Karnataka news paper

ಅಂಕೋಲಾದಲ್ಲಿ ಪ್ರವಾಸಿ ಪೊಲೀಸರಿಂದ ಟೋಲ್ ಗೇಟ್ ನಲ್ಲಿ ಗಲಾಟೆ; ಠಾಣೆಯಲ್ಲಿ ಪ್ರಕರಣ ಇತ್ಯರ್ಥ!


ಉತ್ತರ ಕನ್ನಡ: ಪ್ರವಾಸಿ ಪೊಲೀಸರಿಂದ ಟೋಲ್ ಗೇಟ್ ನಲ್ಲಿ ಗಲಾಟೆ ನಡೆದು, ಟೋಲ್ ಸಿಬ್ಬಂದಿಯೊಂದಿಗೆಟೋಲ್ ಗೇಟ್ ಕೈಕೈ ಮಿಲಾಯಿಸಿರುವ ಘಟನೆ ನಡೆದಿದೆ. ಅಲ್ಲದೇ‌ ಇದಕ್ಕೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯಾವಳಿ ಕೂಡ ವೈರಲ್ ಆಗಿದೆ.

ಬೆಂಗಳೂರಿನಿಂದ ಎರಡು ಕಾರುಗಳಲ್ಲಿ ಕುಟುಂಬಸ್ಥರ ಜೊತೆ ಗೋವಾಕ್ಕೆ ಪ್ರವಾಸಕ್ಕೆ ಹೊರಟಿದ್ದ ಪೊಲೀಸರು, ಖಾಸಗಿ ಕಾರಿಗೆ ‘ಪೊಲೀಸ್‘ ಎಂಬ ಬೋರ್ಡ್ ಅಳವಡಿಸಿಕೊಂಡು ಬಂದಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾದ ಹಟ್ಟಿಕೇರಿ ಟೋಲ್ ಗೇಟ್ ನಲ್ಲಿ ಕಾರು ತಡೆದ ಟೋಲ್ ಗೇಟ್ ಸಿಬ್ಬಂದಿ, ಟೋಲ್ ಕಟ್ಟುವಂತೆ ಕೇಳಿದ್ದಾರೆ.
ಬೆಂಗಳೂರು: ವಾಯುಪಡೆ ಸಿಬ್ಬಂದಿಯ ಸುಲಿಗೆ ಮಾಡಿದ್ದವನ ಸೆರೆ
ಇದರಿಂದಾಗಿ ಸಿಟ್ಟಿಗೆದ್ದ ಪೊಲೀಸರು, ಟೋಲ್ ಗೇಟ್ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೇ, ಸಿಬ್ಬಂದಿ ಮೈಮೇಲೆ ಕೈ ಮಾಡಿದ್ದಾರೆ. ಟೋಲ್ ಗೇಟ್ ನಲ್ಲಿ ನಡೆದ ಈ ಗಲಾಟೆಯ ವಿಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ್ತೆ ವಿಜಯನಗರದಲ್ಲಿ 10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ!
ಇನ್ನು ಈ ಪ್ರಕರಣ ಟೋಲ್ ಗೇಟ್ ನಲ್ಲಿ ಮುಕ್ತಾಯಗೊಳ್ಳದೆ, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎರಡೂ ಕಡೆಯವರ ವಾದ- ವಿವಾದ ಆಲಿಸಿದ ಪೊಲೀಸರು, ಎರಡೂ ಕಡೆಯವರಿಗೂ ಬುದ್ಧಿವಾದ ಹೇಳಿ ಪ್ರಕರಣ ಇತ್ಯರ್ಥಪಡಿಸಿ ಕಳುಹಿಸಿದ್ದಾರೆನ್ನಲಾಗಿದೆ.



Read more