Karnataka news paper

ಲಿಯೋನಾರ್ಡೋ ಡಿಕ್ಯಾಪ್ರಿಯೋ ಜೊತೆ ನಟಿಸುವ ಚಾನ್ಸ್ ಕೊಡಿಸುವೆ ಅಂತ ಜಾಕ್ವೆಲಿನ್‌ಗೆ ಪ್ರಾಮಿಸ್ ಮಾಡಿದ್ರಾ ಸುಖೇಶ್?


ಹೈಲೈಟ್ಸ್‌:

  • ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ ಸುಖೇಶ್ ಚಂದ್ರಶೇಖರ್
  • ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಒಡನಾಟ ಇಟ್ಟುಕೊಂಡಿದ್ದ ಸುಖೇಶ್ ಚಂದ್ರಶೇಖರ್
  • ಜಾಕ್ವೆಲಿನ್ ಫರ್ನಾಂಡಿಸ್‌ಗೆ ಹಾಲಿವುಡ್ ಚಿತ್ರದ ಆಫರ್ ಕೊಡಿಸುವುದಾಗಿ ಪ್ರಾಮಿಸ್ ಮಾಡಿದ್ದ ಸುಖೇಶ್ ಚಂದ್ರಶೇಖರ್

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಖೇಶ್ ಚಂದ್ರಶೇಖರ್ ಸಿಲುಕಿದ್ದಾರೆ. ಬಾಲಿವುಡ್ ನಟಿಯರಿಗೆ ದುಬಾರಿ ಉಡುಗೊರೆಗಳನ್ನು ಸುಖೇಶ್ ಚಂದ್ರಶೇಖರ್ ನೀಡಿರುವ ಬಗ್ಗೆ ಜಾರಿ ನಿರ್ದೇಶನಾಲಯ ಸದ್ಯ ತನಿಖೆ ನಡೆಸುತ್ತಿದೆ. ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿಗೆ ಸುಖೇಶ್ ಚಂದ್ರಶೇಖರ್ ಕಾಸ್ಟ್ಲಿ ಗಿಫ್ಟ್‌ಗಳನ್ನು ನೀಡಿದ್ದಾರೆ. ಅದರಲ್ಲೂ ಜಾಕ್ವೆಲಿನ್ ಫರ್ನಾಂಡಿಸ್‌ ಜೊತೆ ಆಪ್ತವಾಗಿದ್ದ ಸುಖೇಶ್ ಚಂದ್ರಶೇಖರ್ ಆಕೆಗೆ ಒಂದು ಪ್ರಾಮಿಸ್‌ಅನ್ನೂ ಮಾಡಿದ್ದರಂತೆ.

ವರದಿಯೊಂದರ ಪ್ರಕಾರ, ಜಾಕ್ವೆಲಿನ್ ಫರ್ನಾಂಡಿಸ್‌ಗೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಆಫರ್ ಕೊಡಿಸುವೆ ಎಂದು ಆರೋಪಿ ಸುಖೇಶ್ ಚಂದ್ರಶೇಖರ್ ಪ್ರಾಮಿಸ್ ಮಾಡಿದ್ದರು. ‘’ನನಗೆ ಹಾಲಿವುಡ್ ತಾರೆಯರ ಜೊತೆಗೆ ನಂಟಿದೆ. ಹೀಗಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಡಿಸುತ್ತೇನೆ. ಅದರಲ್ಲೂ ಜನಪ್ರಿಯ ನಟ ಲಿಯೋನಾರ್ಡೋ ಡಿಕ್ಯಾಪ್ರಿಯೋ ಜೊತೆ ನಟಿಸುವ ಚಾನ್ಸ್ ಕೊಡಿಸುವೆ’’ ಅಂತ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸುಖೇಶ್ ಚಂದ್ರಶೇಖರ್ ಆಶ್ವಾಸನೆ ನೀಡಿದ್ರಂತೆ.

ಜಾಕ್ವೆಲಿನ್, ನೋರಾ ಫತೇಹಿಗೆ ಸುಖೇಶ್ ಚಂದ್ರಶೇಖರ್ ನೀಡಿದ್ದ ದುಬಾರಿ ಉಡುಗೊರೆಗಳು ಮುಟ್ಟುಗೋಲು!

ಜಾರಿ ನಿರ್ದೇಶನಾಲಯದ ಮುಂದೆ ಜಾಕ್ವೆಲಿನ್ ಫರ್ನಾಂಡಿಸ್ ನೀಡಿದ ಹೇಳಿಕೆ ಏನು?
‘’ಫೆಬ್ರವರಿ 2017 ರಿಂದಲೂ ನನಗೆ ಸುಖೇಶ್ ಚಂದ್ರಶೇಖರ್ ಅವರ ಪರಿಚಯ ಇದೆ. ಆಗಸ್ಟ್ 2021 ರಲ್ಲಿ ಅವರನ್ನ ಅರೆಸ್ಟ್ ಮಾಡಲಾಯಿತು. ತಾನು ಸನ್ ಟಿವಿಯ ಓನರ್ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಸಂಬಂಧಿ ಎಂದು ನನ್ನೊಂದಿಗೆ ಪರಿಚಯ ಮಾಡಿಕೊಂಡಿದ್ದರು. ನನ್ನ ಸಹೋದರಿ ಸುಖೇಶ್ ಅವರಿಂದ 1,50,000 ಡಾಲರ್ ಸಾಲ ಪಡೆದಿದ್ದರು. ಆಸ್ಟ್ರೇಲಿಯಾದಲ್ಲಿರುವ ನನ್ನ ಸಹೋದರನ ಅಕೌಂಟ್‌ಗೆ ಸುಖೇಶ್ ಚಂದ್ರಶೇಖರ್ 15 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿದ್ದರು’’ ಎಂದು ಜಾರಿ ನಿರ್ದೇಶನಾಲಯದ ಮುಂದೆ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿಕೆ ನೀಡಿದ್ದರು.

ಬಹುಕೋಟಿ ರೂ. ವಂಚನೆ ಪ್ರಕರಣ: ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್‌ ಕಾಂಟ್ಯಾಕ್ಟ್‌ ಇದೆ ಎಂದ ಸುಕೇಶ್ ಚಂದ್ರಶೇಖರ್‌

ಬಾಲಿವುಡ್ ನಟಿಯರ ಜೊತೆ ಒಡನಾಟ
ಬಾಲಿವುಡ್ ನಟಿ ಕಮ್ ಡ್ಯಾನ್ಸರ್ ನೋರಾ ಫತೇಹಿ ಜೊತೆಗೂ ಸುಖೇಶ್ ಚಂದ್ರಶೇಖರ್ ಆತ್ಮೀಯವಾಗಿದ್ದಾರೆ. ನೋರಾ ಫತೇಹಿ ಅವರಿಗೂ ದುಬಾರಿ ಉಡುಗೊರೆಗಳನ್ನು ಸುಖೇಶ್ ಚಂದ್ರಶೇಖರ್ ನೀಡಿದ್ದರು. ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಅವರಿಗೆ ಸುಖೇಶ್ ಚಂದ್ರಶೇಖರ್ ನೀಡಿರುವ ದುಬಾರಿ ಉಡುಗೊರೆಗಳನ್ನು ಸದ್ಯದಲ್ಲೇ ಜಾರಿ ನಿರ್ದೇಶನಾಲಯ ತಮ್ಮ ವಶಕ್ಕೆ ಪಡೆದುಕೊಳ್ಳಲಿದೆ.

200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆಯಲ್ಲಿ ಭಾಗಿಯಾದ ನೋರಾ ಫತೇಹಿ

ನಟಿಯರಾದ ಶ್ರದ್ಧಾ ಕಪೂರ್, ಶಿಲ್ಪಾ ಶೆಟ್ಟಿ, ಹಾಗೂ ನಟ ಹರ್ಮನ್ ಭವೇಜಾ ಅವರ ಜೊತೆಗೂ ಒಡನಾಟ ಇತ್ತು ಎಂದು ತನಿಖೆ ವೇಳೆ ಸುಖೇಶ್ ಚಂದ್ರಶೇಖರ್ ಬಾಯ್ಬಿಟ್ಟಿದ್ದರು. ‘’ನನಗೆ ಹರ್ಮನ್ ಭವೇಜಾ ಅವರ ಪರಿಚಯವಿತ್ತು. ಅವರ ಮುಂದಿನ ಸಿನಿಮಾ ‘ಕ್ಯಾಪ್ಟನ್’ಗೆ ನಾನು ಸಹ ನಿರ್ಮಾಪಕ ಆಗಬೇಕಿತ್ತು. ಇನ್ನೂ, ರಾಜ್ ಕುಂದ್ರಾ ಅವರಿಗೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಅವರ ಜೊತೆಗೆ ನಾನು ಮಾತನಾಡಿದ್ದೆ’’ ಎಂದು ಜಾರಿ ನಿರ್ದೇಶನಾಲಯದ ಮುಂದೆ ಸುಖೇಶ್ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.



Read more