Karnataka news paper

ಹನಿಟ್ರ್ಯಾಪ್‌ ಮೂಲಕ ಕೃತ್ಯ: ಕೊಲೆಗೈದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಬೆಂಗಳೂರು: ಹನಿಟ್ರ್ಯಾಪ್‌ ಮೂಲಕ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆಗೈದಿದ್ದ ಇಬ್ಬರು ಅಪರಾಧಿಗಳಿಗೆ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿದೆ.

ಹೊಸದಿಲ್ಲಿ ಮೂಲದ 29 ವರ್ಷದ ಸಿದ್ದಾರ್ಥ್‌ ದಾಸ್‌ ಎಂಬಾತನನ್ನು ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಸಿಎಚ್‌ ನ್ಯಾಯಾಲಯ ಕಾಮಾಕ್ಷಿಪಾಳ್ಯದ ವಿನೋದ್‌ ಹಾಗೂ ಹೊಂಗಸಂದ್ರದ ರಾಘವೇಂದ್ರ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿದೆ. ಅಪರಾಧಿಗಳಿಗೆ ವಿಧಿಸಿರುವ ದಂಡ ಮೊತ್ತವಾದ ಒಂದು ಲಕ್ಷ ರೂ.ಗಳನ್ನು ಮೃತ ಸಿದ್ದಾರ್ಥ್‌ ತಂದೆ ಸುಧಾಮ ದಾಸ್‌ ಅವರಿಗೆ ನೀಡುವಂತೆ ತೀರ್ಪು ನೀಡಲಾಗಿದೆ.

ನೆಲಮಂಗಲ-ಆನೇಕಲ್‌ ರಸ್ತೆ ವಿಸ್ತರಣೆಗಾಗಿ 18 ಮರ ಕತ್ತರಿಸಲು ಅನುಮತಿ ನೀಡಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ?

ಹೊಸದಿಲ್ಲಿಯ ಲೈಟ್‌ ಕ್ರಾಫ್ಟ್‌ ಸಂಸ್ಥೆಯಲ್ಲಿ ಸಿದ್ದಾರ್ಥ್‌ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಕಂಪೆನಿ ಸೂಚನೆ ಮೇರೆಗೆ ಕೆಲಸದ ನಿಮಿತ್ತ ನಗರದ ಮಂತ್ರಿಮಾಲ್‌ಗೆ ಬಂದಿದ್ದ ಅವರು, ಶೇಷಾದ್ರಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಸಹೋದ್ಯೋಗಿ ಜತೆ ತಂಗಿದ್ದರು. 2010ರ ಮಾರ್ಚ್ 26ರಂದು ಸಂಜೆ ಸಿದ್ದಾರ್ಥ್‌ ದಾಸ್‌ ಹಾಗೂ ಆತನ ಸ್ನೇಹಿತ ಬಿ.ವಿ.ಕೆ ಅಯ್ಯಂಗಾರ್‌ ರಸ್ತೆಯ ಅಭಿನಯ ಟಾಕೀಸ್‌ ಮುಂದೆ ನಿಂತಿದ್ದಾಗ ಆರೋಪಿಗಳು ತಮ್ಮ ಪರಿಚಯ ಮಾಡಿಕೊಂಡು ಹುಡುಗಿ ಕಳುಹಿಸುವುದಾಗಿ ಆಸೆ ತೋರಿಸಿ ಜತೆಗೆ ಕರೆದೊಯ್ದಿದ್ದರು.

2022ರ ಅಂತ್ಯಕ್ಕೆ 37 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆ: ಟ್ರಾಫಿಕ್‌ ಜಾಮ್‌ ತಗ್ಗುವ ಸಾಧ್ಯತೆ

ನಗರದ ಅರಮನೆ ಮೈದಾನದ ಬಳಿ ಸಿದ್ದಾರ್ಥ್‌ ಹಾಗೂ ಆತನ ಸೇಹಿತನನ್ನು ಪ್ರತ್ಯೇಕಿಸಿದ ಆರೋಪಿಗಳು, ಸಿದ್ದಾರ್ಥ್‌ ಮೇಲೆ ಹಲ್ಲೆ ನಡೆಸಿ, ಎಟಿಎಂ ಕಾರ್ಡ್‌ ಹಾಗೂ ಪಿನ್‌ ನಂಬರ್‌ ಕಿತ್ತುಕೊಂಡಿದ್ದರು. ಆರೋಪಿಗಳಲ್ಲಿ ಒಬ್ಬ ಸಿದ್ದಾರ್ಥ್‌ ಸ್ನೇಹಿತನ ಜತೆಗೆ ಎಟಿಎಂಗೆ ತೆರಳಿ ಸೀಕ್ರೇಟ್‌ ಪಿನ್‌ ಖಚಿಪಡಿಸಿಕೊಂಡಿದ್ದ. ಬಳಿಕ, ಸಿದ್ದಾರ್ಥ್‌ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದ ಆರೋಪಿಗಳು, ಮೃತದೇಹದ ಮೇಲೆ ಸೌದೆ ಹಾಕಿ ಪೆಟ್ರೋಲ್‌ ಸುರಿದು ಸುಟ್ಟು ಹಾಕಿದ್ದರು. ನಂತರ ಸಿದ್ದಾರ್ಥ್‌ ಎಟಿಎಂ ಕಾರ್ಡ್‌ ಬಳಸಿ 73 ಸಾವಿರ ಹಣ ಡ್ರಾ ಮಾಡಿಕೊಂಡಿದ್ದರು. ಕೊಲೆ ಪ್ರಕರಣ ಸಂಬಂಧ ಶೇಷಾದ್ರಿಪುರ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರ ಸರಕಾರಿ ಅಭಿಯೋಜಕಿ ಕೆ. ಎಸ್‌ ವೀಣಾ ವಾದ ಮಂಡಿಸಿದ್ದರು.



Read more