Karnataka news paper

ಉತ್ತರಾಖಂಡ್: ಬಿಜೆಪಿ ಓರ್ವ ಶಾಸಕ, ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ದಿಢೀರ್ ರಾಜೀನಾಮೆ, “ಕೈ” ಸೇರುವ ಸಾಧ್ಯತೆ


The New Indian Express

ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ. 

“ನನ್ನ ಕ್ಷೇತ್ರದ ಜನತೆಯ ಸೇವೆಗೆ ಹೋಲಿಸಿದರೆ ನನಗೆ ಕ್ಯಾಬಿನೆಟ್ ಸಚಿವ ಸ್ಥಾನ ಏನು ದೊಡ್ಡದಲ್ಲ, ಕೋಟ್ದ್ವಾರ್ ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನ್ನ ಬಹುದಿನಗಳ ಬೇಡಿಕೆಯಾಗಿದ್ದು, ಅದನ್ನು ನಿರ್ಲಕ್ಷ್ಯಿಸಲಾಗಿದೆ” ಎಂದು ತಮ್ಮ ರಾಜೀನಾಮೆಗೆ ಕಾರಣವಾಗಿರುವ ಅಸಮಾಧಾನವನ್ನು ಹರಕ್ ಸಿಂಗ್ ರಾವತ್ ಬಹಿರಂಗಪಡಿಸಿದ್ದಾರೆ. 

ಆದರೆ ಬಿಜೆಪಿ ಮಾತ್ರ ಅಸಮಾಧಾನವನ್ನು ಶೀಘ್ರವೇ ಪರಿಹರಿಸುವುದಾಗಿ ಹೇಳಿದೆ. ಈ ವರದಿ ಪ್ರಕಟವಾಗುವವರೆಗೂ ಉತ್ತರಾಖಂಡ್ ನ ರಾಜ್ಯಪಾಲರು ಯಾವುದೇ ರಾಜೀನಾಮೆಯನ್ನೂ ಅಂಗೀಕರಿಸಿಲ್ಲ. 

ಹರಕ್ ಸಿಂಗ್ ರಾವತ್ ಡಿ.23 ರಂದು ದೆಹಲಿಯಲ್ಲಿದ್ದರು ಅವರು ಹರಿದ್ವಾರದಲ್ಲಿ ಮಾಜಿ ಸಿಎಂ ಹರೀಶ್ ರಾವತ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಕೆಲವು ಮೂಲಗಳು ಹೇಳಿದರೆ, ಬಿಜೆಪಿ ಮಾತ್ರ ಇದು ಕೇವಲ ವದಂತಿಯಷ್ಟೇ ಎಂದು ಸುದ್ದಿಯನ್ನು ಅಲ್ಲಗಳೆದಿದೆ. ಅಷ್ಟೇ ಅಲ್ಲದೇ ಯಾವುದೇ ವಿಷಯವಿರಲಿ ಅದನ್ನು ಶೀಘ್ರವೇ ಬಗೆಹರಿಸುವುದಾಗಿ ತಿಳಿಸಿದೆ. 

“ಸಚಿವ ಸ್ಥಾನದಿಂದಾಗಲೀ, ಪಕ್ಷದಿಂದಾಗಲೀ ಯಾರೂ ರಾಜೀನಾಮೆ ನೀಡುತ್ತಿಲ್ಲ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ನಡೆಯುತ್ತಿದ್ದಾಗಲೇ ಅರ್ಧದಲ್ಲಿ ಆಕ್ರೋಶಗೊಂಡ ಹರಕ್ ಸಿಂಗ್ ರಾವತ್ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು. ಬಿಜೆಪಿಯ ಮತ್ತೋರ್ವ ಶಾಸಕ ಉಮೇಶ್ ಶರ್ಮ ಸಹ ರಾಜೀನಾಮೆ ನೀಡಾಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 



Read more