೂಲಕ 3ನೇ ಅಲೆಯನ್ನು ಸಮರ್ಥವಾಗಿ ತಡೆಗಟ್ಟಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಡಿ.18ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 1ನೇ ಡೋಸ್‌ 4,70,45,165 ಮಂದಿ ಪಡೆದಿದ್ದರೆ, 2ನೇ ಡೋಸ್‌ 3,55,29,414 ಮಂದಿ ಪಡೆದಿದ್ದಾರೆ.

ಡಿಸೆಂಬರ್‌ ಮಾಸಾಂತ್ಯಕ್ಕೆ 1ನೇ ಡೋಸ್‌ ಪೂಧಿರೈಕೆ ಶೇ.100ರ ಗುರಿ ಮುಟ್ಟುವ ನಿರೀಕ್ಷೆಯಿದ್ದರೂ, ಅನೇಕರು 2ನೇ ಡೋಸ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರ ಎಷ್ಟೇ ಜಾಗೃತಿ ಮೂಡಿಸಿದರು ಜನರಲ್ಲಿ2ನೇ ಡೋಸ್‌ ಪಡೆಯಲು ನಿರ್ಲಕ್ಷತ್ರ್ಯವಿದ್ದು, ಮಕ್ಕಳ ಮೂಲಕ ಲಸಿಕೆಗೆ ಒತ್ತಡ ಸೃಷ್ಟಿಸಬೇಕಾದ ಅಗತ್ಯವಿದೆ.

ದೇಶದಲ್ಲಿ ಮುಂದುವರಿದ ಒಮಿಕ್ರಾನ್ ವೈರಾಣುವಿನ ಓಟ : 415ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಖಾಸಗಿ ಶಾಲೆಗಳಲ್ಲಿ ಕಟ್ಟೆಚ್ಚರ

* ರಾಜ್ಯದ ಕೆಲ ಜಿಲ್ಲೆಗಳ ಖಾಸಗಿ ಶಾಲೆಗಳಲ್ಲಿಸೋಂಕು ತಡೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದೆ.

* ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಟ್ರಾವೆಲ್‌ ಹಿಸ್ಟರಿ ಪರಿಶೀಲಿಸಲಾಗುತ್ತಿದೆ.

* ಪೋಷಕರ 2ಡೋಸ್‌ ಲಸಿಕೆ ಪಡೆದ ಪ್ರಮಾಣ ಪತ್ರ ಪರಿಶೀಲನೆಯಾಗುತ್ತಿದೆ.

* ಕೆಲ ಪ್ರತಿಷ್ಠಿತ ಶಾಲೆಗಳಲ್ಲಿಹೊರ ರಾಜ್ಯಗಳಿಂದ ಆಗಮಿಸುವ ಮಕ್ಕಳ ಮತ್ತು ಪೋಷಕರು ಆರ್‌ಟಿಪಿಸಿಆರ್‌ ಟೆಸ್ಟ್‌ ನೆಗಟೀವ್‌ ಪ್ರಮಾಣ ಪತ್ರ ಕೇಳಲಾಗುತ್ತಿದೆ.

ಏಕೆ ಬೇಕು ಪರಿಶೀಲನೆ?

* 2ನೇ ಅಲೆ ವೇಳೆ ಪೋಷಕರಿಂದಲೇ ಮಕ್ಕಳಿಗೆ ಸೋಂಕು ಹರಡಿದ ಉದಾಹರಣೆಗಳಿವೆ.

* ಹೀಗಾಗಿ, ಲಸಿಕೆ ಪಡೆಯದೆ ಸೋಂಕಿಗೆ ಗುರಿಯಾಗುವ ಪೋಷಕರಿಂದ ಮಕ್ಕಳಿಗೆ ಹರಡುವ ಸಾಧ್ಯತೆ

* ಶಾಲೆಗಳಲ್ಲಿ ಅಂತರ, ಮಾಸ್ಕ್‌ ಕಡ್ಡಾಯವಿದ್ದರು ಸಮರ್ಪಕ ಪಾಲನೆಯಿಲ್ಲದ ಹಿನ್ನೆಲೆ ಮಕ್ಕಳಲ್ಲಿ ಸೋಂಕಿನ ಭೀತಿ

ಮರುಕಳಿಸದಿರಲಿ ಮೇ ದುಸ್ಥಿತಿ
2ನೇ ಅಲೆಯ ಹೊಡೆತದಿಂದ ಇಂದಿಗೂ ರಾಜ್ಯಾದ್ಯಂತ ಅನೇಕ ಕುಟುಂಬಗಳು ಹೊರಬಂದಿಲ್ಲ. ಕುಟುಂಬಸ್ಥರನ್ನು ಕಳೆದುಕೊಂಡು, ಸಾಲದ ಶೂಲಕ್ಕೆ ಸಿಕ್ಕು ನಲುಗುತ್ತಿರುವ ಅನೇಕರ ನಡುವೆ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಪುನಃ 3ನೇ ಅಲೆ, ಲಾಕ್‌ಡೌನ್‌ನಂತಹ ದುಸ್ಥಿತಿಯನ್ನು ರಾಜ್ಯ ಎದುರಿಸಬಾರದೆಂದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ 2ನೇ ಡೋಸ್‌ ಕಡ್ಡಾಯವೆಂಬ ನಿಯಮ ಹೇರಬೇಕಿದೆ.

ದುಬೈನಿಂದ ಬಂದವನಿಗೆ ಒಮಿಕ್ರಾನ್ : ತೆಲಂಗಾಣದ ಈ ಗ್ರಾಮದಲ್ಲಿ 10 ದಿನ ಸ್ವಯಂ ಲಾಕ್‌ಡೌನ್‌

ತಜ್ಞರ ಮಾತು ಮರೆಯುವಂತಿಲ್ಲ!
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಸೇರಿದಂತೆ ಅನೇಕ ತಜ್ಞರು 3ನೇ ಅಲೆಯ ಬಗ್ಗೆ ಆರಂಭದಿಂದಲೂ ಎಚ್ಚರಿಸುತ್ತ ಬರುತ್ತಿದ್ದಾರೆ. ಜನ ಮೈಮರೆತರೆ ಕೊರೊನಾ ಸೋಂಕಿನ ಹೊಸ ತಳಿಗಳ ಆತಂಕ ಖಚಿತವಾಗಿರಲಿದೆ. ಹೀಗಾಗಿ, ಮೊದಲು ಶೇ.100ರಷ್ಟು ಲಸಿಕಾಕರಣ ಕಾಣಬೇಕಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿನ್ನು 1ನೇ ಡೋಸ್‌ ಪಡೆಯದ ಅನೇಕ ಹಳ್ಳಿ ಜನರಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರನ್ನು 3ನೇ ಅಲೆಯಿಂದ ರಕ್ಷಿಸಬೇಕಿದೆ.

2ದಿನಕ್ಕಷ್ಟೇ ಓಮಿಕ್ರಾನ್‌ ಆತಂಕ!
ರಾಜ್ಯದಲ್ಲಿಒಮಿಕ್ರಾನ್‌ ಪತ್ತೆಯಾದ ಮೊದಲೆರಡು ದಿನ ಲಸಿಕೆಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳ ಪ್ರಮುಖ ನಗರ ಕೇಂದ್ರಗಳಲ್ಲಿಲಸಿಕೆಗೆ ಸರದಿ ಸಾಲುಗಳು ಕಂಡುಬಂದಿದ್ದವು. ಆದರೆ, ಕ್ರಮೇಣ ಈ ಬೇಡಿಕೆ ಪುನಃ ಸಹಜ ಸ್ಥಿತಿಗೆ ಮರಳಿದ್ದು, 1 ಮತ್ತು 2ನೇ ಡೋಸ್‌ ಲಸಿಕೆ ಪೂಧಿರೈಕೆಗೆ ಸರಕಾರ ನೂತನ ಮಾರ್ಗೋಪಾಯಗಳನ್ನು ಹುಡುಕಬೇಕಾದ ಅನಿವಾರ್ಯತೆಯಿದೆ.

ಮಕ್ಕಳ ಹಿತದೃಷ್ಟಿಯಿಂದಾದರು ಎಲ್ಲರೂ ಲಸಿಕೆ ಪಡೆಯಬೇಕು. ಶಾಲೆಗಳಲ್ಲಿ ಲಸಿಕೆ ಪ್ರಮಾಣ ಪತ್ರ ಪರಿಶೀಲನೆ ಆರಂಭಗೊಂಡರೆ ಖಚಿತವಾಗಿ ಪೋಷಕರು ಲಸಿಕೆಗೆ ಮುಂದಾಗಲಿದ್ದು, ಸರಕಾರ ಈ ನಿಟ್ಟಿನಲ್ಲಿ ಅಧಿಕೃತ ಆದೇಶ ಹೊರಡಿಸಬೇಕಿದೆ.

– ವಿಶಾಲಾಕ್ಷಿ | ದೊಡ್ಡಬಳ್ಳಾಪುರ ನಿವಾಸಿ.

ರಾಜ್ಯದ ಬಹುತೇಕ ಖಾಸಗಿ ಶಾಲೆಗಳಲ್ಲಿಮುನ್ನೆಚ್ಚರಿಕೆ ಕ್ರಮವಾಗಿ ಪೋಷಕರಿಂದ 2ಡೋಸ್‌ ಲಸಿಕೆ ಪಡೆದ ಸರ್ಟಿಫಿಕೇಟ್‌ ಪರಿಶೀಲಿಸಲಾಗುತ್ತಿದ್ದು, ಸರಕಾರ ಈ ನಡೆಯನ್ನು ಅಧಿಕೃತಗೊಳಿಸುವ ಮೂಲಕ ಕೊರೊನಾತಂಕ ಕಡಿಮೆ ಮಾಡಬಹುದಾಗಿದೆ.

– ಶಶಿಕುಮಾರ್‌ | ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ.



Read more