Karnataka news paper

ಅಥೆನ್ಸ್‌ | ವಲಸಿಗರಿದ್ದ ದೋಣಿಗಳ ಸರಣಿ ಅಪಘಾತ; ಕನಿಷ್ಠ 30 ಸಾವು


Prajavani

ಅಥೆನ್ಸ್‌: ವಲಸಿಗರಿದ್ದ ದೋಣಿಗಳ ನಡುವೆ ಸರಣಿ ಅಪಘಾತದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಗ್ರೀಸ್‌ನ ಕರಾವಳಿ ಭದ್ರತಾ ಸಿಬ್ಬಂದಿಯು ಬದುಕುಳಿದವರಿಗಾಗಿ ಏಜಿಯನ್‌ ಸಮುದ್ರದಲ್ಲಿ ಶೋಧ ನಡೆಸಿದೆ.

ಶುಕ್ರವಾರ ರಾತ್ರಿ ಭದ್ರತಾ ಸಿಬ್ಬಂದಿ ಮಗು, ಮೂವರು ಮಹಿಳೆಯರದು ಸೇರಿದಂತೆ 16 ಶವಗಳನ್ನು ಗುರುತಿಸಿದ್ದಾರೆ. ಮಗುಚಿಕೊಂಡಿದ್ದ ದೋಣಿಯಲ್ಲಿದ್ದ 63 ಜನರನ್ನು ಇದುವರೆಗೂ ರಕ್ಷಿಸಲಾಗಿದೆ. ಬದುಕಿ ಉಳಿದವರ ಪ್ರಕಾರ, ಇಟಲಿ ಮೂಲದ ಬೃಹತ್‌ ದೋಣಿಯಲ್ಲಿ ಕನಿಷ್ಠ 80 ಜನರಿದ್ದರು. 

ಟರ್ಕಿಯ ಕರಾವಳಿ ವ್ಯಾಪ್ತಿಯ ಸೆಸ್ಮೆ ಮತ್ತು ಬೋಡ್ರಮ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಳ್ಳಸಾಗಣೆದಾರರು, ಅಡ್ಡದಾರಿ ಮೂಲಕ ವಲಸಿಗರನ್ನು ದೋಣಿಯಲ್ಲಿ ಇಟಲಿಗೆ ಕಳುಹಿಸಲು ಒತ್ತು ನೀಡುತ್ತಾರೆ.

ಕಳೆದ ಬುಧವಾರದಿಂದ ಮೂರು ದೋಣಿ ಅವಘಡಗಳು ಸಂಭವಿಸಿವೆ. ಶೋಧ ಕಾರ್ಯದಲ್ಲಿ ಕರಾವಳಿ ಭದ್ರತೆಯ ಮೂರು ಗಸ್ತುಪಡೆ, ಖಾಸಗಿದೋಣಿಗಳು ಮತ್ತು ಕರಾವಳಿ ಗಸ್ತು ವಿಮಾನದ ಸೇವೆಯನ್ನು ಬಳಸಲಾಗಿದೆ.



Read more from source