ಹೈಲೈಟ್ಸ್:
- ಮಗ ನಿಖಿಲ್ ಸಿನಿಮಾ ನೋಡಿದ ಎಚ್ ಡಿ ಕುಮಾರಸ್ವಾಮಿ
- ನಿಖಿಲ್ ಸಿನಿಮಾವನ್ನು ನೋಡಿ ಹೊಗಳಿದ ಎಚ್‌ಡಿಕೆ
- ಬಂದ್ ಬಗ್ಗೆ ಎಚ್‌ಡಿಕೆ ಅಭಿಪ್ರಾಯ ಏನು?
- ಪುನೀತ್ ರಾಜ್‌ಕುಮಾರ್‌ರನ್ನು ಸ್ಮರಿಸಿದ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ
ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಎಲ್ಲರೂ ಕೂತು ನೋಡುವ ಸಿನಿಮಾ ‘ರೈಡರ್’
ಲಹರಿ ಸಂಸ್ಥೆ ವತಿಯಿಂದ ಉತ್ತಮ ಸಾಂಸಾರಿಕ ಸಿನಿಮಾ ಮಾಡಲಾಗಿದೆ. ಎಲ್ಲ ವರ್ಗದವರು ‘ರೈಡರ್’ ಸಿನಿಮಾ ನೋಡಬಹುದು. ರೈಡರ್ ಸಿನಿಮಾ ಟೈಟಲ್‌ನಲ್ಲಿ ಆಕ್ಷನ್ ಸಿನಿಮಾ ಎನಿಸಬಹುದು, ಆದರೆ ಎಲ್ಲ ವಯಸ್ಸಿನವರು ನೋಡಬಹುದಾದ ಸಿನಿಮಾ. ಈ ಸಿನಿಮಾದಲ್ಲಿ ಎಲ್ಲ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಪ್ರೇಕ್ಷಕರು ಕನ್ನಡ ಸಿನಿಮಾ ನೋಡಿದರೆ ಹೆಚ್ಚು ಅನುಕೂಲವಾಗುತ್ತದೆ. ಕಥೆಯ ನಿರೂಪಣೆ ಸಿನಿಮಾ ಅಂತ್ಯದವರೆಗೂ ಕುತೂಹಲ ಮೂಡಿಸುವುದು. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಲ್ಲಿ ಕ್ರೌರ್ಯಮ ಹಿಂಸೆಯೇ ಜಾಸ್ತಿ. ಆದರೆ ರೈಡರ್ ಸಿನಿಮಾ ಎಲ್ಲರೂ ಕೂತು ನೋಡಬಹುದಾದ ಸಿನಿಮಾ.
ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೇ ಕಷ್ಟ; ಕಾನೂನಾತ್ಮಕವಾಗಿ ಎಂಇಎಸ್ ನಿಷೇಧ ಮಾಡಿ
ನಿಖಿಲ್ ರಾಜಕಾರಣಕ್ಕಿಂತ ಸಿನಿಮಾಕ್ಕೆ ಹೆಚ್ಚಿನ ಲಕ್ಷ್ಯ ಕೊಡಲಿ: ಎಚ್ ಡಿ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯಕ್ಕಿಂತ ಜಾಸ್ತಿ ನಟರಾಗಿ ಚಿತ್ರರಂಗದಲ್ಲಿ ಇರಬೇಕು. ಈ ವೃತ್ತಿಯಲ್ಲಿ ಹಲವಾರು ವರ್ಷಗಳು ಇರಬೇಕು. ಚಿತ್ರರಂಗದಲ್ಲಿ ನಟರ ಅವಶ್ಯಕತೆ ಇದೆ, ಆ ನಟರ ಅವಶ್ಯಕತೆ ತುಂಬುವ ಕಲಾವಿದನ ಗುಣ ಇದೆ. ಇದು ಭಗವಂತನ ಇಚ್ಛೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮೂರನೇ ಸಿನಿಮಾದಲ್ಲಿ ನಿಖಿಲ್ ಅತ್ಯದ್ಭುತವಾಗಿ ನಟಿಸಿದ್ದಾರೆ. ರಾಜಕೀಯದ ಕಡೆಗೆ ಗಮನ ಕೊಟ್ಟಿದ್ದರಿಂದ ನಿಖಿಲ್ ಸಿನಿಮಾ ಕಡೆಗೆ ಅಷ್ಟು ಗಮನ ಕೊಡಲಿಲ್ಲ. ಆದರೆ ‘ರೈಡರ್’ ಸಿನಿಮಾ ನೋಡಿದರೆ ರಾಜಕಾರಣಕ್ಕಿಂತ ನಿಖಿಲ್, ಜಾಸ್ತಿ ಸಿನಿಮಾ ಕಡೆಗೆ ಮುಖ ಮಾಡಿ, ಕನ್ನಡ ಚಿತ್ರರರಂಗಕ್ಕೆ ಕೊಡುಗೆ ಕೊಡಬೇಕು. ನಾನು ಈ ಕುರಿತು ನಿಖಿಲ್ ಜೊತೆ ಮಾತನಾಡುತ್ತೇನೆ. ನಮ್ಮ ನಾಡಿನಲ್ಲಿ ಪುನೀತ್‌ರಂತಹ ಅದ್ಭುತವಾದ ನಟ ಅಕಾಲಿಕ ಮರಣ ಹೊಂದಿದ್ದಾರೆ. ಅಂತಹ ಕಲಾವಿದರ ಅವಶ್ಯಕತೆ ಇದೆ. ಹೀಗಾಗಿ ಚಿತ್ರರಂಗಕ್ಕೆ ಈ ನಿಟ್ಟಿನಲ್ಲಿ ನಿಖಿಲ್ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ಬಯಸುವೆ.
ನಾವೆಲ್ಲ ಹಳ್ಳಿ ಜನ, ನಮ್ಮ ಮನೆಯಲ್ಲಿ ಇಂದಿಗೂ ಮುದ್ದೆ, ಅನ್ನ ಸಾರು ತಿನ್ನುತ್ತೇವೆ: ನಿಖಿಲ್ ಕುಮಾರಸ್ವಾಮಿ
ಬಂದ್ ಮಾಡಿ ಏನು ಸಾಧನೆ ಮಾಡ್ತೀರಿ? ಎಚ್‌ಡಿಕೆ ಆಕ್ರೋಶ
ಬಂದ್‌ಗೆ ಬೆಂಬಲ ಕೊಡದ ಸಿನಿಮಾ ನಟರಿಗೆ ಮಸಿ ಬಳೆಯುತ್ತೇವೆ ಅಂತ ಹೇಳಿರೋದು ತಿಳಿಗೇಡಿಗಳು. ಮಸಿ ಬಳಿಬೇಕಿರೋದು ಕನ್ನಡದ ದ್ರೋಹಿಗಳಿಗೆ? ಇವರೆಲ್ಲ ನಿಜವಾದ ಕನ್ನಡಿಗರಾ? ಕನ್ನಡ ದ್ರೋಹಿಗಳಿಗೆ ಮಸಿ ಬಳಿಬೇಕು, ಈ ಹೇಳಿಕೆಗೆ ಅರ್ಥ ಇದೆಯಾ? ಬಂದ್ ಮಾಡೋದರಿಂದ ಏನು ಉಪಯೋಗ ಇದೆ? ಬಂದ್ ಆದಕೂಡಲೇ ಎಂಇಎಸ್ ಬ್ಯಾನ್ ಆಗುತ್ತಾ? ಸಂವಿಧಾನದ ಚೌಕಟ್ಟಿನಲ್ಲಿ ನಾವು ಅದರದ್ದೇ ಆದ ರೀತಿಯಲ್ಲಿ ಕೆಲಸ ಮಾಡಬೇಕು. ನಾನು ರಾಜಕೀಯದಲ್ಲಿ ಇರೋದರಿಂದ ಪ್ರತಿ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಂದ್ ಮಾಡೋದರಿಂದ ಏನು ಸಾಧನೆ ಮಾಡ್ತೀರಿ? ಈ ರೀತಿ ಮಾಡಿದ್ರೆ ನಿಜಕ್ಕೂ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಇಟ್ಟುಕೊಂಡವರಿಗೆ ಅವಮಾನ ಮಾಡಿದಂತಾಗುತ್ತದೆ. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬೇಕೆ ವಿನಃ, ದಬ್ಬಾಳಿಕೆ, ಆಕ್ರೋಶದಿಂದ ಸಾಧನೆ ಮಾಡಲಾಗದು.
Rider: ನಿಖಿಲ್ ಕುಮಾರಸ್ವಾಮಿ ‘ರೈಡರ್’ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?