Karnataka news paper

ಬ್ರಹ್ಮಾಂಡ ರಹಸ್ಯ ಭೇದಿಸುವ ವಿಶ್ವದ ಬೃಹತ್ ಬಲಶಾಲಿ ಟೆಲಿಸ್ಕೋಪ್‌ ‘ಜೇಮ್ಸ್‌ ವೆಬ್‌’ ಉಡಾವಣೆ


ಫ್ರೆಂಚ್‌ ಗಯಾನ: ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಭೇದಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿರುವ ವಿಶ್ವದ ಬೃಹತ್‌ ಹಾಗೂ ಬಲಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್‌ ‘ಜೇಮ್ಸ್‌ ವೆಬ್‌’ ಅನ್ನು ಶನಿವಾರ ಉಡಾವಣೆ ಮಾಡಲಾಗಿದೆ.

ದಕ್ಷಿಣ ಅಮೆರಿಕ ಕರಾವಳಿಯ ಫ್ರೆಂಚ್‌ ಗಯಾನ ದ್ವೀಪದಿಂದ ಟೆಲಿಸ್ಕೋಪ್‌ ಅನ್ನು ಹೊತ್ತ ಏರಿಯಾನೆ ರಾಕೆಟ್‌ ನಭಕ್ಕೆ ಹಾರಿತು. ಜೇಮ್ಸ್‌ ವೆಬ್‌ ಉಡಾವಣೆಯಾಗುತ್ತಲೇ ಸಂತಸ ಹಂಚಿಕೊಂಡ ನಾಸಾ, ‘ಸ್ಪೇಸ್‌ ಟೆಲಿಸ್ಕೋಪ್‌ ಜೇಮ್ಸ್‌ ವೆಬ್‌ಅನ್ನು ಉಡಾವಣೆಗೊಳಿಸಲಾಗಿದೆ. ಬ್ರಹ್ಮಾಂಡ ಸೃಷ್ಟಿಯ ಕುತೂಹಲಕಾರಿ ಅಂಶಗಳನ್ನು ಬಹಿರಂಗಗೊಳಿಸಲು ಇದು ನೆರವಾಗಲಿದ್ದು, ವಿಜ್ಞಾನದ ಬೆಳವಣಿಗೆ ಗತಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲಿದೆ’ ಎಂದು ಟ್ವೀಟ್‌ ಮಾಡಿದೆ.
ಸೋಮವಾರ ರಾತ್ರಿ ಆಗಸದಲ್ಲಿ ನಕ್ಷತ್ರಗಳ ಮೆರವಣಿಗೆ ಕಂಡಿರಾ?; ಏನಿದು ಅಚ್ಚರಿ ಅನ್ನೋರಿಗೆ ಇಲ್ಲಿದೆ ಉತ್ತರ
ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಅಂದರೆ, 16 ಲಕ್ಷ ಕಿಲೋ ಮೀಟರ್‌ ಸಂಚರಿಸಲಿರುವ ಟೆಲಿಸ್ಕೋಪ್‌, ಬ್ರಹ್ಮಾಂಡ ಸೃಷ್ಟಿಯ ಆರಂಭದಲ್ಲಿ ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳ ಉದಯ ಸೇರಿ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸುತ್ತದೆ. ಇದು 10 ವರ್ಷ ಕಾರ್ಯಾವಧಿ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸುಮಾರು 1,350 ವರ್ಷಗಳ ಹಿಂದಕ್ಕೆ ನಡೆದ ವಿಷಯಗಳ ಕುರಿತು ಸಹ ಅಧ್ಯಯನ ನಡೆಸಲಿರುವುದರಿಂದ ಜಗತ್ತಿನ ಕಣ್ಣುಗಳು ಜೇಮ್ಸ್‌ ವೆಬ್‌ನತ್ತ ನೆಟ್ಟಿವೆ.
ರಾಜ್ಯ ಕಂಡ ಬೆಳಕಿನ ವಿಸ್ಮಯಕ್ಕೆ ಕಾರಣ ‘ಎಲೋನ್‌ ಮಸ್ಕ್’!..ನೀವು ತಿಳಿಯದ ಮಾಹಿತಿ!
‘ಬ್ರಹ್ಮಾಂಡ ಸೃಷ್ಟಿಯ ಕುರಿತು ಕುತೂಹಲಕಾರಿ ಅಂಶಗಳನ್ನು ತಿಳಿಯಲು ಜೇಮ್ಸ್‌ ವೆಬ್‌ ಪ್ರಮುಖ ಅಸ್ತ್ರವಾಗಲಿದೆ. ನಾವು ಯಾರು? ನಮ್ಮ ಹಿನ್ನೆಲೆ ಏನು? ಸೃಷ್ಟಿ ಹೇಗಾಯಿತು? ಬಾಹ್ಯಾಕಾಶದಲ್ಲೂ ಏನೇನು ನಡೆಯಿತು ಎಂಬುದು ಸೇರಿ ಹತ್ತಾರು ವಿಷಯಗಳು ತಿಳಿಯಲಿವೆ’ ಎಂದು ನಾಸಾ ಹಿರಿಯ ಅಧಿಕಾರಿ ಬಿಲ್‌ ನೆಲ್ಸನ್‌ ಹೇಳಿರುವುದು ಸಹ ಟೆಲಿಸ್ಕೋಪ್‌ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ. ಜೇಮ್ಸ್‌ ವೆಬ್‌ ಉಡಾವಣೆಯು ನಾಸಾದ ಬಹು ವರ್ಷಗಳ ಕನಸಾಗಿದ್ದು, ಇದಕ್ಕಾಗಿ 10 ಶತಕೋಟಿ ಡಾಲರ್‌ ವ್ಯಯಿಸಿದೆ.



Read more