Karnataka news paper

ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ವಸ್ತುಗಳ ಮಾರಾಟ; ಮೂರು ವರ್ಷಗಳಲ್ಲಿ ದಾಖಲಾಗಿವೆ 927 ಪ್ರಕರಣಗಳು!


ಹೈಲೈಟ್ಸ್‌:

  • ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ವಸ್ತುಗಳ ಮಾರಾಟ
  • ಮೂರು ವರ್ಷಗಳಲ್ಲಿ ದಾಖಲಾಗಿವೆ 927 ಪ್ರಕರಣಗಳು!
  • ಮೂರು ವರ್ಷಗಳಲ್ಲಿ ಒಟ್ಟು 5,197,500 ದಂಡ ವಸೂಲಿ

ಬೆಂಗಳೂರು:ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ 927 ಪ್ರಕರಣಗಳು ದಾಖಲಾಗಿದ್ದು, ಒಟ್ಟು 5,197,500 ದಂಡ ವಸೂಲಿ ಮಾಡಲಾಗಿದೆ.

ವ್ಯಾಪಾರಿಗಳು ಗ್ರಾಹಕರಿಗೆ ಗರಿಷ್ಠ ಮಾರಾಟ ದರ(ಎಂಆರ್‌ಪಿ) ಗಿಂತ ಹೆಚ್ಚಿನ ದರ ವಿಧಿಸಬಾರದು ಎಂಬ ನಿಯಮವಿದೆ. ಆದರೆ ಇದನ್ನು ಮೀರಿ ಗ್ರಾಹಕರಿಂದ ಹೆಚ್ಚಿನ ದರಗಳನ್ನು ವಸೂಲಿ ಮಾಡಲಾಗುತ್ತಿದೆ.

ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ತಪಾಸಣಾ ಕಾರ್ಯ ನಡೆಸಿ ದಿ ಲೀಗಲ್‌ ಮೆಟ್ರಾಲಜಿ ನಿಯಮಗಳು 2011 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದಾರೆ.

ದೂರು ವೇದಿಕೆ ಸದ್ಬಳಕೆ ಮಾಡಿಕೊಳ್ಳಿ

ದಾಖಲಾದ ಪ್ರಕರಣಗಳೆಷ್ಟು?

ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ತಪಾಸಣಾ ಕಾರ್ಯ ನಡೆಸಿ ಕಳೆದ ಮೂರು ವರ್ಷಗಳಲ್ಲಿ ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ವಿರುದ್ಧ 927 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

2017-18 – 371

2018-19- 261

2019- 20 – 295

ಇನ್ನು ನಿಯಮ ಉಲ್ಲಂಘನೆ ಮಾಡಿದ ವ್ಯಾಪಾರಿಗಳ ವಿರುದ್ಧ ಮೊಕದ್ದಮೆ ದಾಖಲು ಮಾಡುವುದು ಮಾತ್ರವಲ್ಲದೆ ದಂಡವನ್ನು ವಸೂಲಿ ಮಾಡಲಾಲಾಗಿದೆ. 2017-18 – 9,74,000, 2019-29- 9,89,500 ಹಾಗೂ 2019-20- 32,34,000 ದಂಡ ವಸೂಲಿ ಮಾಡಲಾಗಿದೆ.

ಹೆಚ್ಚು ಪ್ರಕರಣಗಳು ಯಾವ ಜಿಲ್ಲೆಗಳಲ್ಲಿ

ಎಂಆರ್‌ಪಿಗಿಂದ ಹೆಚ್ಚಿನ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಅತೀ ಹೆಚ್ಚಿನ ಪ್ರಕರಣಗಳು ಆರು ಜಿಲ್ಲೆಗಳಲ್ಲಿ ವರದಿಯಾಗಿವೆ. ಬೆಳಗಾವಿ, ಹಾವೇರಿ, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ.

ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಬಾರದು ಎಂಬ ಕಾನೂನು ಇದೆ. ಆದರೆ ಇದನ್ನು ಉಲ್ಲಂಘಿಸಿ ಹೆಚ್ಚಿನ ದರ ವಿಧಿಸಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.



Read more