Karnataka news paper

ಫಿಲಂಫೇರ್ ಒಟಿಟಿ: ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಸಮಂತಾ


ಬೆಂಗಳೂರು: ಫಿಲಂಫೇರ್ ಪ್ರಶಸ್ತಿ ಒಟಿಟಿ ವಿಭಾಗದ ಎರಡನೇ ಆವೃತ್ತಿಯಲ್ಲಿ ಸಮಂತಾ ರುತ್ ಪ್ರಭು ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದ ‘ದಿ ಫ್ಯಾಮಿಲಿ ಮ್ಯಾನ್‘ ವೆಬ್ ಸಿರೀಸ್‌ನಲ್ಲಿನ ನಟನೆಗೆ ಸಮಂತಾ ರುತ್ ಪ್ರಭು ಅವರಿಗೆ ಈ ಗೌರವ ದೊರೆತಿದೆ.

ಪ್ರಶಸ್ತಿ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿವರ ಹಂಚಿಕೊಂಡಿರುವ ಸಮಂತಾ, ಇದು ನನಗೆ ದೊರೆತಿರುವ ಐದನೇ ಫಿಲಂಪೇರ್ ಗೌರವ. ಈ ಪ್ರಶಸ್ತಿ ನನಗೆ ದೊರೆಯಲು ಕಾರಣರಾದ ಎಲ್ಲರಿಗೂ ವಂದನೆಗಳು, ನನಗೆ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಅಲ್ಲದೆ, ಫ್ಯಾಮಿಲಿ ಮ್ಯಾನ್ ನಟ ಮನೋಜ್ ಭಾಜಪೇಯಿ ಹಾಗೂ ನಿರ್ದೇಶಕರು, ನಿರ್ಮಾಪಕರು ಮತ್ತು ತಂಡದ ಎಲ್ಲರನ್ನು ಅವರು ನೆನಪಿಸಿಕೊಂಡು ಕೃತಜ್ಞತೆ ತಿಳಿಸಿದ್ದಾರೆ.

‘ಗುಲ್ಲಕ್ ಸೀಸನ್ 2’, ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸ್ಕ್ಯಾಮ್ 1992’ ಸರಣಿಗಳಿಗೂ ವಿವಿಧ ಪ್ರಶಸ್ತಿಗಳು ದೊರೆತಿವೆ.





Read More…Source link