Karnataka news paper

Panvel ಫಾರ್ಮ್‌ಹೌಸ್‌ನಲ್ಲಿ ಹಾವಿನಿಂದ ಕಚ್ಚಿಸಿಕೊಂಡ ನಟ ಸಲ್ಮಾನ್ ಖಾನ್; ಆಸ್ಪತ್ರೆಯಲ್ಲಿ ಚಿಕಿತ್ಸೆ


ಹೈಲೈಟ್ಸ್‌:

  • ಸಲ್ಮಾನ್ ಖಾನ್‌ಗೆ ಇಂದು ಬೆಳಗ್ಗೆ ಹಾವು ಕಚ್ಚಿದೆ
  • Panvel ಫಾರ್ಮ್‌ಹೌಸ್‌ನಲ್ಲಿ ನಡೆದ ಘಟನೆ
  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಲ್ಮಾನ್ ಖಾನ್
  • ಮನೆಯಲ್ಲಿ ಸಲ್ಮಾನ್ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ


ನಟ ಸಲ್ಮಾನ್ ಖಾನ್ ಅವರಿಗೆ Panvel ಫಾರ್ಮ್‌ಹೌಸ್‌ನಲ್ಲಿ ವಿಷರಹಿತ ಹಾವು ಕಚ್ಚಿದೆಯಂತೆ. ಇಂದು ಬೆಳಗ್ಗೆ (ಭಾನುವಾರ) ಈ ಘಟನೆ ನಡೆದಿದೆ. ಎಂಜಿಎಂ ಆಸ್ಪತ್ರೆಯಲ್ಲಿ ಸಲ್ಮಾನ್ ಖಾನ್ ಚಿಕಿತ್ಸೆ ಪಡೆದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಲ್ಮಾನ್ ಖಾನ್ ಕೈಗೆ ಹಾವು ಕಚ್ಚಿದ್ದು, ಈಗ ಸಲ್ಮಾನ್ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ. ಮನೆಯಲ್ಲಿ ಸಲ್ಮಾನ್ ಖಾನ್ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.

ಪಾರ್ಟಿ ಮಾಡಬೇಕು ಎಂದುಕೊಂಡಿದ್ರಂತೆ ಸಲ್ಮಾನ್ ಖಾನ್

ಸಲ್ಮಾನ್ ಖಾನ್‌ಗೆ ವೈದ್ಯರು anti-venom medicine ನೀಡಿದ್ದಾರೆ. ಕೆಲ ಗಂಟೆಗಳ ಕಾಲ ವೈದ್ಯರು ಸಲ್ಮಾನ್ ಖಾನ್‌ರನ್ನು ಪರೀಕ್ಷೆ ಮಾಡಿದ ನಂತರದಲ್ಲಿ ಮನೆಗೆ ಹೋಗಲು ಅನುಮತಿ ನೀಡಿದ್ದಾರೆ. ಡಿಸೆಂಬರ್ 27ಕ್ಕೆ ಸಲ್ಮಾನ್ ಖಾನ್ ಬರ್ತ್‌ಡೇ ಇದ್ದು, ಫಾರ್ಮ್‌ಹೌಸ್‌ನಲ್ಲಿ ಅವರು ಹುಟ್ಟುಹಬ್ಬ ಆಚರಣೆ ಮಾಡುವ ಆಶಯದಲ್ಲಿದ್ದರು. ಇಂದು ರಾತ್ರಿ ಅವರು ಪಾರ್ಟಿ ಮಾಡಲಿದ್ದಾರೆ ಎಂಬ ಮಾಹಿತಿಯೂ ಇತ್ತು. ಆದರೆ ಹಾವು ಕಡಿದಿರೋದರಿಂದ ಸಲ್ಮಾನ್ ವಿಶ್ರಾಂತಿ ಪಡೆಯಲಿದ್ದಾರೆ. ಲಾಕ್‌ಡೌನ್‌ನಲ್ಲಿಯೂ ಈ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಸಮಯ ಕಳೆದಿದ್ದರು, ಆಗ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸೇರಿ ಇನ್ನೂ ಕೆಲವರು ಸಲ್ಮಾನ್‌ಗೆ ಸಾಥ್ ನೀಡಿದ್ದರು. ಜೊತೆಗೆ ಸಲ್ಮಾನ್ ಅವರು ಅಲ್ಲಿಯೇ ಇದ್ದ ಸಾಧನ ಬಳಸಿ ವರ್ಕೌಟ್ ಕೂಡ ಮಾಡೋದನ್ನು ಮರೆತಿರಲಿಲ್ಲ. ಲಾಕ್‌ಡೌನ್‌ ಸಮಯದ ಬಗ್ಗೆ ಸಾಕಷ್ಟು ಬಾರಿ ಸಲ್ಮಾನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಸಲ್ಮಾನ್ ಕೃಷಿ ಫೋಟೋ ವೈರಲ್ ಆಗಿತ್ತು

ನಟನೆ ಜೊತೆಗೆ ಸಲ್ಮಾನ್ ಖಾನ್‌ಗೆ ಕೃಷಿ ಬಗ್ಗೆ ಒಲವಿದೆ. ಈ ಹಿಂದೆ ಸಾಕಷ್ಟು ಬಾರಿ ಅವರು ಕೃಷಿ ಬಗ್ಗೆ ಮಾತನಾಡಿದ್ದು, ಗದ್ದೆಯಲ್ಲಿ ಸಲ್ಮಾನ್ ಖಾನ್ ಟ್ರ್ಯಾಕ್ಟರ್‌ನಲ್ಲಿ ಊಳುವ, ಗದ್ದೆ ನಾಟಿ ಮಾಡುತ್ತಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಕೃಷಿಯಲ್ಲಿ ತೊಡಗಿರುವ ಫೋಟೋಗಳನ್ನು ಸಲ್ಮಾನ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಜೈ ಜವಾನ್ ಜೈ ಕಿಸಾನ್ ಎಂದಿದ್ದ ಸಲ್ಮಾನ್ ಖಾನ್ ( Salman Khan )
ಭತ್ತದ ಸಸಿ ನಾಟಿ ಮಾಡುತ್ತಿದ್ದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಸಲ್ಮಾನ್ ಈ ಹಿಂದೆ, ‘ಒಂದೊಂದು ಕಾಳಿನ ಮೇಲೂ ತಿನ್ನೋರ ಹೆಸರು ಬರೆದಿದೆ, ಜೈ ಜವಾನ್ ಜೈ ಕಿಸಾನ್‌’ ಎಂದು ಕ್ಯಾಪ್ಶನ್ ನೀಡಿದ್ದರು.

ಫಾರ್ಮ್‌ಹೌಸ್‌ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ದ ಬಾಲಿವುಡ್‌ನ ಬ್ಯಾಡ್‌ಬಾಯ್
ಲಾಕ್‌ಡೌನ್‌ನಲ್ಲಿ ಫಾರ್ಮ್‌ಹೌಸ್‌ನಲ್ಲಿಯೇ ಕಳೆದಿದ್ದರಿಂದ ಅವರು ಅಲ್ಲಿಯೇ ಎರಡು ವಿಡಿಯೋ ಹಾಡುಗಳನ್ನು ಶೂಟಿಂಗ್ ಮಾಡಿ, ರಿಲೀಸ್ ಮಾಡಿದ್ದರು. ಮೊದಲು ತಾವೇ ಹಾಡಿದ್ದ ‘ಪ್ಯಾರ್ ಕೊರೊನಾ..’ ಹಾಡನ್ನು ಅವರದೇ ಹೊಸ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್ ಮಾಡಿದರು. ಆಮೇಲೆ ಸಲ್ಮಾನ್‌ ಅವರು ಜಾಕ್ವೆಲಿನ್ ಫರ್ನಾಂಡಿಸ್‌ ( jacqueline fernandez ) ಜೊತೆ ‘ತೇರೆ ಬಿನಾ’ ಹಾಡನ್ನು ಮಾಡಿದ್ದರು . ಈ ಎರಡು ಹಾಡುಗಳಿಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.



Read more